ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಕಳೆದುಕೊಂಡ ಭಾರತ

By Mahesh
2nd Test: Ngidi shines on debut as clinical South Africa outclass India by 135 runs, claim series

ಸೆಂಚುರಿಯನ್, ಜನವರಿ 17 : ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾಕ್ಕೆ 287ರನ್ ಟಾರ್ಗೆಟ್ ಪಡೆದಿದ್ದ ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 151 ಸ್ಕೋರಿಗೆ ಆಲೌಟ್ ಆಗಿದೆ.

ವೇಗಿ ಮೊಹಮ್ಮದ್ ಶಮಿ ಅವರ ಉತ್ತಮ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು 258ರನ್ನಿಗೆ ನಿಯಂತ್ರಿಸಿದ ಭಾರತ ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿದಿತ್ತು.

ಸ್ಕೋರ್ ಕಾರ್ಡ್

ಆದರೆ, ನಾಲ್ಕನೇ ದಿನದ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡಿದ್ದ ಕೊಹ್ಲಿ ಪಡೆ ಮತ್ತೆ ಚೇತರಿಕೆ ಕಾಣಲಿಲ್ಲ. 50.2 ಓವರ್ ಗಳಲ್ಲಿ 151ರನ್ ಗಳಿಸಿ ಸರ್ವಪತನ ಕಂಡಿತು. ಭಾರತ ಪರ ರೋಹಿತ್ ಶರ್ಮ 47ರನ್ ಗಳಿಸಿದರೆ, ಶಮಿ 24 ಎಸೆತಗಳಲ್ಲಿ 28ರನ್ ಗಳಿಸಿ ಕೊಂಚ ಪ್ರತಿರೋಧ ಒಡ್ಡಿದರು.

ದಕ್ಷಿಣ ಆಫ್ರಿಕಾ ಪರ ಚೊಚ್ಚಲ ಪಂದ್ಯವಾಡುತ್ತಿರುವ ಲುಂಗಿ ಗಿಡಿ ಅವರು 12.2 ಓವರ್ ಗಳಲ್ಲಿ 39ರನ್ನಿತ್ತು 6 ವಿಕೆಟ್ ಕಬಳಿಸಿ ಅದ್ಭುತ ಪ್ರದರ್ಶನ ನೀಡಿದರು.

21ನೇ ಶತಕ ಗಳಿಸಿ, ವಿರಾಟ್ ಕೊಹ್ಲಿ ಮುರಿದ ದಾಖಲೆಗಳ ಪಟ್ಟಿ21ನೇ ಶತಕ ಗಳಿಸಿ, ವಿರಾಟ್ ಕೊಹ್ಲಿ ಮುರಿದ ದಾಖಲೆಗಳ ಪಟ್ಟಿ

ಐದನೇ ದಿನದ ಆರಂಭದಲ್ಲಿ ಚೇತೇಶ್ವರ್ ಪೂಜಾರಾ ಅಜೇಯ 11ರನ್ ಹಾಗೂ ಪಾರ್ಥೀವ್ ಪಟೇಲ್ ಅಜೇಯ 05 ನೊಂದಿಗೆ ಕಣಕ್ಕಿಳಿದರು. ಕೊನೆ ದಿನದಲ್ಲಿ ಗೆಲ್ಲಲು 252ರನ್ ಗಳಿಸಬೇಕಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ 1910ರಲ್ಲಿ ಇಂಗ್ಲೆಂಡ್ ತಂಡವು ಅಂತಿಮ ದಿನದಂದು 214ರನ್ ಗಳಿಸಿದ್ದು ಬಿಟ್ಟರೆ, 250ರನ್ ಚೇಸ್ ಮಾಡಿದ ಉದಾಹರಣೆಗಳಿಲ್ಲ. ಈ ಸೋಲಿನೊಂದಿಗೆ ವಿರಾಟ್ ಕೊಹ್ಲಿ ಅವರು 9 ಟೆಸ್ಟ್ ಸರಣಿ ಜಯದ ಬಳಿಕ ಮೊದಲ ಸರಣಿ ಸೋಲು ಕಂಡಿದ್ದಾರೆ.

Story first published: Wednesday, January 17, 2018, 16:31 [IST]
Other articles published on Jan 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X