ಈತ ಭಾರತದ ಪರವಾಗಿ ಆಡುವುದನ್ನು ಯಾವ ಎದುರಾಳಿಯೂ ಬಯಸಲ್ಲ: ಗ್ರೇಮ್ ಸ್ವಾನ್

Teams do not want Ravindra Jadeja to be playing in India’s T20 World Cup side | Ravindra Jadeja |

ನ್ಯೂಜಿಲ್ಯಾಂಡ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ಲೇಮ್ ಸ್ವಾನ್ ಹೇಳಿಕೆ ನೀಡಿದ್ದಾರೆ. ಅದರಲ್ಲು ಟೀಮ್ ಇಂಡಿಯಾದ ಆಲ್‌ರೌಂಡರ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ ಭರ್ಜರಿಯಾಗಿ ಆಡುತ್ತಿದೆ. ನ್ಯೂಜಿಲ್ಯಾಂಡ್‌ನ ಪಿಚ್‌ನಲ್ಲಿ ಭಾರತೀಯ ಬೌಲರ್‌ಗಳು ಉತ್ತಮ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಈ ವಿಚಾರವಾಗಿ ಇಂಗ್ಲೆಂಡ್‌ನ ಸ್ಪಿನ್ನರ್ ಭಾರತದ ಓರ್ವ ಆಟಗಾರನ ಪ್ರದರ್ಶನದ ಬಗ್ಗೆ ಹೇಳಿಕೆ ನೀಡಿದ್ದಾರೆ.

ಮೊನ್ನೆ ಶಮಿ ಇಂದು ಠಾಕೂರ್: ಫೈನಲ್ ಓವರ್ ಹೀರೋಗಳು!ಮೊನ್ನೆ ಶಮಿ ಇಂದು ಠಾಕೂರ್: ಫೈನಲ್ ಓವರ್ ಹೀರೋಗಳು!

ಈ ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್‌ ನಡೆಯಲಿದೆ. ಈ ವಿಶ್ವಕಪ್‌ ದೃಷ್ಟಿಯಲ್ಲಿಟ್ಟುಕೊಂಡು ಗ್ರೇಮ್‌ ಸ್ವಾನ್ ಈ ಮಾತನ್ನು ಹೇಳಿದ್ದಾರೆ. ಇದು ಟೀಮ್ ಇಂಡಿಯಾದಲ್ಲಿ ಬ್ಯಾಟಿಂಗ್ ಬೌಲಿಂಗ್ ಜೊತೆಗೆ ಆಲ್‌ರೌಂಡರ್‌ಗಳಲ್ಲೂ ಎಷ್ಟು ಪೈಪೋಟಿಯಿದೆ ಎಂಬುದನ್ನು ತೋರಿಸುತ್ತದೆ.

ಸ್ವಾನ್ ಹೇಳಿದ್ದು ಯಾರ ಬಗ್ಗೆ!

ಸ್ವಾನ್ ಹೇಳಿದ್ದು ಯಾರ ಬಗ್ಗೆ!

ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಆಟವನ್ನು ಪ್ರಶಂಸಿಸಿದ್ದಾರೆ. ಟೀಮ್ ಇಂಡಿಯಾ ಪರವಾಗಿ ರವೀಂದ್ರ ಜಡೇಜಾ ಆಡುವುದನ್ನು ಎದುರಾಳಿ ತಂಡಗಳು ಬಯಸುವುದಿಲ್ಲ. ಅದರಲ್ಲೂ ಟಿ20 ವಿಶ್ವಕಪ್‌ನಲ್ಲಿ ಜಡೇಜಾ ಆಡದಿದ್ದರೆ ಎಲ್ಲಾ ತಂಡಗಳು ನಿಟ್ಟುಸಿರು ಬಿಡಲಿವೆ ಎಂಬ ಮಾತನ್ನು ಹೇಳಿದ್ದಾರೆ.

ಮಂಕಾಗಿದ್ದ ಜಡೇಜಾ

ಮಂಕಾಗಿದ್ದ ಜಡೇಜಾ

ವರ್ಷಗಳ ಹಿಂದ ರವೀಂದ್ರ ಜಡೇಜಾ ಆವರ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಅಂತ್ಯವಾಗುವ ಆತಂಕ ಎದುರಾಗಿತ್ತು. ಅವರೀಂದ್ರ ಜಡೇಜಾ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಂಕಾಗಿದ್ದರು. ಆದರೆ ಕಳೆದ ಒಂದು ವರ್ಷದಿಂದೀಚೆಗೆ ಮತ್ತೆ ಅದ್ಭುತ ರೀತಿಯಲ್ಲಿ ಪ್ರದರ್ಶನವನ್ನು ನೀಡುತ್ತಾ ತಂಡಕ್ಕೆ ಆಧಾರವಾಗಿದ್ದಾರೆ.

ಮತ್ತೆ ಟೀಮ್ ಇಂಡಿಯಾದಲ್ಲಿ ಪೈಪೋಟಿ

ಮತ್ತೆ ಟೀಮ್ ಇಂಡಿಯಾದಲ್ಲಿ ಪೈಪೋಟಿ

ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ ಗಾಯಗೊಂಡು ಹೊರಗುಳಿದಿರುವ ಕಾರಣ ರವೀಂದ್ರ ಜಡೇಜಾ ಆ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆದರೆ ಮುಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯಾ ಮತ್ತೆ ತಂಡಕ್ಕೆ ವಾಪಾಸಾಗಲಿರುವ ಕಾರಣ ತಂಡದ ಮ್ಯಾನೇಜ್‌ಮೆಂಟ್‌ಗೆ ಯಾರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳಬೇಕು ಅನ್ನೋದು ದೊಡ್ಡ ಸಮಸ್ಯೆಯಾಗಲಿದೆ. ಆದರೆ ಸ್ವಾನ್ ಪ್ರಕಾರ ಜಡೇಜಾ ಪಾಂಡ್ಯಾಗಿಂತ ಸೂಕ್ತ ಆಟಗಾರ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್‌ಗೆ ಸಲಹೆ ನೀಡಿದ ಸ್ವಾನ್

ವಿಶ್ವಕಪ್‌ಗೆ ಸಲಹೆ ನೀಡಿದ ಸ್ವಾನ್

ಇಂಗ್ಲೀಷ್ ಸ್ಪಿನ್ನರ್ ಗ್ರೇಮ್ ಸ್ವಾನ್ ಪ್ರಕಾರ ಆಸ್ಟ್ರೇಲಿಯಾದಲ್ಲಿ ಮುಂದಿನ ಟಿ20 ವಿಶ್ವಕಪ್‌ ನಡೆಯಲಿರುವ ಕಾರಣ ಟೀಮ್ ಇಂಡಿಯಾಗೆ ರವೀಂದ್ರ ಜಡೇಜಾ ಅತ್ಯುತ್ತಮ ಅಸ್ತ್ರವಾಗಲಿದ್ದಾರೆ. ವಿಕೆಟ್ ಟೇಕರ್ ಬೌಲರ್ ಅಲ್ಲದೇ ಹೋದರೂ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ರನ್ ಕಡಿವಾಣ ಹಾಕಲಿದ್ದಾರೆ ಎಂದು ಗ್ರೇಮ್ ಸ್ವಾನ್ ಹೇಳಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
ALLOW NOTIFICATIONS
For Daily Alerts
Story first published: Friday, January 31, 2020, 15:30 [IST]
Other articles published on Jan 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X