ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ : ಕೊರಿಯಾ ಜೋಡಿಯನ್ನು ಬಗ್ಗು ಬಡಿದು ಫೈನಲ್ ಪ್ರವೇಶಿಸಿದ ಭಾರತ

Shuttlers Satwiksairaj And Chirag Beat Korean Pair To Reach French Open Mens Doubles Final

ಪ್ಯಾರಿಸ್‌ನಲ್ಲಿ ನಡೆದ ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ಡಬಲ್ಸ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೊರಿಯಾದ ಜೋಡಿಯಾದ ಚೋಯ್ ಸೋಲ್ ಗ್ಯು ಮತ್ತು ಕಿಮ್ ವಾನ್ ಹೊ ವಿರುದ್ಧ ನೇರ ಸೆಟ್‌ಗಳಿಂದ ಜಯಗಳಿಸಿ ಫೈನಲ್‌ಗೆ ತಲುಪಿದ್ದಾರೆ.

45 ನಿಮಿಷಗಳ ಕಾಲ ನಡೆದ ಸೆಮಿಫೈನಲ್‌ನಲ್ಲಿ ವಿಶ್ವದ 8 ನೇ ಶ್ರೇಯಾಂಕದ ಭಾರತೀಯ ಜೋಡಿಯು ಆಕ್ರಮಣಕಾರಿ ಆಟವಾಡಿತು. 18 ನೇ ಶ್ರೇಯಾಂಕಿತ ಕೊರಿಯಾದ ಜೋಡಿಯನ್ನು ಮೀರಿಸಲು ಅತ್ಯುತ್ತಮ ಆಟವಾಡಿದರು. ಸೆಮಿಫೈನಲ್ ಪಂದ್ಯದಲ್ಲಿ ಕೊರಿಯಾ ಜೋಡಿ ವಿರುದ್ಧ 21-18 21-14 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದ್ದಾರೆ.

ನನ್ನ ಜೀವನದಲ್ಲೇ ಇಂತ ಇನ್ನಿಂಗ್ಸ್ ನೋಡಿಲ್ಲ ಎಂದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ನನ್ನ ಜೀವನದಲ್ಲೇ ಇಂತ ಇನ್ನಿಂಗ್ಸ್ ನೋಡಿಲ್ಲ ಎಂದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್

ಭಾರತೀಯ ಜೋಡಿ, ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ ಇಂಡಿಯಾ ಓಪನ್ ಸೂಪರ್ 500 ಪಂದ್ಯಾವಳಿಯನ್ನು ಗೆದ್ದು 2022 ರಲ್ಲಿ ಬ್ಯಾಟ್ಮಿಂಟನ್ ವರ್ಲ್ಡ್‌ ಫೆಡರೇಷನ್ (BWF) ವಿಶ್ವ ಪ್ರವಾಸದ ಈವೆಂಟ್‌ನ ಎರಡನೇ ಫೈನಲ್ ತಲುಪಿತು.

ಆಗಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾತ್ವಿಕ್ ಮತ್ತು ಚಿರಾಗ್, ಫೈನಲ್‌ನಲ್ಲಿ ಇಂಗ್ಲೆಂಡ್‌ನ ಬೆನ್ ಲೇನ್ ಮತ್ತು ಸೀನ್ ವೆಂಡಿ ಮತ್ತು ಚೈನೀಸ್ ತೈಪೆಯ ಲು ಚಿಂಗ್ ಯಾವೋ ಮತ್ತು ಯಾಂಗ್ ಪೊ ಹಾನ್ ನಡುವಿನ ಸೆಮಿಫೈನಲ್‌ ವಿಜೇತರ ಜೊತೆ ಸೆಣೆಸಲಿದ್ದಾರೆ.

Shuttlers Satwiksairaj And Chirag Beat Korean Pair To Reach French Open Mens Doubles Final

ಭಾರತದ ಜೋಡಿಯ ಅಬ್ಬರಕ್ಕೆ ಶರಣಾದ ಕೊರಿಯಾ

ಅವರು ಹಿಂದೆಂದೂ ಆಡದ ಎದುರಾಳಿಗಳ ವಿರುದ್ಧ ಅತ್ಯುತ್ತಮವಾಗಿ ಪ್ರದರ್ಶನ ನೀಡಿದರು. ಚಿರಾಗ್ ಮುಂಭಾಗದಲ್ಲಿ ರಕ್ಷಣಾತ್ಮಕವಾಗಿ ಆಡಿದರೆ, ಸಾತ್ವಿಕ್‌ ಅಬ್ಬರದ ಸ್ಮ್ಯಾಷ್‌ಗಳನ್ನು ಹೊಡೆದರು. 2019 ರ ಆವೃತ್ತಿಯ ರನ್ನರ್ ಅಪ್ ಜೋಡಿಯಾದ ಸಾತ್ವಿಕ್ ಮತ್ತು ಚಿರಾಗ್ ಮೊದಲಿನಿಂದಲೂ ಆಟದ ಮೇಲೆ ನಿಯಂತ್ರಣ ಸಾಧಿಸಿದ್ದರು.

ಮೊದಲ ಸುತ್ತಿನಲ್ಲಿ 2-0 ಅಂತರದಲ್ಲಿ ಭಾರತ ಮುನ್ನಡೆ ಸಾಧಿಸಿದರು, ಆದರೆ ಕೊರಿಯನ್ನರು 7-7ರಲ್ಲಿ ಅಂಕಗಳನ್ನು ಸಮಬಲಗೊಳಿಸಿದರು. ಸಾತ್ವಿಕ್ ಮತ್ತು ಚಿರಾಗ್ ತಿರುಗೇಟು ನೀಡುವ ಮೂಲಕ ನಾಲ್ಕು ಅಂಕಗಳ ಮುನ್ನಡೆ ಸಾಧಿಸಿದರು.

ವಿರಾಮದ ನಂತರ, ಕೊರಿಯನ್ನರು ಅಂಕಗಳನ್ನು ಗಳಿಸಲು ಯತ್ನಿಸಿದರು. ಶೀಘ್ರದಲ್ಲೇ ಅವರು 16-13 ಮುನ್ನಡೆ ಸಾಧಿಸಿದರು, ಚಿರಾಗ್ ಪಾಯಿಂಟ್‌ ಗಳಿಸುವ ಮೂಲಕ ಮತ್ತೆ ಭಾರತ ಮುನ್ನಡೆ ಸಾಧಿಸಿತು. ನಂತರ ಪಂದ್ಯ 18-19 ಅಂಕಗಳೊಂದಿಗೆ ರೋಚಕವಾಯಿತು. ಆದರೆ ಚೋಯ್ ತಪ್ಪುಗಳನ್ನು ಮಾಡುವ ಮೂಲಕ ಭಾರತಕ್ಕೆ ಎರಡು ಸುಲಭದ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟರು. ನಂತರ ಚಿರಾಗ್ ನಿಖರವಾದ ಸ್ಮ್ಯಾಶ್‌ನೊಂದಿಗೆ ಆರಂಭಿಕ ಆಟವನ್ನು ಗೆದ್ದರು.

ಎರಡನೇ ಗೇಮ್‌ನಲ್ಲಿ ಕೂಡ ಸಾಕಷ್ಟು ಹಣಾಹಣಿ ನಡೆಯಿತು. ಭಾರತೀಯ ತಂಡ ಆಕ್ರಮಣಕಾರಿ ಆಟವನ್ನು ಮುಂದುವರೆಸಿತು. ಆರಂಭದಲ್ಲಿ ಭಾರತ ಮುನ್ನಡೆ ಸಾಧಿಸಿದರು, ಕೊರಿಯನ್ನರು ಉತ್ತಮ ಹೋರಾಟ ನಡೆಸಿದರು.

ಆದರೆ, ನಂತರ ಭಾರತದ ಆಟದ ಮುಂದೆ ಕೊರಿಯನ್ನರು ಹಿನ್ನಡೆ ಅನುಭವಿಸಿದರು. ಅಂತಿಮವಾಗಿ ಭಾರತದ ಜೋಡಿ 21-14 ಪಾಯಿಂಟ್ಸ್‌ಗಳಿಂದ ಗೆಲುವು ಸಾಧಿಸಿದರು.

Story first published: Saturday, October 29, 2022, 20:05 [IST]
Other articles published on Oct 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X