ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಕ್ರಿಕೆಟ್‌ಗೆ ಕೊರೊನಾವೈರಸ್ ಗುಮ್ಮ: ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಕರಿಛಾಯೆ

After spread of new COVID-19 variant in South Africa Indias tour of SA under shadow

ಕೊರೊನಾವೈರಸ್‌ ಹೊಸ ರೂಪಾಂತರಿ ಪ್ರಬೇಧ ಈಗ ದಕ್ಷಿಣ ಆಫ್ರಿಕಾಗೆ ಆಘಾತ ನೀಡುತ್ತಿದೆ. ಈ ಹೊಸ ರೂಪಾಂತರಿ ಕೊರೊನಾವೈರಸ್ ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಜಾಗತಿಕ ಮಟ್ಟದಲ್ಲಿಯೂ ಆತಂಕಕ್ಕೆ ಕಾರಣವಾಗಿದೆ. ಅನೇಕ ರಾಷ್ಟ್ರಗಳು ದಕ್ಷಿಣ ಆಫ್ರಿಕಾ ಜೊತೆಗಿನ ವಿಮಾನಯಾನ ಸಂಪರ್ಕಗಳನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸುವ ತೀರ್ಮಾನಕ್ಕೂ ಬಂದಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಕ್ರಿಕೆಟ್ ಮೇಲೆಯೂ ಪರಿಣಾಮ ಬೀರಲಿದೆಯಾ ಎಂಬ ಆತಂಕ ಕ್ರಿಕೆಟ್ ಪ್ರೇಮಿಗಳಿಗೆ ಉಂಟಾಗಿದೆ.

ಮುಂದಿನ ತಿಂಗಳು ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮೂರು ಟೆಸ್ಟ್ ಮೂರು ಏಕದಿನ ಹಾಗೂ ನಾಲ್ಕು ಟಿ20 ಪಂದ್ಯಗಳನ್ನು ಆಡಲಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಪ್ರವಾಸಕ್ಕೆ ಈಗ ಹೊಸ ಪ್ರಬೇಧದ ಕೊರೊನಾವೈರಸ್ ಆತಂಕವನ್ನು ಮೂಡಿಸಿದೆ. ಅಲ್ಲದೆ ಕ್ವಾರಂಟೈನ್ ನಿಯಮಗಳಲ್ಲಿಯೂ ಕೆಲ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆ ದಟ್ಟವಾಗಿದೆ.

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್

ಏಳು ವಾರಗಳ ಪ್ರವಾಸ

ಏಳು ವಾರಗಳ ಪ್ರವಾಸ

ದಕ್ಷಿಣ ಆಫ್ರಿಕಾ ಪ್ರವಾಸ ಕೂಗೊಳ್ಳಲಿರುವ ಟೀಮ್ ಇಂಡಿಯಾ ಈ ಸರಣಿಯಲ್ಲಿ ಮೂರು ಮಾದರಿಯಲ್ಲಿಯೂ ಆತಿಥೇಯ ತಂಡವನ್ನು ಎದುರಿಸಲಿದೆ. ಇದಕ್ಕಾಗು ನಾಲ್ಕು ತಾಣಗಳನ್ನು ನಿಗದಿಗೊಳಿಸಲಾಗಿದ್ದು ಜೋಹಾನ್ಸ್‌ಬರ್ಗ್, ಸೆಂಚುರಿಯನ್, ಪಾರ್ಲ್ ಹಾಗೂ ಕೇಪ್‌ಟೌನ್‌ನಲ್ಲಿ ಈ ಪಂದ್ಯಗಳು ಆಯೋಜನೆಯಾಗಲಿದೆ. ಆದರೆ ಹೊಸ ಪ್ರಬೇಧದ ಕೊರೊನಾವೈರಸ್‌ನ ಕಾರಣದಿಂದಾಗಿ ಈ ಸರಣಿ ಮೇಲೆ ಈಗ ಕರಿ ಛಾಯೆ ಆವರಿಸಿದೆ.

ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ

ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ

ಇನ್ನು ಈ ಪ್ರವಾಸದ ಬಗ್ಗೆ ಬಿಸಿಸಿಐ ಅಧಿಕಾರಿಯಿಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ. ಬಿಸಿಸಿಐ ದಕ್ಷಿಣ ಆಫ್ರಿಕಾದ ಕೊರೊನಾವೈರಸ್‌ನ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದಿದ್ದಾರೆ. "ನೋಡಿ ನಾವು ಈವರೆಗೂ ಮೈದಾನದ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯಿಂದ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಈಗ ನಾವು ಮುಂದಿನ ಹೆಜ್ಜೆಯನ್ನು ನಿರ್ಧರಿಸಲು ಸಾಧ್ಯವಿಲ್ಲ. ಈಗಿನ ಯೋಜನೆಯ ಪ್ರಕಾರ ನಾವು ನ್ಯೂಜಿಲೆಂಡ್ ವಿರುದ್ಧಧ ಸರಣಿ ಅಂತ್ಯವಾಗುತ್ತಿದ್ದಂತೆಯೇ ಡಿಸೆಂಬರ್ 8 ಅಥವಾ 9ರಂದು ದಕ್ಷಿಣ ಆಫ್ರಿಕಾಗೆ ಪ್ರವಾಸ ಕೈಗೊಳ್ಳಲಿದ್ದೇವೆ" ಎಂದಿದ್ದಾರೆ.

ಕಠಿಣ ಕ್ವಾರಂಟೈನ್ ಬಗ್ಗೆ ಸೂಚನೆ ನೀಡಿದ ಬಿಸಿಸಿಐ ಅಧಿಕಾರಿ

ಕಠಿಣ ಕ್ವಾರಂಟೈನ್ ಬಗ್ಗೆ ಸೂಚನೆ ನೀಡಿದ ಬಿಸಿಸಿಐ ಅಧಿಕಾರಿ

ಇನ್ನು ಟೀಮ್ ಇಂಡಿಯಾ ಆಟಗಾರರು ಚಾರ್ಟೆಡ್ ಫ್ಲೈಟ್ ಮೂಲಕ ಮುಂಬೈನಿಂದ ಜೋಹಾನ್ಸ್‌ಬರ್ಗ್‌ಗೆ ತೆರಳಲಿದ್ದಾರೆ. ಹಾಗಿದ್ದರೂ ಆಟಗಾರರು ಎರಡು ಮೂರು ದಿನಗಳ ಕಾಲ ಕಠಿಣ ಕ್ವಾರಂಟೈನ್‌ಗೆ ಒಳಗಾಗಬೇಕಾಗಬಹುದು ಎನ್ನಲಾಗತ್ತಿದೆ. "ಆರಂಭದಲ್ಲಿ ಕಠಿಣ ಕ್ವಾರಂಟೈನ್ ಪೂರೈಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಆದರೆ ಆಟಗಾರರು ಬಯೋಬಬಲ್‌ನಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಆದರೆ ಈಗ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಯುರೋಪಿಯನ್ ಯೂನಿಯನ್‌ಗಳು ತಾತ್ಕಾಲಿಕವಾಗಿ ವಿಮಾನಯಾನವನ್ನು ಸ್ಥಗಿತಗೊಳಿಸಿದೆ. ಈ ಹಿನ್ನಲೆಯಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ" ಎಂದಿದ್ದಾರೆ ಬಿಸಿಸಿಐನ ಹಿರಿಯ ಅಧಿಕಾರಿ.

ಕಳಪೆ ಆಟ ಆಡಿದ ರಹಾನೆಗೆ ಲಕ್ಷ್ಮಣ್ ಪಾಠ | Oneindia Kannada
ಭಾರತ vs ದಕ್ಷಿಣ ಆಫ್ರಿಕಾ ಸರಣಿಯ ವೇಳಾಪಟ್ಟಿ ಹೀಗಿದೆ:

ಭಾರತ vs ದಕ್ಷಿಣ ಆಫ್ರಿಕಾ ಸರಣಿಯ ವೇಳಾಪಟ್ಟಿ ಹೀಗಿದೆ:

ಮೊದಲ ಟೆಸ್ಟ್: ಡಿಸೆಂಬರ್ 17ರಿಂದ 21: ವಾಂಡರರ್ಸ್, ಜೋಹಾನ್ಸ್‌ಬರ್ಗ್
2ನೇ ಟೆಸ್ಟ್: ಡಿಸೆಂಬರ್ 26ರಿಂದ 30: ಸೂಪರ್‌ಸ್ಪೋರ್ಟ್ ಪಾರ್ಕ್, ಸೆಂಚುರಿಯನ್
3ನೇ ಟೆಸ್ಟ್: ಜನವರಿ 3ರಿಂದ 7: ನ್ಯೂಲ್ಯಾಂಡ್ಸ್, ಕೇಪ್ ಟೌನ್

ಏಕದಿನ ಸರಣಿಯ ವೇಳಾಪಟ್ಟಿ ಹಾಗೂ ಸ್ಥಳ
ಮೊದಲ ಏಕದಿನ ಪಂದ್ಯ: ಜನವರಿ 11: ಬೋಲ್ಯಾಂಡ್ ಪಾರ್ಕ್, ಪಾರ್ಲ್
ಎರಡನೇ ಏಕದಿನ ಪಂದ್ಯ: ಜನವರಿ 14: ನ್ಯೂಲ್ಯಾಂಡ್ಸ್, ಕೇಪ್ ಟೌನ್
ಮೂರನೇ ಕದಿನ ಪಂದ್ಯ: ಜನವರಿ 16: ನ್ಯೂಲ್ಯಾಂಡ್ಸ್, ಕೇಪ್ ಟೌನ್

ಟಿ20 ಸರಣಿಯ ವೇಳಾಪಟ್ಟಿ ಹಾಗೂ ಸ್ಥಳ
1 ನೇ T20I: ಜನವರಿ 19: ನ್ಯೂಲ್ಯಾಂಡ್ಸ್, ಕೇಪ್ ಟೌನ್
2 ನೇ T20I: ಜನವರಿ 21: ನ್ಯೂಲ್ಯಾಂಡ್ಸ್, ಕೇಪ್ ಟೌನ್
3 ನೇ T20I: ಜನವರಿ 23: ಬೋಲ್ಯಾಂಡ್ ಪಾರ್ಕ್, ಪಾರ್ಲ್
4 ನೇ T20I: ಜನವರಿ 26: ಬೋಲ್ಯಾಂಡ್ ಪಾರ್ಕ್, ಪಾರ್ಲ್.

Story first published: Friday, November 26, 2021, 19:38 [IST]
Other articles published on Nov 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X