ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ದುರ್ವರ್ತನೆ ತೋರಿದ ಸ್ಟೀವ್ ಸ್ಮಿತ್‌ಗೆ ಕಂಟಕ!

After pitch scuffing controversy, Steve Smith unlikely to be retained by Rajasthan Royals ahead of IPL 2021

ಸಿಡ್ನಿ: ಸೋಮವಾರ (ಜನವರಿ 11) ಆಸ್ಟ್ರೇಲಿಯಾ ಪ್ರಮುಖ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್ ಮತ್ತೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಟೆಸ್ಟ್ ಪಂದ್ಯದ ಐದನೇ ದಿನದಾಟದ ವೇಳೆ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸ್ಮಿತ್ ಪಿಚ್‌ ಅನ್ನು ಹಾಳುಗೆಡವಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಸ್ಮಿತ್ ಅವರ ಈ ವರ್ತನೆಯಿಂದಾಗಿ ಅವರಿಗೆ ಕಂಟಕ ಎದುರಾಗಿದೆ.

ಆರ್‌ ಅಶ್ವಿನ್ ಎದುರು ಕಾಲುಕರೆದಿದ್ದಕ್ಕೆ ಕ್ಷಮೆ ಕೋರಿದ ಟಿಮ್ ಪೈನ್ಆರ್‌ ಅಶ್ವಿನ್ ಎದುರು ಕಾಲುಕರೆದಿದ್ದಕ್ಕೆ ಕ್ಷಮೆ ಕೋರಿದ ಟಿಮ್ ಪೈನ್

ತೃತೀಯ ಟೆಸ್ಟ್‌ನಲ್ಲಿ ಸೋಲಿನಂಚಿನಲ್ಲಿದ್ದ ಟೀಮ್ ಇಂಡಿಯಾವನ್ನು ಪಂತ್ ಗೆಲುವಿನೆಡೆಗೆ ಕೊಂಡೊಯ್ದಿದ್ದರು. ಅರ್ಧ ಶತಕ (97 ರನ್) ಬಾರಿಸಿದ್ದರು. ಪಂತ್‌ ಬ್ಯಾಟಿಂಗ್‌ ಗಮನಿಸಿದ ಸ್ಮಿತ್, ಪಂತ್ ಅವರ ಬ್ಯಾಟ್ಸ್‌ಮನ್‌ ಲೈನ್ ಅನ್ನು ಅಳಿಸಿ ಹಾಕಿದ್ದರು. ಇದು ವಿಡಿಯೋದಲ್ಲಿ ಸೆರೆಯಾಗಿತ್ತು.

ಹನುಮ ವಿಹಾರಿ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಕ್ಕೆ: ಇಂಗ್ಲೆಂಡ್ ಟೆಸ್ಟ್‌ಗೂ ಅನುಮಾನಹನುಮ ವಿಹಾರಿ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಕ್ಕೆ: ಇಂಗ್ಲೆಂಡ್ ಟೆಸ್ಟ್‌ಗೂ ಅನುಮಾನ

ಆಸ್ಟ್ರೇಲಿಯಾದ ಸ್ಟಾರ್ ಆಟಗಾರನ ಈ ವರ್ತನೆಗೆ ಆಸ್ಟ್ರೇಲಿಯಾ ದಂತಕತೆಗಳು ಸೇರಿದಂತೆ ಅನೇಕರು ಅಸಮಾಧಾನ ತೋರಿಕೊಂಡಿದ್ದರು. ಇದಲ್ಲದೆ ಸ್ಮಿತ್‌ಗೆ ಮತ್ತೊಂದು ಕಂಟಕ ಎದುರಾಗಿದೆ.

ವಿವಾದದ ಹಿನ್ನೆಲೆ

ವಿವಾದದ ಹಿನ್ನೆಲೆ

ಸೋಮವಾರ ಭಾರತ ತಂಡ ಇನ್ನಿಂಗ್ಸ್‌ ಆಡುತ್ತಿದ್ದಾಗ ಮೊದಲ ಸೆಶನ್‌ ಬಳಿಕ ಡ್ರಿಂಕ್ಸ್‌ ಬ್ರೇಕ್‌ ವೇಳೆ ಆಟ ಕ್ಷಣ ಕಾಲ ನಿಲುಗಡೆಯಾಗಿತ್ತು. ಆಗ ಒಬ್ಬ ಆಟಗಾರ ಸ್ಪಂಪ್‌ ಬಳಿ ಬಂದು ಹೊಂಚು ಹಾಕಿ ಬ್ಯಾಟ್ಸ್‌ಮನ್ ಹಾಕಿದ್ದ ಮಾರ್ಕ್ ಅಳಿಸಿ ಅಲ್ಲಿಂದ ತೆರಳುತ್ತಾನೆ. ಆ ಬಳಿಕ ಬ್ಯಾಟಿಂಗ್‌ಗೆ ಬರುವ ಪಂತ್ ಮತ್ತೆ ಗೆರೆ ಎಳೆದು ಬ್ಯಾಟಿಂಗ್‌ ಮಾಡುತ್ತಾರೆ. ಈ ದೃಶ್ಯವೆಲ್ಲ ಸ್ಟಂಪ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾರ್ಕ್ ಅಳಿಸುವ ಆಟಗಾರನ ಮುಖ ಕಾಣಿಸುತ್ತಿಲ್ಲ. ಆದರೆ ಅಳಿಸಿದ್ದು ಸ್ಮಿತ್ ಎನ್ನಲಾಗುತ್ತಿದೆ. ಸ್ಮಿತ್ ಅವರ ಈ ವರ್ತನೆ ವಿವಾದ ಸೃಷ್ಟಿಸಿದೆ.

ಸ್ಮಿತ್‌ಗೆ ಕಂಟಕ

ಸ್ಟೀವ್ ಸ್ಮಿತ್ ಅವರು ಪಿಚ್ ಸ್ಕಫಿಂಗ್‌ನಲ್ಲಿ ಪಾಲ್ಗೊಂಡ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಸ್ಮಿತ್ ಆಡುವ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ 2021ರ ಐಪಿಎಲ್ ಸೀಸನ್‌ನಿಂದ ಸ್ಮಿತ್ ಅವರನ್ನು ಕೈಬಿಡಲು ನಿರ್ಧರಿಸಿದೆ ಎನ್ನಲಾಗಿದೆ. ಆರ್‌ಆರ್‌ಗೆ ಸ್ಮಿತ್ ನಾಯಕರಾಗಿದ್ದಾರೆ. ಹೀಗಾಗಿ ಫ್ರಾಂಚೈಸಿ ಸ್ಮಿತ್ ಅವರನ್ನು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಸೇರಿಸಿತ್ತು. ಆದರೆ ಸ್ಮಿತ್ ದುರ್ವರ್ತನೆ ಬಳಿಕ ಅವರನ್ನು ತಂಡದಿಂದ ಕೈಬಿಡಲು ರಾಜಸ್ಥಾನ್ ನಿರ್ಧರಿಸಿದೆ ಎಂದು ಸ್ಪೋರ್ಟ್ಸ್ ಟುಡೇ ವರದಿ ಮಾಡಿದೆ.

ನಿಷೇಧಕ್ಕೀಡಾಗಿದ್ದ ಆರ್‌ಆರ್

ನಿಷೇಧಕ್ಕೀಡಾಗಿದ್ದ ಆರ್‌ಆರ್

2014 ಮತ್ತು 2015ರಲ್ಲಿ ಅಂದರೆ ರಾಸ್ಥಾನ್ ತಂಡ ಐಪಿಎಲ್‌ನಿಂದ ಎರಡು ವರ್ಷಗಳ ಬ್ಯಾನ್‌ಗೆ ಈಡಾಗುವ ಮುನ್ನ ಸ್ಟೀವ್ ಸ್ಮಿತ್ ಅವರು ತಂಡದ ಭಾಗವಾಗಿದ್ದರು. 2008ರ ಚಾಂಪಿಯನ್ಸ್ ಆಗಿರುವ ರಾಜಸ್ಥಾನ್‌ನಿಂದ ಸ್ಮಿತ್ ಅವರು 2018ರ ಸೀಸನ್‌ಗಾಗಿ ಉಳಿಸಿಕೊಂಡಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಚೆಂಡು ವಿರೂಪ ಪ್ರಕರಣಕ್ಕಾಗಿ 1 ವರ್ಷ ನಿಷೇಧಕ್ಕೀಡಾಗಿದ್ದರಿಂದ 2018ರ ಸೀಸನ್‌ನಲ್ಲಿ ಆರ್‌ಆರ್ ನಾಯಕತ್ವವನ್ನು ಅಜಿಂಕ್ಯ ರಹಾನೆ ವಹಿಸಿಕೊಂಡಿದ್ದರು.

Story first published: Wednesday, January 13, 2021, 9:52 [IST]
Other articles published on Jan 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X