ಶಸ್ತ್ರ ಚಿಕಿತ್ಸೆಯ ಬಳಿಕ ವಿಶ್ವಕಪ್‌ನಲ್ಲಿ ಆಸೀಸ್ ಮುನ್ನಡೆಸಲಿದ್ದಾರೆ ಆ್ಯರನ್ ಫಿಂಚ್

ಸಿಡ್ನಿ: ಆಸ್ಟ್ರೇಲಿಯಾದ ಶಾರ್ಟ್ ಫಾರ್ಮ್ಯಾಟ್ ಕ್ಯಾಪ್ಟನ್ ಆರನ್ ಫಿಂಚ್ ಅವರ ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ಟ್ವೆಂಟಿ -20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸುವ ಹಾದಿಯಲ್ಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಶುಕ್ರವಾರ ಹೇಳಿದೆ.

ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಉನ್ಮುಕ್ತ್ ಚಂದ್, ಯುಎಸ್ ಸೇರ್ಪಡೆ ಸಾಧ್ಯತೆಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಉನ್ಮುಕ್ತ್ ಚಂದ್, ಯುಎಸ್ ಸೇರ್ಪಡೆ ಸಾಧ್ಯತೆ

34ರ ಹರೆಯದ ಆ್ಯರನ್ ಫಿಂಚ್ ಕಳೆದ ತಿಂಗಳು ಸೇಂಟ್ ಲೂಸಿಯಾದಲ್ಲಿ ನಡೆದಿದ್ದ ಸೀಮಿತ ಓವರ್‌ಗಳ ಸರಣಿಯ ವೇಳೆ ಮೊಣಕಾಲು ಗಾಯಕ್ಕೀಡಾಗಿದ್ದರು. ಹೀಗಾಗಿ 14 ದಿನಗಳ ಕ್ವಾರಂಟೈನ್ ಪಾಲಿಸಿದ ಬಳಿಕ ಫಿಂಚ್ ತವರಿಗೆ ವಾಪಸ್ಸಾಗಿದ್ದರು. ವೆಸ್ಟ್ ಇಂಡೀಸ್‌ ವಿರುದ್ಧದ ಸರಣಿಗಾಗಿ ಆಸೀಸ್ ತಂಡ ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಂಡಿತ್ತು.

ಗಾಯಕ್ಕೀಡಾಗಿರುವ ಕಾಲಿನ ಶಸ್ತ್ರ ಚಿಕಿತ್ಸೆ ಗುರುವಾರ (ಆಗಸ್ಟ್ 13) ಮೆಲ್ಬರ್ನ್‌ನಲ್ಲಿ ನಡೆದಿದೆ. ಫಿಂಚ್ ಸಂಪೂರ್ಣ ಚೇತರಿಸಿಕೊಳ್ಳಲು ಸುಮಾರು 10 ವಾರಗಳ ಕಾಲ ಬೇಕಾಗಬಹುದು. ಅಂತೂ ಟಿ20 ವಿಶ್ವಕಪ್ ವೇಳೆ ಫಿಂಚ್ ತಂಡ ಮುನ್ನಡೆಸಲು ತಯಾರಾಗಲಿದ್ದಾರೆ ಎಂದು ಆಸ್ಟ್ರೇಲಿಯಾ ತಿಳಿಸಿದೆ.

'ವಿರಾಟ್ ಕೊಹ್ಲಿ 42 ರನ್' ಆಟದ ಕುರಿತು ಪ್ರತಿಕ್ರಿಯಿಸಿದ ಅಜಿತ್ ಅಗರ್ಕರ್'ವಿರಾಟ್ ಕೊಹ್ಲಿ 42 ರನ್' ಆಟದ ಕುರಿತು ಪ್ರತಿಕ್ರಿಯಿಸಿದ ಅಜಿತ್ ಅಗರ್ಕರ್

ಟಿ20 ವಿಶ್ವಕಪ್ ಏಳನೇ ಆವೃತ್ತಿ ಅಸಲಿಗೆ ಭಾರತದಲ್ಲಿ ನಡೆಯುವುದರಲ್ಲಿತ್ತು. ಆದರೆ ಕೋವಿಡ್ ಭೀತಿಯಿಂದಾಗಿ ಟೂರ್ನಿ ಭಾರತಕ್ಕೆ ಬದಲಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಗೊಂಡಿದೆ. ಅಕ್ಟೋಬರ್‌ 17ರಿಂದ ಯುಎಇ ಮತ್ತು ಓಮನ್‌ನಲ್ಲಿ ಟಿ20 ವಿಶ್ವಕಪ್‌ ಟೂರ್ನಿ ಆರಂಭಗೊಳ್ಳಲಿದೆ.

ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಇದುವರೆಗೂ ಚಾಂಪಿಯನ್ಸ್ ಪಟ್ಟಕ್ಕೇರಿಲ್ಲ. ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ 2010ರ ಆವೃತ್ತಿಯಲ್ಲಿ ರನ್ನರ್ಸ್‌ ಆಗಿದ್ದೇ ಟಿ20 ವಿಶ್ವಕಪ್‌ ನಲ್ಲಿ ಆಸ್ಟ್ರೇಲಿಯಾದ ದೊಡ್ಡ ಸಾಧನೆ. ಆ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತ್ತು.

ಭಾರತ vs ಇಂಗ್ಲೆಂಡ್: ಕೆಟ್ಟ ದಾಖಲೆ ಬರೆದ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ!ಭಾರತ vs ಇಂಗ್ಲೆಂಡ್: ಕೆಟ್ಟ ದಾಖಲೆ ಬರೆದ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ!

ಟಿ20 ವಿಶ್ವಕಪ್‌ಗೆ ತಂಡವೊಂದರಿಂದ 15 ಆಟಗಾರರು, 8 ಅಧಿಕಾರಿಗಳಿಗೆ ಅನುಮತಿ
"ಕೋವಿಡ್-19 ಭೀತಿಯ ಕಾರಣ ಮತ್ತು ಬಯೋ ಬಬಲ್ ಸುರಕ್ಷತೆಯ ದೃಷ್ಟಿಯಿಂದ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳು ತಮ್ಮ ತಂಡಗಳ ಜೊತೆ ಹೆಚ್ಚುವರಿ ಆಟಗಾರನ್ನು ಕರೆತರಲು ಅನುಮತಿ ನೀಡಿದೆ. ಬರುವ ಹೆಚ್ಚುವರಿ ಆಟಗಾರರ ಖರ್ಚುವೆಚ್ಚಗಳನ್ನು ನೀವೇ ಭರಿಸಬೇಕಾಗುತ್ತದೆ ಅನ್ನೋದನ್ನು ಐಸಿಸಿ ಕೂಡ ಹೇಳಿದೆ. ಐಸಿಸಿ ಕೇವಲ 15 ಆಟಗಾರರು ಮತ್ತು 8 ಮಂದಿ ಅಧಿಕಾರಿಗಳ ವೆಚ್ಚ ಮಾತ್ರ ಐಸಿಸಿ ಭರಿಸಲಿದೆ," ಎಂದು ಪಿಸಿಬಿ ತಿಳಿಸಿದೆ. 2016ರ ಟಿ20 ವಿಶ್ವಕಪ್‌ ಬಳಿಕ ನಡೆಯುತ್ತಿರುವ ಮೊದಲ ಈ ವಿಶ್ವಕಪ್‌ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನ ದುಬೈ ಅಬುದಾಬಿ ಮತ್ತು ಶಾರ್ಜಾ ಸ್ಟೇಡಿಯಂಗಳಲ್ಲಿ ನಡೆಯಲಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಐರ್ಲೆಂಡ್‌ ತಂಡಗಳನ್ನು ಸೇರಿಸಿ 8 ರಾಷ್ಟ್ರಗಳ ಕ್ವಾಲಿಫೈಯಿಂಗ್ ಟೂರ್ನಮೆಂಟ್ ಸೆಪ್ಟೆಂಬರ್ 23ರಿಂದ ಓಮನ್ ಮತ್ತು ಯುಎಇಯ ಒಂದು ತಾಣದಲ್ಲಿ ನಡೆಯಲಿದೆ.

ಕೋವಿಡ್-19 ಪಾಸಿಟಿವ್ ಬಂದು ತಂಡದಿಂದ ಆಟಗಾರರು ಹೊರ ಬೀಳುವ ಭೀತಿ ಮತ್ತು ಆಟಗಾರರು ಗಾಯಗೊಂಡು ತಂಡದಿಂದ ಹೊರಗುಳಿಯುವ ಭೀತಿ ಇರುವುದರಿಂದ ತನ್ನ ಮುಖ್ಯ ತಂಡದ ಜೊತೆಗೆ ಎಷ್ಟು ಆಟಗಾರರನ್ನು ಕರೆದೊಯ್ಯಬೇಕು ಅನ್ನೋದು ಆಯಾ ಕ್ರಿಕೆಟ್ ಬೋರ್ಡ್‌ಗಳಿಗೆ ಬಿಟ್ಟಿದ್ದು ಎಂದು ಪಿಸಿಬಿ ಮಾಹಿತಿ ನೀಡಿದೆ.

ಐಪಿಎಲ್ 2021: ದುಬೈ ತಲುಪಿ ಹೊಟೇಲ್ ಬಾಲ್ಕನಿಯ ಸುಂದರ ಫೋಟೋ ಹಂಚಿಕೊಂಡ ಸುರೇಶ್ ರೈನಾಐಪಿಎಲ್ 2021: ದುಬೈ ತಲುಪಿ ಹೊಟೇಲ್ ಬಾಲ್ಕನಿಯ ಸುಂದರ ಫೋಟೋ ಹಂಚಿಕೊಂಡ ಸುರೇಶ್ ರೈನಾ

ಟೀಮ್ ಇಂಡಿಯಾ ಮದ್ಯಮ ಕ್ರಮಾಂಕದಿಂದ ತೀರಾ ನಿರಾಸೆ | Oneindia Kannada

ಟಿ20 ವಿಶ್ವಕಪ್‌ನಲ್ಲಿ ಈ ಬಾರಿ ಒಟ್ಟು 16 ತಂಡಗಳು ಸ್ಪರ್ಧೆ
* ಟಿ20 ವಿಶ್ವಕಪ್ 2021ರಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಜೊತೆಗೆ ಪಪುವಾ ನ್ಯೂಗಿನಿ, ನಮೀಬಿಯಾ, ನೆದರ್ಲೆಂಡ್, ಓಮನ್ ಮತ್ತು ಸ್ಕಾಟ್ಲೆಂಡ್ ತಂಡಗಳು ಕೂಡ ಪಾಲ್ಗೊಳ್ಳಲಿವೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, August 13, 2021, 23:57 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X