ಟಿವಿಲಿ ನೋಡುತ್ತಿದ್ದವರ ಭೇಟಿಯಾಗಲು ಉತ್ಸುಕನಾಗಿದ್ದೇನೆ: ಅರ್ಝನ್

ನವದೆಹಲಿ: ಭಾರತದ ಯುವ ವೇಗಿ ಅರ್ಝನ್ ನಾಗ್ವಾಸ್ವಾಲ್ಲಾ ಬಹಳ ಖುಷಿಯಲ್ಲಿದ್ದಾರೆ. ಯಾಕೆಂದರೆ ಮುಂಬರಲಿರುವ ಭಾರತದ ಇಂಗ್ಲೆಂಡ್ ಪ್ರವಾಸ ಸರಣಿಗೆ ನಾಗ್ವಾಸ್ವಾಲ್ಲಾ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ. ಎಡಗೈ ವೇಗಿ ನಾಗ್ವಾಸ್ವಾಲ್ಲಾ ಇಂಗ್ಲೆಂಡ್ ಪ್ರವಾಸದ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.

ಪಾಕಿಸ್ತಾನ ಎದುರಿನ ಸೋಲಿಗೆ ಜಿಂಬಾಬ್ವೆ ಹೀಯಾಳಿಸಿದ ಪಾಕ್ ಮಾಜಿ ಕ್ರಿಕೆಟಿಗ!

ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಮತ್ತು ಐದು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ವಿರಾಟ್ ಕೊಹ್ಲಿ ಪಡೆ ಮುಂದಿನ ತಿಂಗಳು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಈ ತಂಡದಲ್ಲಿ ಅರ್ಝನ್ ನಾಗ್ವಾಸ್ವಾಲ್ಲಾ ಕೂಡ ಇರಲಿದ್ದಾರೆ.

ದೇಸಿ ಕ್ರಿಕೆಟ್‌ನಲ್ಲಿ ಗುಜರಾತ್ ತಂಡದ ಪರ ಆಡುವ ನಾಗ್ವಾಸ್ವಾಲ್ಲಾ 2019-20ರ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ತಂಡದ ಪರ ಮುಂಚೂಣಿ ವಿಕೆಟ್ ಸರದಾರರಾಗಿದ್ದರು. ಲಿಸ್ಟ್‌ ಎ 20 ಪಂದ್ಯಗಳಲ್ಲಿ 39 ವಿಕೆಟ್‌, 15 ಟಿ20 ಪಂದ್ಯಗಳಲ್ಲಿ 21 ವಿಕೆಟ್‌ ದಾಖಲೆ ನಾಗ್ವಾಸ್ವಾಲ್ಲಾ ಹೊಂದಿದ್ದಾರೆ.

ಎಬಿಡಿಗಿಂತ ಕ್ರಿಸ್ ಗೇಲ್, ಕೊಹ್ಲಿ ಸಖತ್ ಡೇಂಜರಸ್ ಎನ್ನುತ್ತಿವೆ ಈ ಅಂಕಿಅಂಶಗಳು!

'ಬರೀ ಟಿವಿಯಲ್ಲಿ ನೋಡುತ್ತಿದ್ದ ಎಲ್ಲಾ ಕ್ರಿಕೆಟಿಗರನ್ನು ಭೇಟಿಯಾಗಲು ನಾನು ಉತ್ಸುಕನಾಗಿದ್ದೇನೆ. ಅವರೆಲ್ಲರಿಂದಲೂ ಎಷ್ಟೆಲ್ಲಾ ಕಲಿಯಲು ಸಾಧ್ಯವಾಗುತ್ತೋ ಅಷ್ಟೆಲ್ಲಾ ಕಲಿಯಲು ನಾನು ಎದುರು ನೋಡುತ್ತಿದ್ದೇನೆ,' ಎಂದು ಅರ್ಝನ್ ನಾಗ್ವಾಸ್ವಾಲ್ಲಾ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, May 10, 2021, 22:43 [IST]
Other articles published on May 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X