ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನರೇಂದ್ರ ಮೋದಿಗೆ ಥ್ಯಾಂಕ್ಸ್ ಎಂದ ವಿಂಡೀಸ್‌ನ ಆ್ಯಂಡ್ರೆ ರಸೆಲ್

Andre Russell Thanks PM Narendra Modi For Sending COVID-19 Vaccines To Jamaica

ನವದೆಹಲಿ: ವೆಸ್ಟ್‌ ಇಂಡೀಸ್‌ನ ಆಲ್ ರೌಂಡ್ ಆ್ಯಂಡ್ರೆ ರಸೆಲ್ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದಗಳನ್ನು ಸಲ್ಲಿದ್ದಾರೆ. ಜಮೈಕಾಕ್ಕೆ ಕೊರೊನಾವೈರಸ್ ವ್ಯಾಕ್ಸಿನ್‌ಗಳನ್ನು ಕಳುಹಿಸಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ರಸೆಲ್ ಮೋದಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ಐಪಿಎಲ್ 2021: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ಜರ್ಸಿ ಅನಾವರಣಕ್ಕೆ ಕ್ಷಣಗಣನೆಐಪಿಎಲ್ 2021: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ಜರ್ಸಿ ಅನಾವರಣಕ್ಕೆ ಕ್ಷಣಗಣನೆ

ಕಿಂಗ್‌ಸ್ಟನ್ ಹೈ ಕಮೀಷನ್ ಆಫ್ ಇಂಡಿಯಾದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾತನಾಡಿರುವ ಆ್ಯಂಡ್ರೆ ರಸೆಲ್, 'ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಕಿಂಗ್‌ಸ್ಟನ್ ಹೈ ಕಮೀಷನ್ ಆಫ್ ಇಂಡಿಯಾಗೆ ಬಿಗ್ ಬಿಗ್ ಬಿಗ್ ಥ್ಯಾಂಕ್‌ ಹೇಳಲು ನಾನು ಬಯಸುತ್ತೇನೆ. ಕೊರೊನಾ ವ್ಯಾಕ್ಸಿನ್ ಇಲ್ಲಿದೆ. ನಾವು ವ್ಯಾಕ್ಸಿನ್ ತೆಗೆದುಕೊಳ್ಳಲು ಉತ್ಸುಕರಾಗಿದ್ದೇವೆ,' ಎಂದಿದ್ದಾರೆ.

'ಹಿಂದಿನಂತೆ ಜಗತ್ತು ಸಾಮಾನ್ಯ ಸ್ಥಿತಿಗೆ ಹೋಗುವುದನ್ನು ನಾನು ಬಯಸುತ್ತೇವೆ. ಭಾರತದ ಸಹಾಯವನ್ನು ಜಮೈಕಾದ ಜನ ಮೆಚ್ಚಿಕೊಳ್ಳುತ್ತಾರೆ. ಭಾರತ ಮತ್ತು ಜಮೈಕಾ ನಡುವಿನ ಬಾಂಧವ್ಯಕ್ಕೆ ಇದು ಸಾಕ್ಷಿ ಹೇಳುತ್ತದೆ. ಭಾರತ ಮತ್ತು ಜಮೈಕಾ ಈಗ ಸಹೋದರರಂತಿದೆ,' ಎಂದು ರಸೆಲ್ ಮೆಚ್ಚುಗೆಯ ಮಾತುಗಳನ್ನಾಗಿದ್ದಾರೆ.

ಜಮೈಕಾಕ್ಕೆ ಭಾರತ 50,000 ಡೋಸ್‌ ಕೊರೊನಾವೈರಸ್ ವ್ಯಾಕ್ಸಿನ್ ಕಳುಹಿಸಿತ್ತು. ಇದಕ್ಕೆ ವೆಸ್ಟ್‌ ಇಂಡೀಸ್ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಕೂಡ ಭಾರತಕ್ಕೆ ಥ್ಯಾಂಕ್ಸ್ ಹೇಳಿದ್ದರು. ಮಾರ್ಚ್‌ನಲ್ಲಿ ಆ್ಯಂಟಿಗುವಾ ಮತ್ತು ಬರ್ಬುಡಾ 1,75,000 ಕೊರೊನಾವೈರಸ್ ಡೋಸ್‌ಗಳನ್ನು ಸ್ವೀಕರಿಸಿತ್ತು. ಇದರಲ್ಲಿ 50,000 ಡೋಸ್ ಭಾರತದ ಕೊಡುಗೆಯಾಗಿತ್ತು.

Story first published: Thursday, March 18, 2021, 17:04 [IST]
Other articles published on Mar 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X