ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ ಹರಾಜು ಬೆಂಚಿಗೊರಗಿ ನಿಂತವನ ಹಿಂದೊಂದು ಕುತೂಹಲ ಕತೆಯಿದೆ!

2019 IPL Auction: Who is Hugh Edmeades- the new IPL auctioneer

ಜೈಪುರ್, ಡಿಸೆಂಬರ್ 18: ತೀವ್ರ ಕುತೂಹಲ ಮೂಡಿಸಿದ ಐಪಿಎಲ್ 2019ರ ಆಟಗಾರರ ಹರಾಜು ಪ್ರಕ್ರಿಯೆ ಜೈಪುರದಲ್ಲಿ ನಡೆದಿದೆ/ನಡೆಯುತ್ತಿದೆ. ಕಳೆದ ಬಾರಿ ಹರಾಜು ನಡೆಸಿಕೊಟ್ಟವರ ಬದಲಿಗೆ ಈ ಸಾರಿ ಹೊಸಬರು ಕಾಣಿಸಿಕೊಂಡಿದ್ದಾರೆ. 12ರ ಆವೃತ್ತಿಯ ಐಪಿಎಲ್‌ ಹರಾಜು ವೇಳೆ ಬೆಂಚಿಗೊರಗಿ ನಿಂತಿದ್ದ ಹಗ್ ಎಡ್ಮೆಡ್ಸ್ ಅವರ ಹಿಂದೊಂದು ಕುತೂಹಲಕಾರಿ ಕತೆಯಿದೆ.

'ಐಪಿಎಲ್‌2019ರ ಆಟಗಾರರ ಹರಾಜು' ವಿಶೇಷ ಪುಟಕ್ಕಾಗಿ ಭೇಟಿಕೊಡಿ

ಈ ಬಾರಿಯ ಐಪಿಎಲ್ ಹರಾಜು, ಕ್ರಿಕೆಟ್‌ಗೆ ಹೊರತಾಗಿರುವ ವ್ಯಕ್ತಿಗೆ ಸಂಬಂಧಿಸಿದ್ದಷ್ಟೇ ಅಲ್ಲ ಜೊತೆಗೆ ಭಾರತದಲ್ಲಿ ಹರಾಜು ವಿಚಾರಕ್ಕಾಗಿಯೇ ಪ್ರಚಲಿತರಾಗಿದ್ದ ರಿಚರ್ಡ್ ಮ್ಯಾಡ್ಲೆ ಅವರನ್ನು ಹೊರಗೆ ನಿಲ್ಲುವಂತೆ ಮಾಡಿತು. ಈ ಬಾರಿ ಹರಾಜು ಜವಾಬ್ದಾರಿ ಬ್ರಿಟನ್‌ನ ಹಗ್ ಎಡ್ಮೆಡ್ಸ್ ಅವರ ಹೆಗಲ ಮೇಲಿತ್ತು.'

ಐಪಿಎಲ್ 12 : ಬಿಕರಿಯಾಗದೆ ಉಳಿದ ಟೆಸ್ಟ್ ಸ್ಟಾರ್ ಪೂಜಾರಾ ಮತ್ತಿತರರುಐಪಿಎಲ್ 12 : ಬಿಕರಿಯಾಗದೆ ಉಳಿದ ಟೆಸ್ಟ್ ಸ್ಟಾರ್ ಪೂಜಾರಾ ಮತ್ತಿತರರು

ಮ್ಯಾಡ್ಲೆ ಅವರು ಸುಮಾರು 10 ವರ್ಷಗಳಿಂದಲೂ ಐಪಿಎಲ್ ಹರಾಜು ನಡೆಸಿದ ಖ್ಯಾತಿಯಿದ್ದವರು. ಆದರೆ ಈ ಬಾರಿ ಬಿಸಿಸಿಐ, ಹರಾಜುದಾರರಾಗಿ ಮ್ಯಾಡ್ಲೆ ಬದಲಿಗೆ ಎಡ್ಮೆಡ್ಸ್ ಅವರನ್ನು ಹೆಸರಿಸಿತ್ತು. ಈ ಬದಲಾವಣೆ ಕ್ರಿಕೆಟ್‌ ಬಗ್ಗೆ ಅರಿವಿರುವ ಹಲವಾರು ಮಂದಿಗೆ ಅಚ್ಚರಿ ಮೂಡಿಸಿತ್ತು ಕೂಡ.

ಕ್ರಿಕೆಟ್‌ಗೆ ಸಂಬಂಧಿಸಿದವರಲ್ಲ

ಕ್ರಿಕೆಟ್‌ಗೆ ಸಂಬಂಧಿಸಿದವರಲ್ಲ

ಹಗ್ ಎಡ್ಮೆಡ್ಸ್ ಅವರು ಕ್ರಿಕೆಟ್‌ಗೆ ಸಂಬಂಧಿಸಿದ ವ್ಯಕ್ತಿಯಲ್ಲ. ಈ ಹಿಂದೆ ಕ್ರಿಕೆಟ್‌ಗೆ ಸಂಬಂಧಿಸಿದ ಹರಾಜು ನಡೆಸಿಕೊಟ್ಟ ಅನುಭವವೂ ಅವರಿಗಿಲ್ಲ. ಅದರೆ ಅವರು ಅತ್ಯುತ್ತಮ ಹರಾಜುದಾರರು ಎನ್ನುವುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ಅವರು ಹಿಂದೆ ಬ್ರಿಟನ್‌ನ ಹರಾಜು ಕಂಪನಿ 'ಕ್ರಿಸ್ಟಿ'ಯಲ್ಲಿ ಸೈ ಎನಿಸಿಕೊಂಡಿದ್ದರು.

38 ವರ್ಷಗಳ ಅನುಭವ

38 ವರ್ಷಗಳ ಅನುಭವ

ಕ್ರಿಸ್ಟಿ ಕಂಪನಿಯಲ್ಲಿ ಸುಮಾರು 38 ವರ್ಷಗಳ ಕಾಲ ಹರಾಜುಗಾರನಾಗಿ ಕಾರ್ಯ ನಿರ್ವಹಿಸಿದ್ದ ಎಡ್ಮೆಡ್ಸ್ 1984ರಲ್ಲಿ ವೃತ್ತಿಗಿಳಿದಿದ್ದರು. 2016ರಲ್ಲಿ ಕ್ರಿಸ್ಟಿ ಕಂಪನಿಯಿಂದ ಹೊರ ಬಂದಿರುವ ಎಡ್ಮೆಡ್ಸ್ ಅವರಿಗೀಗ 60ರ ಹರೆಯ. ಈಗವರು ಸ್ವತಂತ್ರವಾಗಿ ಹರಾಜುಗಾರನಾಗಿ ಪಾಲ್ಗೊಳ್ಳುತ್ತಿದ್ದರು. (ಚಿತ್ರದಲ್ಲಿ ರಿಚರ್ಡ್ ಮ್ಯಾಡ್ಲೆ)

ದಾಖಲೆ ಹರಾಜು

ದಾಖಲೆ ಹರಾಜು

30 ವರ್ಷಗಳ ಸುದೀರ್ಘ ಕಾಲ ಹರಾಜುಗಾರನಾಗಿ ದುಡಿದ ಎಡ್ಮೆಡ್ಸ್ ಸುಮಾರು 2,300 ಹರಾಜು ಪ್ರಕ್ರಿಯೆಗಳನ್ನು ನಡೆಸಿಕೊಟ್ಟಿದ್ದಾರೆ. ಈ ವೇಳೆ 2.2 ಬಿಲಿಯನ್ ಪೌಂಡ್ಸ್ ಗೆ ಹರಾಜು ನಡೆಸಿದ್ದು ವಿಶ್ವದ ಅತ್ಯಧಿಕ ಮೊತ್ತವಾಗಿ ಗುರುತಿಸಿಕೊಂಡಿದೆ. ಕ್ರಿಸ್ಟಿ ಕಂಪನಿಯಲ್ಲಿದ್ದಾಗ ಎಡ್ಮೆಡ್ಸ್ ಈ ಸಾಧನೆಗೆ ಗಮನ ಸೆಳೆದಿದ್ದರು. ಈಗ ಇವರು ಚಾರಿಟಿ ಹರಾಜುಗಾರನಾಗಿ ಖ್ಯಾತಿ ಹೊಂದಿದ್ದಾರೆ.

ವಿಭಿನ್ನ ಹರಾಜು

ವಿಭಿನ್ನ ಹರಾಜು

'ಇದು ನನ್ನ ಪಾಲಿಗೆ ಕೊಂಚ ವಿಭಿನ್ನ ಹರಾಜು. ಆದರೆ ನನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಉತ್ತಮ ರೀತಿಯಲ್ಲಿ ಹರಾಜು ನಡೆಸಿಕೊಡುತ್ತೇನೆ. ಇದರಿಂದ ನನಗೇ ಖ್ಯಾತಿ ಎಂದು ಭಾವಿಸುತ್ತ ಸ್ನೇಹಪರವಾಗಿ ಹರಾಜು ನಡೆಸಿಕೊಡುತ್ತೇನೆ' ಎಂದು ಅನುಭವಿ ಹರಾಜುಗಾರ ಎಡ್ಮೆಡ್ಸ್ ಹೇಳಿಕೊಂಡಿದ್ದರು. ಹಾಗೇ ಚಂದವಾಗಿ ನಡೆಸಿಕೊಟ್ಟರು ಕೂಡ.

Story first published: Tuesday, December 18, 2018, 18:13 [IST]
Other articles published on Dec 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X