ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರೀಡಾ ಸಚಿವರಾಗಿ ಕಿರಣ್ ರಿಜಿಜು ಸ್ಥಾನಕ್ಕೆ ಅನುರಾಗ್ ಠಾಕೂರ್ ಆಯ್ಕೆ

Anurag Thakur replaces Kiren Rijiju as new Sports Minister

ನವದೆಹಲಿ: ಕೇಂದ್ರ ಕ್ರೀಡಾ ಸಚಿವರಾಗಿ ಕಿರಣ್ ರಿಜಿಜು ಸ್ಥಾನಕ್ಕೆ ಅನುರಾಗ್ ಠಾಕೂರ್ ಆಯ್ಕೆಯಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ಗೆ ಇನ್ನು ಕೇವಲ ಎರಡು ವಾರಗಳು ಬಾಕಿಯಿರುವಾಗ ಈ ಬದಲಾವಣೆಯಾಗಿದೆ. ಬುಧವಾರ (ಜುಲೈ 7) ನೂತನ ಕ್ರೀಡಾಸಚಿವರ ಆಯ್ಕೆಯಾಗಿದೆ.

ಭಾರತ ವಿರುದ್ಧದ ಸರಣಿಗೂ ಮುನ್ನವೇ ಶ್ರೀಲಂಕಾದ ಏಂಜಲೋ ಮ್ಯಾಥ್ಯೂಸ್ ನಿವೃತ್ತಿ?!ಭಾರತ ವಿರುದ್ಧದ ಸರಣಿಗೂ ಮುನ್ನವೇ ಶ್ರೀಲಂಕಾದ ಏಂಜಲೋ ಮ್ಯಾಥ್ಯೂಸ್ ನಿವೃತ್ತಿ?!

ಕ್ಯಾಬಿನೆಟ್ ಸಚಿವರಾಗಿ ಆಯ್ಕೆಯಾಗಿರುವ 46ರ ಹರೆಯದ ಅನುರಾಗ್ ಠಾಕೂರ್‌ಗೆ ಕ್ರೀಡಾ ಸಚಿವ ಸ್ಥಾನವಲ್ಲದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜವಾಬ್ದಾರಿ ಕೂಡ ನೀಡಲಾಗಿದೆ. ಠಾಕೂರ್ ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ಬೋರ್ಡ್ ಅಧ್ಯಕ್ಷರಾಗಿದ್ದರು.

ಮೇ 2016ರಿಂದ 2017 ಫೆಬ್ರವರಿ ವರೆಗೆ ಅನುರಾಗ್, ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷರಾಗಿದ್ದರು. ಇದಕ್ಕೂ ಮುನ್ನ ಅನುರಾಗ್ ಭಾರತೀಯ ಕ್ರಿಕೆಟ್ ಬೋರ್ಡ್‌ನ ಕಾರ್ಯದರ್ಶಿಯಾಗಿ ಮತ್ತು ಹಿಮಾಚಲ್ ಕ್ರಿಕೆಟ್ ಅಸೋಸಿಯೇಶನ್‌ನ ಮುಖ್ಯಸ್ಥರಾಗಿದ್ದರು.

ಭಾರತ vs ಶ್ರೀಲಂಕಾ: ಶ್ರೀಲಂಕಾದಲ್ಲೇ ಉಳಿಯಲಿದ್ದಾರೆ ಪೃಥ್ವಿ ಶಾ, ದೇವದತ್ ಪಡಿಕ್ಕಲ್ಭಾರತ vs ಶ್ರೀಲಂಕಾ: ಶ್ರೀಲಂಕಾದಲ್ಲೇ ಉಳಿಯಲಿದ್ದಾರೆ ಪೃಥ್ವಿ ಶಾ, ದೇವದತ್ ಪಡಿಕ್ಕಲ್

ಹೋರಾಟ ಮಾಡಿಕೊಂಡು ಕೇಂದ್ರದ ಮಂತ್ರಿಯಾದ ಶೋಭಾ ಕರಂದ್ಲಾಜೆ ಹಿನ್ನಲೆ ಆದ್ರು ಏನು..?| Oneindia Kannada

ಮೇ 2019ರಲ್ಲಿ ಕಿರಣ್ ರಿಜುಜು ಕ್ರೀಡಾ ಸಚಿವರಾಗಿ ಆಯ್ಕೆಯಾಗಿದ್ದರು. ಆಗ ರಿಜಿಜು ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಶೂಟರ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಬದಲಿಗೆ ಸ್ಥಾನಕ್ಕೇರಿದ್ದರು. ಅಂದ್ಹಾಗೆ ಅನುರಾಜ್ ಸಹೋದರ ಅರುಣ್ ಧುಮಾಲ್ ಈಗ ಬಿಸಿಸಿಐಯಲ್ಲಿ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Story first published: Thursday, July 8, 2021, 11:48 [IST]
Other articles published on Jul 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X