ಇಂದಿರಾನಗರ ಬ್ಯಾಡ್ಮಿಂಟನ್ ಲೀಗ್ ಗೆ ಭರದ ಸಿದ್ಧತೆ

Posted By:

ಬೆಂಗಳೂರು, ಸೆಪ್ಟೆಂಬರ್ 13 : ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸಿರುವ ಇಂದಿರಾನಗರ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯ ಸಿದ್ಧತೆಗಳು ಭರದಿಂದ ಸಾಗಿವೆ.

ಇದೇ ಸೆಪ್ಟೆಂಬರ್ 16ರಂದು ಇಂದಿರಾನಗರ ಬ್ಯಾಡ್ಮಿಂಟನ್ ಟೂರ್ನಿಯ ಟ್ರೋಫಿ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಸೆಪ್ಟೆಂಬರ್ 23ರಿಂದ ಮೂರು ದಿನಗಳ ಕಾಲ ರೌಂಡ್ ರಾಬಿನ್ ಮಾದರಿಯಲ್ಲಿ ಬೇರೆ-ಬೇರೆ ಏಳು ವಿಭಾಗದಲ್ಲಿ ಈ ಲೀಗ್ ನಡೆಯಲಿದೆ.

Stage set for Indiranagar Badminton League

ಈ ಟೂರ್ನಿಯಲ್ಲಿ ನಾಲ್ಜು ತಂಡಗಳು ಪಾಲ್ಗೊಳ್ಳಲಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯಲ್ಲಿ ಇಂದಿರಾನಗರ ಬ್ಯಾಡ್ಮಿಂಟನ್ ಲೀಗ್ ಗೆ ಆಟಗಾರರ ಹರಾಜು ಪ್ರಕ್ರಿಯೆ ಸೆಪ್ಟೆಂಬರ್ 03ರಂದು ಮುಕ್ತಾಯಗೊಂಡಿದೆ. ಟೀಂ ವೆಂಟರ್ ಸೇರಿದಂತೆ ನಾಲ್ಕು ತಂಡಗಳು ತಲಾ 29 ಜನರನ್ನು ಒಳಗೊಂಡಿರುತ್ತವೆ.

ಈ ಲೀಗ್ ನಲ್ಲಿ ಪಾಲ್ಗೊಳ್ಳಲಿರುವ ತಂಡಗಳು: IIHT ಮೇವರಿಕ್ಸ್, SVM ಟರ್ಬೊಸ್, JP ಟೊರ್ನಾಡೋಸ್ ಮತ್ತು ಗೋಲ್ಡನ್ ಪ್ಯಾಂಥರ್ಸ್.

Story first published: Wednesday, September 13, 2017, 13:48 [IST]
Other articles published on Sep 13, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ