ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಈ ಅವಕಾಶ ನೀಡಿದರೆ ಐಪಿಎಲ್‌ನ ಮೌಲ್ಯ ಹೆಚ್ಚಲಿದೆ ಎಂದ ಆಡಮ್ ಗಿಲ್‌ಕ್ರಿಸ್ಟ್

Adam Gilchrist statement on Indian players in overseas T20 leagues says ii would grow IPLs brand

ವಿಶ್ವ ಕ್ರಿಕೆಟ್‌ನಲ್ಲಿ ಈಗ ಟಿ20 ಕ್ರಿಕೆಟ್‌ ಮಾದರಿಯ ಅಬ್ಬರ ಜೋರಾಗಿದೆ. ಅದರಲ್ಲೂ ಲೀಗ್ ಕ್ರಿಕೆಟ್‌ಗಳು ಸಾಕಷ್ಟು ಖ್ಯಾತಿ ಪಡೆದುಕೊಂಡಿದೆ. ಕ್ರಿಕೆಟ್ ಆಡುವ ಬಹುತೇಕ ರಾಷ್ಟ್ರಗಳು ತಮ್ಮದೇ ಲೀಗ್ ಕ್ರಿಕೆಟ್‌ಗಳನ್ನು ಆಯೋಜಿಸುತ್ತಿದೆ. ಅದರಲ್ಲಿ ಹೆಚ್ಚು ಖ್ಯಾತವಾಗಿರುವ ಲೀಗ್ ಕ್ರಿಕೆಟ್ ಎಂದರೆ ಐಪಿಎಲ್. ಎಲ್ಲಾ ರಾಷ್ಟ್ರಗಳ ಕ್ರಿಕೆಟ್ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಬೇಕು ಎಂಬುದು ದೊಡ್ಡ ಕನಸಾಗಿದೆ. ವಿಶ್ವ ಕ್ರಿಕೆಟ್‌ನ ಬಹುತೇಕ ರಾಷ್ಟ್ರಗಳ ಆಟಗಾರರು ಐಪಿಎಲ್‌ನಲ್ಲಿ ಆಡುವ ಕಾರಣದಿಂದಾಗಿ ಈ ಟೂರ್ನಿಯ ಖ್ಯಾತಿ ಹೆಚ್ಚಾಗಿದೆ.

ಆದರೆ ಭಾರತದ ಕ್ರಿಕೆಟ್ ಆಟಗಾರರು ಯಾವುದೇ ವಿದೇಶಿ ಟಿ20 ಲೀಗ್‌ಗಳಲ್ಲಿ ಆಡುವಂತಿಲ್ಲ. ಈ ರೀತಿಯಾದ ನಿಯಮವನ್ನು ಬಿಸಿಸಿಐ ಮಾಡಿಕೊಂಡಿದೆ. ಆದರೆ ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಆಡುವ ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳು ಸಾಕಷ್ಟು ಬಾರಿ ಕೆಳಿಸಿದೆ. ಇದೀಗ ಮಾಜಿ ಆಸ್ಟ್ರೇಲಿಯಾದ ಆಟಗಾರ ಆಡಮ್ ಗಿಲ್‌ಕ್ರಿಸ್ಟ್‌ ಕುಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡಿದರೆ ಐಪಿಎಲ್‌ನ ಮೌಲ್ಯ ಹೆಚ್ಚಾಗುತ್ತದೆ ಎಂದಿದ್ದಾರೆ ಆಸಿಸ್ ದಿಗ್ಗಜ ಆಟಗಾರ.

CWG 2022: ಧ್ವಜಧಾರಿಯಾಗಿ ಭಾರತವನ್ನು ಮುನ್ನಡೆಸಿದ ಪಿವಿ ಸಿಂಧು, ಮನ್‌ಪ್ರೀತ್ ಸಿಂಗ್; ದಿನ 1ರ ಭಾರತದ ವೇಳಾಪಟ್ಟಿCWG 2022: ಧ್ವಜಧಾರಿಯಾಗಿ ಭಾರತವನ್ನು ಮುನ್ನಡೆಸಿದ ಪಿವಿ ಸಿಂಧು, ಮನ್‌ಪ್ರೀತ್ ಸಿಂಗ್; ದಿನ 1ರ ಭಾರತದ ವೇಳಾಪಟ್ಟಿ

ಐಪಿಎಲ್‌ಗೆ ಧಕ್ಕೆಯಾಗಲಾರದು

ಐಪಿಎಲ್‌ಗೆ ಧಕ್ಕೆಯಾಗಲಾರದು

ಭಾರತೀಯ ಕ್ರಿಕೆಟಿಗರು ವಿದೇಶಿ ಲೀಗ್‌ಗಳಲ್ಲಿ ಭಾಗಿಯಾದರೆ ಐಪಿಎಲ್‌ನ ಘನತೆಗೆ ಕುಂದುಂಟಾಗಲಾರದು. ಅದರ ಬದಲಿಗೆ ಇದು ಐಪಿಎಲ್‌ನ ಬೆಳವಣಿಗೆಗೆ ಪೂರಕವಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಆಡಮ್ ಗಿಲ್‌ಕ್ರಿಸ್ಟ್. ಐಪಿಎಲ್‌ನಲ್ಲಿ ಆಡಿದ ತಮ್ಮ ಅನುಭವವನ್ನು ಹೇಳಿಕೊಂಡಿರುವ ಗಿಲ್‌ಕ್ರಿಸ್ಟ್ ಪರಸ್ಪರರ ಏಳಿಗೆಗಳಿಗೆ ಮಂಡಳಿಗಳು ಪ್ರೋತ್ಸಾಹಿಸಬೇಕು ಎಂದಿದ್ದಾರೆ.

ಅದು ಅದ್ಭುತವಾಗಿರಲಿದೆ

ಅದು ಅದ್ಭುತವಾಗಿರಲಿದೆ

ಭಾರತೀಯ ಕ್ರಿಕೆಟಿಗರು ವಿದೇಶಿ ಲೀಗ್‌ಗಳಲ್ಲಿ ಆಡುವ ಬಗ್ಗೆ ಗಿಲ್‌ಕ್ರಿಸ್ಟ್ ನಿಋಇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. "ಭಾರತೀಯ ಆಟಗಾರರಿ ವಿದೇಶಿ ಲೀಗ್‌ಗಳಲ್ಲಿ ಆಡಿದರೆ ಅದು ನಿಜಕ್ಕೂ ಅದ್ಭುತವಾಗಿರಲಿದೆ. ಅದು ಐಪಿಎಲ್‌ಗೆ ಧಕ್ಕೆ ಉಂಟು ಮಾಡುತ್ತದೆ ಎಂದು ನನಗೆ ಅನಿಸುವುದಿಲ್ಲ. ಬದಲಾಗಿ ಬ್ರ್ಯಾಂಡ್ ಆಗಿ ಐಪಿಎಲ್ ಇದರಿಂದ ಮತ್ತಷ್ಟು ಬೆಳೆಯಬಹುದು" ಎಂದು ಆಡಮ್ ಗಿಲ್‌ಕ್ರಿಸ್ಟ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಭಾರತೀಯರು ಯಾಕೆ ಬಿಗ್‌ಬ್ಯಾಷ್‌ನಲ್ಲಿ ಆಡುತ್ತಿಲ್ಲ?

ಭಾರತೀಯರು ಯಾಕೆ ಬಿಗ್‌ಬ್ಯಾಷ್‌ನಲ್ಲಿ ಆಡುತ್ತಿಲ್ಲ?

ಮುಂದುವರಿದು ಮಾತನಾಡಿರುವ ಆಡಮ್ ಗಿಲ್‌ಕ್ರಿಸ್ಟ್, "ನಾನು ಐಪಿಎಲ್‌ಅನ್ನು ಟೀಕಿಸುತ್ತಿಲ್ಲ. ಆದರೆ ಭಾರತೀಯ ಕ್ರಿಕೆಟಿಗರು ಯಾವ ಕಾರಣಕ್ಕಾಗಿ ಆಸ್ಟ್ರೇಲಿಯಾಗೆ ಬಂದು ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಆಡುತ್ತಿಲ್ಲ. ಈ ಪ್ರಶ್ನೆಗೆ ನಾನು ಮುಕ್ತವಾದ ಹಾಗೂ ಪ್ರಾಮಾಣಿಕವಾದ ಉತ್ತರವನ್ನು ಈವರೆಗೆ ಪಡೆದಿಲ್ಲ. ಕೆಲ ಲೀಗ್‌ಗಳಲ್ಲಿ ಮಾತ್ರ ಪ್ರಪಂಚದ ಎಲ್ಲಾ ಆಟಗಾರರಿಗೆ ಅವಕಾಶವಿದೆ. ಯಾವುದೇ ಭಾರತೀಯ ಆಟಗಾರ ವಿಶ್ವದ ಯಾವುದೇ ಲೀಗ್‌ನಲ್ಲಿಯೂ ಭಾಗಿಯಾಗುತ್ತಿಲ್ಲ. ನಾನು ಯಾರನ್ನೂ ಕೆರಳಿಸುವ ದೃಷ್ಟಿಯಿಂದ ಪ್ರಶ್ನಿಸುತ್ತಿಲ್ಲ. ಇದು ಪ್ರಾಮಾಣಿಕ ಪ್ರಶ್ನೆ ಎಂದು ಭಾವಿಸುತ್ತೇನೆ" ಎಂದಿದ್ದಾರೆ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಆಡಮ್ ಗಿಲ್‌ಕ್ರಿಸ್ಟ್.

ಐಪಿಎಲ್‌ನಲ್ಲಿ ಆಡಿದ ಅನುಭವ ಹಂಚಿಕೊಂಡ ಗಿಲ್ಲಿ

ಐಪಿಎಲ್‌ನಲ್ಲಿ ಆಡಿದ ಅನುಭವ ಹಂಚಿಕೊಂಡ ಗಿಲ್ಲಿ

ಇನ್ನು ಇದೇ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ಆಡಿದ ಅನುಭವವನ್ನು ಆಡಮ್ ಗಿಲ್‌ಕ್ರಿಸ್ಟ್ ಹಂಚಿಕೊಂಡಿದ್ದಾರೆ. "ನಾನು ಆಡಿದ ಆ ಆರು ಆವೃತ್ತಿಗಳನ್ನು ಉಲ್ಲೇಖಿಸಲು ಬಯಸಿತ್ತೇನೆ. ನಾನು ಅದನ್ನು ಬಗಳಷ್ಟು ಇಷ್ಟ ಪಟ್ಟಿದ್ದೇನೆ. ಅದೊಂದು ಬಹಳ ವಿಶೇಷವಾದ ಅನುಭವ. ಐಪಿಎಲ್ ವಿಶ್ವದ ಅತ್ಯುನ್ನತ ಕ್ರಿಕೆಟ್ ಲೀಗ್ ಎನಿಸಿಕೊಂಡಿದೆ. ಆದರೆ ಇಂಥಾ ಅವಕಾಶವನ್ನು ವಿಶ್ವದ ಇತರ ಮಂಡಳಿಗಳು ಹಾಗೂ ದೇಶಗಳಿಗೂ ನೀಡಬೇಕು" ಎಂದಿದ್ದಾರೆ ಆಡಮ್ ಗಿಲ್‌ಕ್ರಿಸ್ಟ್. ಐಪಿಎಲ್‌ನಲ್ಲಿ ಗಿಲ್‌ಕ್ರಿಸ್ಟ್ ಒಟ್ಟು ಆರು ಆವೃತ್ತಿಗಳಲ್ಲಿ ಆಡಿದ್ದಾರೆ. ಮೊದಲಿಗೆ ಡೆಕ್ಕನ್ ಚಾರ್ಜರ್ಸ್ ತಂಡದ ಭಾಗವಾಗಿದ್ದ ಗಿಲ್ಲಿ ಬಳಿಕ ಕಿಂಗ್ಸ್ ಇಲವೆನ್ ಪಂಜಾಬ್ ತಂಡವನ್ನು ಮುನ್ನಡೆಸಿದ್ದರು.

Story first published: Friday, July 29, 2022, 18:09 [IST]
Other articles published on Jul 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X