ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹಿಸ್ಟರಿ ಬರೆದ ಅಲ್ಝಾರಿ, ಪಾದಾರ್ಪಣೆ ಪಂದ್ಯದಲ್ಲೇ ದಾಖಲೆ!

Alzarri Joseph records best IPL figures on debut

ಹೈದರಾಬಾದ್, ಏಪ್ರಿಲ್ 7: ಐಪಿಎಲ್ ಪಾದಾರ್ಪಣೆ ಪಂದ್ಯದಲ್ಲೇ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಆ್ಯಂಟಿಗುವಾ ಕ್ರಿಕೆಟರ್ ಅಲ್ಝಾರಿ ಜೋಸೆಫ್ ಐಪಿಎಲ್ ಇತಿಹಾಸ ನಿರ್ಮಿಸಿದ್ದಾರೆ. ಶನಿವಾರ (ಏಪ್ರಿಲ್ 6) ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಪರ ಮೈದಾನಕ್ಕಿಳಿದಿದ್ದ ಅಲ್ಝಾರಿ, ಹೀರೋ ಆಗಿ ಮಿಂಚಿದರು.

ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ' (ಫಲಿತಾಂಶಗಳು, ಪಾಯಿಂಟ್ ಟೇಬಲ್, ಕುತೂಹಲಕಾರಿ ಅಂಶಗಳು ಇಲ್ಲಿವೆ!)

ಹೈದರಾಬಾದ್‌ನಲ್ಲಿ ನಡೆದ ಐಪಿಎಲ್ 19ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮುಂಬೈ, ವೇಗಿ ಲಸಿತ್ ಮಾಲಿಂಗ ಬದಲಿಗೆ ಅಲ್ಝಾರಿ ಜೋಸೆಫ್‌ಗೆ ಅವಕಾಶ ನೀಡಿತ್ತು. ಅಲ್ಝಾರಿಗೆ ಇದು ಐಪಿಎಲ್ ಪಾದಾರ್ಪಣೆ ಪಂದ್ಯವಾಗಿತ್ತು.

ಐಪಿಎಲ್ 2019: ಚೆನ್ನೈ ಸ್ಟೇಡಿಯಂನಲ್ಲಿ ಇತಿಹಾಸ ಬರೆದ ಆರ್ ಅಶ್ವಿನ್ಐಪಿಎಲ್ 2019: ಚೆನ್ನೈ ಸ್ಟೇಡಿಯಂನಲ್ಲಿ ಇತಿಹಾಸ ಬರೆದ ಆರ್ ಅಶ್ವಿನ್

ವೆಸ್ಟ್ ಇಂಡೀಸ್ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅಲ್ಝಾರಿ ಈ ಸಾರಿಯ ಐಪಿಎಲ್‌ನಲ್ಲಿ ತೋರಿದ ಸಾಧನೆ ಮತ್ತು ಈ ಹಿಂದೆ ಐಪಿಎಲ್‌ನಲ್ಲಾಗಿದ್ದ ಬೌಲಿಂಗ್ ದಾಖಲೆಗಳತ್ತ ಒಂದು ಗಿರಕಿ ಹೊಡೆಯೋಣ ಬನ್ನಿ.

ಜೋಸೆಫ್ ಮಾರಕ ಬೌಲಿಂಗ್

ಜೋಸೆಫ್ ಮಾರಕ ಬೌಲಿಂಗ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ಎದುರಾಳಿಗೆ ಸವಾಲಿನ ರನ್ ಗುರಿ ನೀಡುವಲ್ಲಿ ಎಡವಿತ್ತು. 136 ರನ್ ಅಷ್ಟೇ ಪೇರಿಸಿತ್ತು. ಆದರೆ 137 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್‌ ಬ್ಯಾಟ್ಸ್ಮನ್‌ಗಳು ಬೆರಳೆಣಿಕೆಯ ರನ್ನಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಸಾಗಿದರು. ಇದಕ್ಕೆ ಕಾರಣ ಅಲ್ಝಾರಿ ಜೋಸೆಫ್ ಮಾರಕ ಬೌಲಿಂಗ್!

12 ಕೊಟ್ಟು 6 ಕೆಡವಿದರು

12 ಕೊಟ್ಟು 6 ಕೆಡವಿದರು

3.4 ಓವರ್‌ ಎಸೆದಿದ್ದ ಅಲ್ಝಾರಿ ಕೇವಲ 12 ರನ್‌ ನೀಡಿ ಎದುರಾಳಿಯ 6 ವಿಕೆಟ್ ಪಡೆದರು. ಡೇವಿಡ್ ವಾರ್ನರ್ (15 ರನ್), ವಿಜಯ್ ಶಂಕರ್ (5), ದೀಪಕ್ ಹೂಡಾ (20), ರಶೀದ್ ಖಾನ್ (0), ಭುವನೇಶ್ವರ್ ಕುಮಾರ್ (2), ಸಿದ್ಧಾರ್ಥ್ ಕೌಲ್ (0) ವಿಕೆಟ್‌ಗಳನ್ನು ಅಲ್ಝಾರಿ ಬಲಿ ಪಡೆದರು. ಹೀಗಾಗಿ ಹೈದರಾಬಾದ್ ತಂಡ 17.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 96 ರನ್ ಪೇರಿಸಿ 40 ರನ್‌ಗಳಿಂದ ತಲೆ ಬಾಗಿತು.

11 ವರ್ಷಗಳ ದಾಖಲೆ ಧೂಳೀಪಟ

11 ವರ್ಷಗಳ ದಾಖಲೆ ಧೂಳೀಪಟ

ಕೇವಲ 12 ರನ್ನಿಗೆ 6 ವಿಕೆಟ್ ಪಡೆಯುವ ಮೂಲಕ ಜೋಸೆಫ್, ಐಪಿಎಲ್‌ನ ದಶಕದ ಹಿಂದಿನ ದಾಖಲೆ ಮುರಿದಿದ್ದಾರೆ. 11 ವರ್ಷಗಳ ಹಿಂದೆ ಐಪಿಎಲ್ ಆರಂಭಿಕ ಸೀಸನ್‌ನಲ್ಲಿ ಅಂದರೆ 2008ರಲ್ಲಿ ರಾಜಸ್ಥಾನ್ ರಾಯಲ್ಸ್ ಪ್ರತಿನಿಧಿಸಿದ್ದ ಪಾಕಿಸ್ತಾನ ವೇಗಿ ಸೊಹೇಲ್ ತನ್ವೀರ್ ಅವರು ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ 14 ರನ್ನಿಗೆ 6 ವಿಕೆಟ್ ಪಡೆದಿದ್ದರು.

ಹೀರೋ ಆಗಿದ್ದ ಕುಂಬ್ಳೆ

ಹೀರೋ ಆಗಿದ್ದ ಕುಂಬ್ಳೆ

ಐಪಿಎಲ್‌ನಲ್ಲಿ 6 ವಿಕೆಟ್ ಪಡೆದ ದಾಖಲೆ ಆಸ್ಟ್ರೇಲಿಯಾ ಬೌಲರ್ ಆದಂ ಜಂಪಾ ಹೆಸರಿನಲ್ಲೂ ಇದೆ. 2016ರಲ್ಲಿ ರೈಸಿಂಗ್ ಪುಣೆ ವಾರಿಯರ್ಸ್ ತಂಡದ ಆಟಗಾರ ಜಂಪಾ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 19 ರನ್ನಿಗೆ 6 ವಿಕೆಟ್‌ಗಳನ್ನು ಪಡೆದಿದ್ದರು. ಇನ್ನುಳಿದಂತೆ 2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತಿನಿಧಿಸಿ ಅನಿಲ್ ಕುಂಬ್ಳೆ ರಾಜಸ್ಥಾನ್ ರಾಯಲ್ಸ್ ವಿರುದ್ಧ 5 ರನ್ನಿಗೆ 5 ವಿಕೆಟ್‌ಗಳನ್ನು ಕೆಡವಿದ್ದರು.

Story first published: Sunday, April 7, 2019, 1:03 [IST]
Other articles published on Apr 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X