ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನದಲ್ಲಿ 264 : ರೋಹಿತ್ ಶರ್ಮಾ ದಾಖಲೆ ಮುರಿಯುವ ಸಾಧ್ಯತೆಯಿರುವ 5 ಆಟಗಾರರು

5 Batsmen Who Can Break Rohit Sharma’s Record Of Highest Individual Score In Odis

ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಏಕದಿನ ಕಂಡ ಅದ್ಭುತ ಆಟಗಾರ. ಸೀಮಿತ ಓವರ್‌ಗಳಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾ ಪಾಲಿನ ಆಪತ್ಭಾಂಧವನಾಗಿದ್ದಾರೆ. ದಾಖಲೆಗಳ ಮೇಲೆ ದಾಖಲೆಯನ್ನು ಮಾಡಿರುವ ರೋಹಿತ್ ಶರ್ಮಾರ ಅದೊಂದು ದಾಖಲೆಯನ್ನು ಮಾತ್ರ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವೇ ಇಲ್ಲವೇನೋ ಅನಿಸುತ್ತಿದೆ.

ಏಕದಿನದಲ್ಲಿ ರೋಹಿತ್ ಶರ್ಮಾ ಒಂದಲ್ಲ ಎರಡಲ್ಲ ಮೂರು ಶತಕಗಳನ್ನು ದಾಖಲಿಸಿದ್ದಾರೆ. ಕೊಲ್ಕತ್ತಾದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್ ದ್ವಿಶತಕವನ್ನು ಸಿಡಿಸಿದ್ದು ಮಾತ್ರವಲ್ಲ 264 ರನ್ ಚಚ್ಚಿದ್ದರು.

ಐಪಿಎಲ್ 2020: ಈ ಸೀಸನ್‌ನಲ್ಲಿ ಕೊಹ್ಲಿ ಮುರಿಯಬಲ್ಲ 4 ದಾಖಲೆಗಳು!ಐಪಿಎಲ್ 2020: ಈ ಸೀಸನ್‌ನಲ್ಲಿ ಕೊಹ್ಲಿ ಮುರಿಯಬಲ್ಲ 4 ದಾಖಲೆಗಳು!

ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ದಾಖಲಾಗಿರುವ ಅತ್ಯಧಿಕ ಸ್ಕೋರ್ ಇದಾಗಿದ್ದು ಈ ದಾಖಲೆಯನ್ನು ಯಾರಿಂದಲೂ ಸಾಧ್ಯವೇ ಇಲ್ಲ ಎನ್ನಲಾಗ್ತಿದೆ. ಆದರೆ ದಾಖಲೆಗಳಿರುವುದೇ ಮುರಿಯುವುದಕ್ಕಾಗಿ ಎಂಬ ಮಾತು ಕ್ರಿಕೆಟ್ ಲೋಕದಲ್ಲಿ ಜನಪ್ರಿಯ. ಹೀಗಾಗಿ ಸದ್ಯ ಆಡುತ್ತಿರುವ ಆಟಗಾರರಲ್ಲಿ ಯಾರಿಗೆ ಈ ದಾಖಲೆಯನ್ನು ಮುರಿಯುವ ಸಾಮರ್ಥ್ಯವಿದೆ ಎಂಬುದನ್ನು ಮುಂದೆ ಓದಿ

ನ್ಯೂಜಿಲೆಂಡ್ ಕ್ರಿಕೆಟಿಗ

ನ್ಯೂಜಿಲೆಂಡ್ ಕ್ರಿಕೆಟಿಗ

ನ್ಯೂಜಿಲೆಂಡ್ ಕ್ರಿಕೆಟ್‌ನ ಸ್ಫೋಟಕ ಆಟಗಾರ ಮಾರ್ಟಿನ್ ರೋಹಿತ್ ಶರ್ಮಾ ದಾಖಲೆ ಮುರಿಯುವ ಸಾಮರ್ಥ್ಯವನ್ನು ಹೊಂದಿರುವ ಆಟಗಾರ. ಈಗಾಗಲೆ ಮಾರ್ಟಿನ್ ಗಪ್ಟಿಲ್ ಒಂದು ಸ್ಪೋಟಕದ ದ್ವಿಶತಕವನ್ನು ಗಳಿಸಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಗಪ್ಟಿಲ್ ವೆಸ್ಟ್ ಇಂಡೀಸ್ ವಿರುದ್ಧ 237 ರನ್ ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಇದು ಅತಿ ಹೆಚ್ಚಿನ ವೈಯಕ್ತಿಕ ಸ್ಕೋರ್ ಆಗಿದೆ. ಅದಕ್ಕೂ ಮುನ್ನ ಗಪ್ಟಿಲ್ 2013ರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಜೇಯ 189 ರನ್ ಗಳಿಸಿದ್ದರು. ಈ ಮೂಲಕ ತಾನೊಬ್ಬ ಎಂತಾ ಆಟಗಾರ ಎಂಬುದನ್ನು ಜಗತ್ತಿಗೆ ಸಾರಿದ್ದರು. ಸದ್ಯ 32 ವರ್ಷದ ಗಪ್ಟಿಲ್ ಇನ್ನು ಕನಿಷ್ಟ ಮೂರು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದು ರೋಹಿತ್ ಶರ್ಮಾರ ದಾಖಲೆ ಮುರಿಯುವ ಅವಕಾಶ ಗಪ್ಟಿಲ್ ಮುಂದಿದೆ.

ಆಸಿಸ್ ನಾಯಕನಿಗೂ ಇದೆ ಅವಕಾಶ

ಆಸಿಸ್ ನಾಯಕನಿಗೂ ಇದೆ ಅವಕಾಶ

ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ ಸೀಮಿತ ಓವರ್‌ಗಳಲ್ಲಿ ಸ್ಪೋಟಕವಾಗ ಆಡಬಲ್ಲ ಆಟಗಾರ. ಒಮ್ಮೆ ಕ್ರೀಸ್‌ಗೆ ಕಚ್ಚಿಕೊಂಡರೆ ಎದುರಾಳಿ ಬೌಲರ್‌ಗಳ ಮೇಲೆ ಯಾವುದೇ ಕರುಣೆಯನ್ನು ತೋರದೆ ಬ್ಯಾಟ್ ಬೀಸುತ್ತಾರೆ. ಟಿ20 ಕ್ರಿಕೆಟ್‌ನಲ್ಲಿ ಅರೋನ್ ಫಿಂಚ್ ಮೂರು ಬಾರಿ 150ಕ್ಕೂ ಅಧಿಕ ರನ್ ಗಳಸಿದ ಸಾಧನೆ ಮಾಡಿದ್ದಾರೆ. ಒಂದು ಬಾರಿಯಂತೂ ಫಿಂಚ್ ಚುಟುಕು ಕ್ರಿಕೆಟ್‌ನಲ್ಲೇ 172 ರನ್‌ಗಳಿಸಿದ್ದರು. ಈ ಮೂಲಕ ಟಿ20ಯಲ್ಲೂ ದ್ವಿಶತಕದ ಸನಿಹಕ್ಕೆ ಬಂದಿದ್ದರು ಎನ್ನುವುದನ್ನು ಗಮನಿಸಬೇಕಿದೆ. ಹೀಗಾಗಿ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ದಾಖಲೆಯನ್ನು ಮುರಿಯುವ ಅವಕಾಶ ಫಿಂಚ್‌ಗೂ ಇದೆ ಎಂದರೆ ತಪ್ಪಿಲ್ಲ.

ದಕ್ಷಿಣ ಆಫ್ರಿಕಾ ತಂಡದ ನಾಯಕ

ದಕ್ಷಿಣ ಆಫ್ರಿಕಾ ತಂಡದ ನಾಯಕ

ದಕ್ಷಿಣ ಆಫ್ರಿಕಾ ತಂಡದ ನಾಯಕ ಕ್ವಿಂಟನ್ ಡಿ ಕಾಕ್ ರೋಹಿತ್ ಶರ್ಮಾ ದಾಖಲೆಯನ್ನು ಮುರಿಯುವ ಸಾಮರ್ಥ್ಯವನ್ನು ಹೊಂದಿರುವ ಮತ್ತೋರ್ವ ಆಟಗಾರ. ದೊಡ್ಡ ಶಾಟ್‌ಗಳನ್ನು ಬಾರಿಸುವುದರಲ್ಲಿ ಡಿಕಾಕ್ ಎತ್ತಿದ ಕೈ. ಕೇವಲ 27 ವರ್ಷದ ಡಿ ಕಾಕ್ ಈಗಾಗಲೆ ಒಡಿಐನಲ್ಲಿ 118 ಪಂದ್ಯಗಳಲ್ಲಿ 5000ದ ಗಡಿಯ ಸಮೀಪಕ್ಕೆ ಬಂದು ನಿಂತಿದ್ದಾರೆ. ಏಕದಿನದಲ್ಲಿ 15 ಶತಕಗಳನ್ನು ದಾಖಲಿಸಿದ್ದಾರೆ. ಆಸ್ಟ್ರೇಲಿಯಾದ ವಿರುದ್ಧ ನಡೆದ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ 178 ರನ್‌ಗಳನ್ನು ಬಾರಿಸಿ ವೃತ್ತಿ ಜೀವನದ ಅತ್ಯಧಿಕ ರನ್ ಬಾರಿಸಿದ್ದರು. ಆಸಿಸ್ ನೀಡಿದ್ದ 296 ರನ್‌ಗಳ ಗುರಿಯನ್ನು ಬೆನ್ನತ್ತುವ ಸಂದರ್ಭದಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಇದಕ್ಕಾಗಿ ಡಿ ಕಾಕ್ 113 ಎಸೆತಗಳನ್ನಷ್ಟೇ ತೆಗೆದುಕೊಂಡಿದ್ದಾರೆ. ಈ ಆಟವನ್ನು ನೋಡಿದ ಯಾರಿಗಾದರೂ ರೋಹಿತ್ ಶರ್ಮಾ ದಾಖಲೆಯನ್ನು ಈತನೇ ಮುರಿಯುತ್ತಾನಾ ಎಂಬ ಅನುಮಾನವಂತೂ ಕಾಡದಿರದು.

ಇಂಗ್ಲೆಂಡ್ ಸ್ಫೋಟಕ ಆಟಗಾರ

ಇಂಗ್ಲೆಂಡ್ ಸ್ಫೋಟಕ ಆಟಗಾರ

ಇಂಗ್ಲೆಂಡ್‌ ಓರ್ವ ಆಟಗಾರನಿಗೂ ರೋಹಿತ್ ಶರ್ಮಾ ದಾಖಲೆಯನ್ನು ಮುರಿಯುವ ಅವಕಾಶವಿದೆ. ಅದು ಬೇರೆ ಯಾರೂ ಅಲ್ಲ ಜೇಸನ್ ರಾಯ್. ಇಂಗ್ಲೆಂಡ್‌ನ ಈ ಸ್ಫೋಟಕ ಆಟಗಾರ ಬ್ಯಾಟಿಂಗ್‌ನಲ್ಲಿ ತೋರಿಸುವ ಅಗ್ರೆಸಿವ್‌ನೆಸ್ ಈ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಆಸ್ಟ್ರೇಲಿಯಾ ವಿರುದ್ಧ ಸ್ಪೋಟಕ 180 ರನ್‌ ದಾಖಲಿಸಿದ್ದು ಜೇಸ್ ಬಾರಿಸಿದ ಹೈಯೆಸ್ಟ್ ಸ್ಕೋರ್. ಜೇಸನ್ ರಾಯ್‌ಗೂ ಮುಂದೊಂದು ದಿನ ರೋಹಿತ್ ಶರ್ಮಾ ದಾಖಲೆಯನ್ನು ಮುರಿಯಬಲ್ಲ ಅವಕಾಶವಂತೂ ಇದೆ.

ಆಸ್ಟ್ರೇಲಿಯಾದ ಡೇಂಜರಸ್ ಆಟಗಾರ

ಆಸ್ಟ್ರೇಲಿಯಾದ ಡೇಂಜರಸ್ ಆಟಗಾರ

ರೋಹಿತ್ ಶರ್ಮಾ ದಾಖಲೆಯನ್ನು ಮುರಿಯಬಲ್ಲ ಅವಕಾಶವಿರುವ ಮತ್ತೋರ್ವ ಆಟಗಾರ ಅಂದರೆ ಅದು ಆಸ್ಟ್ರೇಲಿಯಾದ ಡೇಂಜರಸ್ ಆಟಗಾರ ಡೇವಿಡ್ ವಾರ್ನರ್. ಸ್ಪೋಟಕ ಆಟದ ಮೂಲಕ ಎದುರಾಳಿ ಬೌಲರ್‌ಗಳನ್ನು ನಡುಗಿಸಿ ಬಿಡುವ ಸಾಮರ್ಥ್ಯ ವಾರ್ನರ್‌ಗೆ ಇದೆ. ಕಳೆದ ವರ್ಷಾಂತ್ಯದಲ್ಲಿ ಡೇವಿಡ್ ವಾರ್ನರ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕವನ್ನು ದಾಖಲಿಸಿದ್ದರು. ಏಕದಿನದಲ್ಲಿ ದೊಡ್ಡ ಶತಕಗಳನ್ನು ಬಾರಿಸಿ ಮಿಂಚಿದ್ದಾರೆ. 2015ರ ವಿಶ್ವಕಪ್‌ನಲ್ಲಿ ವಾರ್ನರ್ ಅಫ್ಘಾನಿಸ್ತಾದ ವಿರುದ್ಧ 178 ರನ್ ಸಿಡಿಸಿದ್ದರು.ಪ್ರಸಕ್ತ ಆಡುತ್ತಿರುವ ಆಟಗಾರರಲ್ಲಿ ರೋಹಿತ್ ಶರ್ಮಾ ದಾಖಲೆ ಮುರಿಯುವ ಅವಕಾಶ ಡೇವಿಡ್ ವಾರ್ನರ್‌ಗೂ ಇದೆ ಎನ್ನಬಹುದು.

ಪ್ರದರ್ಶನವೇ ಮಾನದಂಡ

ಪ್ರದರ್ಶನವೇ ಮಾನದಂಡ

ಮೇಲಿನ ಆಟಗಾರರ ಈವರೆಗಿನ ಪ್ರದರ್ಶನದ ಆಧಾರದಲ್ಲಿ ಹೀಗೆ ರೋಹಿತ್ ಶರ್ಮಾ ಸಿಡಿಸಿದ ದಾಖಲೆ ಮುರಿಯುವ ಅವಕಾಶವಿರುವ ಆಟಗಾರರನ್ನು ಗುರುತಿಸಲಾಗಿದೆ. ಆದರೆ ಈ ಆಟಗಾರಿಗೆ ನಿಜಕ್ಕೂ ಆ ಸಾಮರ್ಥ್ಯ ಇದೆಯಾ ಎಂಬುದಕ್ಕೆ ಆ ಆಟಗಾರರು ರೋಹಿತ್ ದಾಖಲೆಯನ್ನು ಮೀರಿಸಿಯೇ ತೋರಿಸಬೇಕು.

ರೋಹಿತ್ ಶರ್ಮಾನೇ ಬರಬೇಕಾ?

ರೋಹಿತ್ ಶರ್ಮಾನೇ ಬರಬೇಕಾ?

ರೋಹಿತ್ ಶರ್ಮಾ ಸಿಡಿಸಿದ ಈ ಬೃಹತ್ ಮೊತ್ತವನ್ನು ಮೀರಿ ನಿಲ್ಲಲು ಬೇರೆ ಯಾರಿಂದಲೂ ಸಾಧ್ಯವಿಲ್ಲ ರೋಹಿತ್ ಶರ್ಮಾನೇ ಬರಬೇಕಷ್ಟೇ ಎಂಬ ಅಭಿಪ್ರಾಯ ಹೊಂದಿದ್ದರೂ ಬಹುಶಃ ತಪ್ಪಿಲ್ಲ. ಐವತ್ತು ಓವರ್‌ಗಳಲ್ಲಿ ದ್ವಿಶತಕವನ್ನು ಸಿಡಿಸಿರುವ ರೊಹಿತ್ ಶರ್ಮಾ ತ್ರಿಶತಕದತ್ತ ಕಣ್ಣಿಟ್ಟಿದ್ದಾರೋ ಗೊತ್ತಿಲ್ಲ. ರೋಹಿತ್ ಶರ್ಮಾನಂತ ಆಟಗಾರನಿಗೆ ಇದು ಅಸಾಧ್ಯವೇನಲ್ಲ.

ರೋಹಿತ್ ಸಿಡಿಸಿದ್ದು ಮೂರು ದ್ವಿಶತಕ

ರೋಹಿತ್ ಸಿಡಿಸಿದ್ದು ಮೂರು ದ್ವಿಶತಕ

ಒಂದು ದ್ವಿಶತಕ ಸಿಡಿಸುವುದೇ ಅಸಾಧ್ಯ ಎಂಬ ಕಾಲವಿತ್ತು. ಆದರೆ ರೋಹಿತ್ ಶರ್ಮಾ ಈ ಲೆಕ್ಕಾಚಾರಗಳನ್ನೆಲ್ಲಾ ಉಲ್ಟಾಪಲ್ಟಾ ಮಾಡಿದ ಆಟಗಾರ. ರೋಹಿತ್ ಶರ್ಮಾ ಏಕದಿನದಲ್ಲಿ ಮೂರು ದ್ವಿಶತಕಗಳನ್ನು ಸಿಡಿಸಿದ್ದಾರೆ. ಒಂದಕ್ಕಿಂತ ಹೆಚ್ಚು ದ್ವಿಶತಕಗಳನ್ನು ದಾಖಲಿಸಿರುವ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯೂ ರೋಹಿತ್ ಪಾಲಿಗಿದೆ.

ಸಚಿನ್ ಮೊದಲ ಸಾಧನೆ

ಸಚಿನ್ ಮೊದಲ ಸಾಧನೆ

ಸರಿಯಾಗಿ ಹತ್ತು ವರ್ಷಗಳ ಹಿಂದಿನ ವರೆಗೆ ಏಕದಿನ ಇತಿಹಾಸದಲ್ಲಿ ಒಂದೂ ದ್ವಿಶತಕ ದಾಖಲಾಗಿರಲಿಲ್ಲ. ಆದರೆ ಸಚಿನ್ ತೆಂಡೂಲ್ಕರ್ ಮೈಲಿಗಲ್ಲನ್ನು 2010ರಲ್ಲಿ ಮೊಟ್ಟಮೊದಲ ಬಾರಿಗೆ ದ್ವಿಶತಕ ಬಾರಿಸಿ ಹೊಸಾ ಮೈಲಿಗಲ್ಲು ಸ್ಥಾಪಿಸಿದ್ದರು. ಅದಾದ ಬಳಿಕ ಟೀಮ್ ಇಂಡಿಯಾದ ಮತ್ತೋರ್ವ ಸ್ಪೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಈ ಪಟ್ಟಿಗೆ ಸೇರ್ಪಡೆಗೊಂಡರು. ಆದರೆ ರೋಹಿತ್ ಮೂರು ದ್ವಿಶತಕಗಳನ್ನು ತಮ್ಮ ಖಾತೆಗೆ ಹಾಕಿಕೊಂಡು ಮುನ್ನುಗ್ಗುತ್ತಿದ್ದಾರೆ.

Story first published: Friday, March 20, 2020, 15:58 [IST]
Other articles published on Mar 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X