ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ರಹಾನೆ ಸೇರ್ಪಡೆ ತಂಡಕ್ಕೆ ಸ್ಥಿರತೆ ತಂದಿದೆ': ಡೆಲ್ಲಿ ಬ್ಯಾಟ್ಸ್‌ಮನ್ ಧವನ್

Ajinkya Rahanes addition brings stability to Delhi Capitals, says Shikhar Dhawan

ದುಬೈ: ಅಜಿಂಕ್ಯ ರಹಾನೆಯ ಸೇರ್ಪಡೆ ತಂಡಕ್ಕೆ ಸ್ಥಿರತೆ ತಂದಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಚೊಚ್ಚಲ ಪ್ಲೇ ಆಫ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಡೆಲ್ಲಿ ಎದುರುಗೊಳ್ಳುವುಕ್ಕೂ ಮುನ್ನ ಧವನ್ ಈ ಹೇಳಿಕೆ ನೀಡಿದ್ದಾರೆ.

ವಿಮೆನ್ಸ್ ಟಿ20 ಚಾಲೆಂಜ್: ಸೂಪರ್‌ನೊವಾಸ್ ವಿರುದ್ಧ ಗೆದ್ದು ಬೀಗಿದ ವೆಲಾಸಿಟಿವಿಮೆನ್ಸ್ ಟಿ20 ಚಾಲೆಂಜ್: ಸೂಪರ್‌ನೊವಾಸ್ ವಿರುದ್ಧ ಗೆದ್ದು ಬೀಗಿದ ವೆಲಾಸಿಟಿ

ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಾಗಿತ್ತು. ಆ ಪಂದ್ಯದಲ್ಲಿ ಶಿಖರ್ ಧವನ್ 41 ಎಸೆತಗಳಿಗೆ 54 ರನ್ ಕೊಡುಗೆ ನೀಡಿದ್ದರೆ, ಅಜಿಂಕ್ಯ ರಹಾನೆ 46ಕ್ಕೆ 60 ರನ್ ಕೊಡುಗೆ ನೀಡಿದ್ದರು. ಈ ಪಂದ್ಯದಲ್ಲಿ ಡೆಲ್ಲಿ 6 ವಿಕೆಟ್‌ಗಳಿಂದ ಗೆದ್ದಿತ್ತು.

ಈ ಐಪಿಎಲ್‌ ಸೀಸನ್‌ಗೆ ಡೆಲ್ಲಿ ಪಾಲಾಗಿದ್ದ ಅಜಿಂಕ್ಯ ರಹಾನೆಗೆ ಟೂರ್ನಿಯ ಆರಂಭದಿಂದಲೂ ಹೆಚ್ಚಿನ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಆಡಿದ ಒಂದಿಷ್ಟು ಪಂದ್ಯಗಳಲ್ಲಿ ರಹಾನೆ ತಂಡಕ್ಕೆ ಬಲ ತುಂಬುವ ಪ್ರಯತ್ನ ಮಾಡಿದ್ದರು. ಇದನ್ನೇ ಧವನ್ ಸ್ಮರಿಸಿಕೊಂಡಿದ್ದಾರೆ.

ಐಪಿಎಲ್ 2020: ವಿರಾಟ್ ಕೊಹ್ಲಿಗೆ ಸಲಹೆ ನೀಡಿದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ಐಪಿಎಲ್ 2020: ವಿರಾಟ್ ಕೊಹ್ಲಿಗೆ ಸಲಹೆ ನೀಡಿದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್

'ಖಂಡಿತವಾಗಿಯೂ. ರಹಾನೆ ಸೇರ್ಪಡೆ ತಂಡಕ್ಕೆ ಸ್ಥಿರತೆ ತಂದಿದೆ. ಆರ್‌ಸಿಬಿ ವಿರುದ್ಧದ ನಮ್ಮ ಕೊನೇ ಪಂದ್ಯದಲ್ಲಿ ರಹಾನೆ ಅದ್ಭುತ ಹೊಡೆತಗಳನ್ನು ಆಡಿದ್ದರು. ಅವರ ಅನುಭವದ ಬಲ ನಮ್ಮ ತಂಡಕ್ಕಿದ್ದರೆ ನಾನು ಸ್ವತಂತ್ರವಾಗಿ ಆಡಿ ಪಂದ್ಯವನ್ನು ಎದುರಾಳಿ ತಂಡದಿಂದ ದೂರ ಕೊಂಡೊಯ್ಯಬಲ್ಲೆ,' ಎಂದು ಎಎನ್‌ಎ ಜೊತೆ ಮಾತನಾಡಿದ ಧವನ್ ಹೇಳಿದ್ದಾರೆ.

Story first published: Thursday, November 5, 2020, 9:38 [IST]
Other articles published on Nov 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X