ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿವೀಸ್ ವಿರುದ್ದ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾವನಾತ್ಮಕ ಟ್ವೀಟ್

ತನ್ನ ಕ್ರಿಕೆಟ್ ಜೀವನದಲ್ಲಿ ತೀರಾ ಅಪರೂಪ ಎನ್ನುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕಿವೀಸ್ ಪ್ರವಾಸದ ವೇಳೆ, ನಾಯಕನಾಗಿಯೂ ವಿಫಲರಾದರು, ಜೊತೆಗೆ, ಬ್ಯಾಟಿಂಗ್ ನಲ್ಲೂ ತೀರಾ ಕಳಪೆ ಪ್ರದರ್ಶನ ನೀಡಿದ್ದರು.

ವಿರಾಟ್ ಬ್ಯಾಟಿಂಗ್ ವೈಫಲ್ಯದ ಬಗ್ಗೆ ವಿಶ್ವದ ಕ್ರಿಕೆಟ್ ದಿಗ್ಗಜರು ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿದರು. ಕೆಲವರು ಅವರ ಪರವಾಗಿ ನಿಂತರೆ, ಇನ್ನಷ್ಟು ಮಂದಿ ಅವರನ್ನು ಟೀಕಿಸುವ/ಕೆಣಕುವ ಹೇಳಿಕೆಯನ್ನು ನೀಡಿದ್ದರು.

ಬಿಸಿಸಿಐ ಆಯ್ಕೆ ಸಮಿತಿ: ಐವರು ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಕೇಳಿದ್ದು ಈ ಒಂದು ಪ್ರಶ್ನೆಯನ್ನು ಬಿಸಿಸಿಐ ಆಯ್ಕೆ ಸಮಿತಿ: ಐವರು ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಕೇಳಿದ್ದು ಈ ಒಂದು ಪ್ರಶ್ನೆಯನ್ನು

ಕೊಹ್ಲಿ ಒಬ್ಬ ಆಕ್ರಮಣಕಾರಿ ಆಟಗಾರರ ಆಗಿದ್ದರೂ, ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ಸಂಯಮದಿಂದ ನಡೆದುಕೊಂಡಿದ್ದರು. ಆದರೂ, ಎರಡನೇ ಟೆಸ್ಟ್ ಪಂದ್ಯದ ವೇಳೆ ಮತ್ತು ಇದಾದ ನಂತರದ ಪತ್ರಿಕಾಗೋಷ್ಠಿಯಲ್ಲಿ ತಾಳ್ಮೆ ಕಳೆದುಕೊಂಡಿದ್ದರು.

ಇದು ವಿರಾಟ್ ಕೊಹ್ಲಿ ವಿರೋಧಿಗಳಿಗೆ ಇನ್ನಷ್ಟು ಆಹಾರ ಸಿಕ್ಕಂತಾಗಿತ್ತು. ಈ ನಡುವೆ, ದಕ್ಷಿಣ ಆಫ್ರಿಕಾದ ಭಾರತ ಪ್ರವಾಸದ ಮುನ್ನ, ಟೀಂ ಇಂಡಿಯಾ ನಾಯಕ ಟ್ವೀಟ್ ಒಂದನ್ನು ಮಾಡಿದ್ದಾರೆ.

ಪರಿವರ್ತನೆಯೊಂದೇ ಶಾಶ್ವತವಾದ್ದು

ಎರಡೂ ಕೈಯಲ್ಲಿ ಮೊಬೈಲ್ ಹಿಡಿದು, ಅದನ್ನೇ ತದೇಕಚಿತ್ತದಿಂದ ನೋಡುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, ಅದಕ್ಕೆ, "ಪರಿವರ್ತನೆಯೊಂದೇ ಶಾಶ್ವತವಾದ್ದು" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಭಾರೀ ಲೈಕ್ಸ್ ವ್ಯಕ್ತವಾಗಿದೆ.

ಕೊಹ್ಲಿ

ಕೊಹ್ಲಿ

ಕೊಹ್ಲಿ ಮಾಡಿರುವ ಟ್ವೀಟ್ ಸುಮಾರು 88 ಸಾವಿರ ಲೈಕ್ಸ್ ಅನ್ನು ಪಡೆದುಕೊಂಡಿದ್ದು, ಐದು ಸಾವಿರಕ್ಕೂ ಹೆಚ್ಚು ರಿಟ್ವೀಟ್ ಆಗಿದೆ. ಸುಮಾರು 1.6ಕ್ಕೂ ಹೆಚ್ಚು ಜನ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಹಲವು ಟ್ವಿಟ್ಟಿಗರು ಕೊಹ್ಲಿಗೆ ಸಮಾಧಾನ ಮಾಡಿದರೆ, ಇನ್ನಷ್ಟು ಜನ ಕಾಲೆಳೆದಿದ್ದಾರೆ.

70 ಶತಕ ಸಿಡಿಸಿದ ಆಟಗಾರನ ಕೌಶಲ್ಯ ಪ್ರಶ್ನಿಸ್ತೀರಾ?: ಕೊಹ್ಲಿ ಬೆನ್ನಿಗೆ ನಿಂತ ಹಕ್

ಆನ್‌ಫೀಲ್ಡ್‌ ನಲ್ಲಿ ಕೊಹ್ಲಿ ವರ್ತನೆ

ಆನ್‌ಫೀಲ್ಡ್‌ ನಲ್ಲಿ ಕೊಹ್ಲಿ ವರ್ತನೆ

ಕಿವೀಸ್ ಜೊತೆ ಎರಡನೇ ಟೆಸ್ಟ್ ನಂತರ, ಮಾಧ್ಯಮಗೋಷ್ಠಿಯಲ್ಲಿ, ಆನ್‌ಫೀಲ್ಡ್‌ ನಲ್ಲಿ ಕೊಹ್ಲಿ ವರ್ತನೆಯ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನೆಯನ್ನು ಕೇಳಿದ್ದರು. ಇದು ಕೊಹ್ಲಿಯನ್ನು ಕೆರಳಿಸಿತ್ತು. ಪ್ರಶ್ನೆ ಕೇಳಿದ ಪತ್ರಕರ್ತನಿಗೇ ಮರು ಪ್ರಶ್ನೆ ಹಾಕಿ ಆತನ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಕೊಹ್ಲಿ ಮಾಡಿದ್ದರು. ಇದು ಕೊಹ್ಲಿ ಬಗ್ಗೆ ಮತ್ತೆ ಚರ್ಚೆಗೆ ನಾಂದಿ ಹಾಡಿತ್ತು.

ಪಾಕ್ ಮಾಜಿ ನಾಯಕ ಇಂಜಮಾಮ್ ಉಲ್ ಹಕ್

ಪಾಕ್ ಮಾಜಿ ನಾಯಕ ಇಂಜಮಾಮ್ ಉಲ್ ಹಕ್

ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿದ್ದ ವೇಳೆ ಪಾಕ್ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಅವರ ಪರವಾಗಿ ಹೇಳಿಕೆಯನ್ನು ನೀಡಿದ್ದರು. "ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕಗಳನ್ನು ಬಾರಿಸಿರುವ ಆಟಗಾರ. ಅಂತಹ ಆಟಗಾರನ ಕೌಶಲ್ಯವನ್ನು ಈಗ ಪ್ರಶ್ನಿಸುತ್ತಿರುವುದು ಸರಿಯಲ್ಲ" ಎಂದು ಇಂಜಮಾಮ್ ಹೇಳಿದ್ದರು.

Story first published: Friday, March 6, 2020, 15:55 [IST]
Other articles published on Mar 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X