ಐಸಿಸಿ ವಿಶ್ವಕಪ್ 2019ಕ್ಕೆ ಅರ್ಹತೆ ಪಡೆದ ಅಫ್ಘಾನಿಸ್ತಾನ

Posted By:
Afghanistan seal World Cup berth

ಹರಾರೆ, ಮಾರ್ಚ್ 23: ಭಾರಿ ಕುತೂಹಲ ಕೆರಳಿಸಿದ್ದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ಪ್ರವೇಶ ಪಡೆದ ಬೆನ್ನಲ್ಲೇ ಅಫ್ಘಾನಿಸ್ತಾನ ಕೂಡಾ ಪ್ರವೇಶ ಪಡೆದುಕೊಂಡಿದೆ.

ಐರ್ಲೆಂಡ್ ವಿರುದ್ಧ ಜಯ ಗಳಿಸಿದ ಅಫ್ಘಾನಿಸ್ತಾನ ಹೊಸ ಇತಿಹಾಸ ನಿರ್ಮಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 209/7 ಸ್ಕೋರ್ ಮಾಡಿತ್ತು. 49.1 ಓವರ್ ಗಳಲ್ಲಿ ಗುರಿಯನ್ನು ಮುಟ್ಟಿದ ಅಫ್ಘನ್ನರು ಸಂಭ್ರಮದಿಂದ ಕುಣಿದಾಡಿದರು.

ಸ್ಕೋರ್ ಕಾರ್ಡ್

ಟೂರ್ನಮೆಂಟ್ ನ ಆರಂಭದಲ್ಲಿ ಆಡದಿದ್ದ ನಾಯಕ ಅಸ್ಘರ್ ಸ್ಟನಿಕಾಜಾಯಿ 39ರನ್ (29 ಎಸೆತ, 4 ಬೌಂಡರಿ, 1 ಸಿಕ್ಸರ್) ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮೊಹಮ್ಮದ್ ಷಹಜಾದ್ 54 ರನ್ (50 ಎಸೆತಗಳು), ಗುಲ್ಬದೀನ್ ನಯಾಬ್ 45 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಇದಕ್ಕೂ ಮುನ್ನ ಐರ್ಲೆಂಡ್ ಪರ ನೀಲ್ ಒ ಬ್ರಯಾನ್ 36 ಹಾಗೂ ಕೆವಿನ್ ಒ ಬ್ರಯಾನ್ 41ರನ್ ಗಳಿಸಿ ತಂಡದ ಮೊತ್ತವನ್ನು 209/7ಕ್ಕೇರಿಸಿದರು. ರಶೀದ್ ಖಾನ್ 40 ರನ್ನಿತ್ತು 3ವಿಕೆಟ್ ಕಿತ್ತು ಉತ್ತಮ ಪ್ರದರ್ಶನ ನೀಡಿದರು

ಕುತೂಹಲ ಘಟಕ್ಕೆ ವರ್ಲ್ಡ್‌ಕಪ್ ಅರ್ಹತಾ ಟೂರ್ನಿ

ಈ ಪಂದ್ಯದಲ್ಲಿ ಗೆದ್ದ ತಂಡ ವಿಶ್ವಕಪ್‌ಗೆ ಪ್ರವೇಶ ಪಡೆದುಕೊಳ್ಳಲಿದೆ. ಅಕಸ್ಮಾತ್ ಮಳೆಯಿಂದ ಆಟ ರದ್ದಾದರೆ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವೆ ರನ್ ಸರಾಸರಿಯ ಲೆಕ್ಕಾಚಾರ ಮಾಡಬೇಕಾಗುತ್ತಿತ್ತು.


ಆಗ ಜಿಂಬಾಬ್ವೆ ಅರ್ಹತೆ ಪಡೆಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಪಂದ್ಯ ಟೈ ಆಗಿದ್ದರೂ ಜಿಂಬಾಬ್ವೆ ತಂಡಕ್ಕೆ ಸುಲಭ ಅವಕಾಶ ಸಿಗುತ್ತಿತ್ತು. ಆದರೆ, ಜಿಂಬಾಬ್ವೆಗೆ ಅದೃಷ್ಟ ಕೈಗೂಡಲಿಲ್ಲ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, March 24, 2018, 0:04 [IST]
Other articles published on Mar 24, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ