ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್ 2018 ಕದನ ಮುನ್ನೋಟ, ಎಲ್ಲಾ ತಂಡಗಳ ವಿವರ

By Malenadiga

ಬೆಂಗಳೂರು, ಸೆಪ್ಟೆಂಬರ್ 06: 14ನೇ ಏಷ್ಯಾ ಕಪ್ ಟೂರ್ನಮೆಂಟ್ ಸೆಪ್ಟೆಂಬರ್ 15ರಿಂದ ಯುಎಇಯಲ್ಲಿ ಆರಂಭವಾಗಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಆರನೇ ತಂಡವಾಗಿ ಅರ್ಹತೆ ಪಡೆದಿರುವ ಹಾಂಗ್ ಕಾಂಗ್ ನಡುವೆ ಕದನ ನಡೆಯಲಿದೆ.

1984 ಹಾಗೂ 1995ರ ನಂತರ ಮೂರನೇ ಬಾರಿಗೆ ಯುಎಇಯಲ್ಲಿ ಈ ಪ್ರತಿಷ್ಠಿತ ಟೂರ್ನಮೆಂಟ್ ನಡೆಯಲಿದೆ. ಭಾರತ ಹಾಲಿ ಚಾಂಪಿಯನ್ ಆಗಿದೆ.

ಏಷ್ಯಾ ಕಪ್ ವೇಳಾಪಟ್ಟಿ ಪ್ರಕಟ: ಸೆ.19ಕ್ಕೆ ಭಾರತ-ಪಾಕಿಸ್ತಾನ ಕದನಏಷ್ಯಾ ಕಪ್ ವೇಳಾಪಟ್ಟಿ ಪ್ರಕಟ: ಸೆ.19ಕ್ಕೆ ಭಾರತ-ಪಾಕಿಸ್ತಾನ ಕದನ

6 ತಂಡಗಳನ್ನು 2 ಗುಂಪಿನಲ್ಲಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್ ಎ ಗುಂಪಿನಲ್ಲಿದ್ದರೆ, ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳಿವೆ. ರೌಂಡ್ ರಾಬಿನ್ ಲೀಗ್ ನಲ್ಲಿ ಪಂದ್ಯಗಳನ್ನು ನಡೆಯಲಿದ್ದು, ಗುಂಪಿನ ಪ್ರತಿ ತಂಡಗಳು ಪರಸ್ಪರ ಸೆಣಸಾಡಲಿವೆ.

ನಂತರ ಸೂಪರ್ ನಾಲ್ಕು ಹಂತದಲ್ಲಿ ಎರಡು ಗುಂಪಿನ ಟಾಪ್ 4 ತಂಡಗಳು ಸೆಣಸಲಿವೆ. 13 ಪಂದ್ಯಗಳ ನಂತರ ಏಷ್ಯನ್ ಚಾಂಪಿಯನ್ ಯಾರು ಎಂಬುದು ತಿಳಿಯಲಿದೆ.

ಕೆಪಿಎಲ್ 2018: ಹುಬ್ಳಿ ಮಣಿಸಿದ ಬಿಜಾಪುರ್ ಫೈನಲ್ ಪ್ರವೇಶ ಕೆಪಿಎಲ್ 2018: ಹುಬ್ಳಿ ಮಣಿಸಿದ ಬಿಜಾಪುರ್ ಫೈನಲ್ ಪ್ರವೇಶ

ಭಾರತದಲ್ಲೇ ಈ ಟೂರ್ನಮೆಂತ್ ಈ ಬಾರಿ ನಡೆಯಬೇಕಿತ್ತು. ಆದರೆ, ಪಾಕಿಸ್ತಾನ ಹಾಗೂ ಭಾರತ ನಡುವಿನ ಗಡಿವಿವಾದ ಸಮಸ್ಯೆಯಿಂದಾಗಿ, ಪಂದ್ಯಾವಳಿ ಯುಎಇಗೆ ಶಿಫ್ಟ್ ಆಗಿದೆ.

ದುಬೈನ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯ, ಅಬುದಾಭಿಯ ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿದ್ದು, ಸೆಪ್ಟೆಂಬರ್ 28, 2018ಕ್ಕೆ ಅಂತಿಮ ಹಣಾಹಣಿ ನಿಗದಿಯಾಗಿದೆ. ಭಾರತದಲ್ಲಿ ಸ್ಟಾರ್ ಸ್ಫೋಟ್ಸ್ ನಲ್ಲಿ ಲೈವ್ ನೇರ ಪ್ರಸಾರ ವೀಕ್ಷಿಸಬಹುದು.

ಏಷ್ಯಾ ಕಪ್‌ಗೆ ಭಾರತ ಕ್ರಿಕೆಟ್ ತಂಡ ಪ್ರಕಟ

ಏಷ್ಯಾ ಕಪ್‌ಗೆ ಭಾರತ ಕ್ರಿಕೆಟ್ ತಂಡ ಪ್ರಕಟ

ರೋಹಿತ್ ಶರ್ಮ(ನಾಯಕ), ಶಿಖರ್ ಧವನ್ (ಉಪ ನಾಯಕ), ಕೆಎಲ್ ರಾಹುಲ್, ಅಂಬಟಿ ರಾಯುಡು, ಮನೀಶ್ ಪಾಂಡೆ, ಕೇದಾರ್ ಜಾಧವ್, ಎಂಎಸ್ ಧೋನಿ(ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್

ಏಷ್ಯಾಕಪ್ ಗೂ ಮುನ್ನ ಕೊಹ್ಲಿ-ರೋಹಿತ್ ಟ್ವೀಟ್ ಆನ್ ಫಾಲೋ?

ಪಾಕಿಸ್ತಾನ ತಂಡ ಇಂತಿದೆ

ಪಾಕಿಸ್ತಾನ ತಂಡ ಇಂತಿದೆ

ಫಕಾರ್ ಜಮಾನ್, ಇಮಾಮ್ ಉಲ್ ಹಕ್, ಶಾನ್ ಮಸೂದ್, ಬಾಬರ್ ಅಜಮ್, ಶೋಯೆಬ್ ಮಲೀಕ್, ಸಫ್ರಾಜ್ ಅಹ್ಮದ್ (ನಾಯಕ), ಆಸಿಫ್ ಅಲಿ, ಹಾರೀಸ್ ಸೊಹೈಲ್, ಶಾಬಾದ್ ಖಾನ್, ಮೊಹಮ್ಮದ್ ನವಾಜ್, ಫಹೀಂ ಅಶ್ರಫ್,ಹಸನ್ ಅಲಿ, ಮೊಹಮ್ಮದ್ ಆಮೀರ್, ಜುನೈದ್ ಖಾನ್, ಉಸ್ಮಾನ್ ಶಿನ್ವಾರಿ ಹಾಗೂ ಶಾಹೀನ್ ಶಾ ಅಫ್ರಿದಿ.

ಶ್ರೀಲಂಕಾ ತಂಡ

ಶ್ರೀಲಂಕಾ ತಂಡ

ಏಂಜೆಲೋ ಮ್ಯಾಥ್ಯೂಸ್ (ನಾಯಕ), ಕುಸಲ್ ಪೆರೆರಾ, ಕುಸಲ್ ಮೆಂಡಿಸ್, ಉಪುಲ್ ತರಂಗಾ, ದಿನೇಶ್ ಚಾಂಡಿಮಾಲ್, ದನುಷ್ಕ ಗುಣತಿಲಕ, ಥಿಸರಾ ಪೆರೆರಾ, ದಸುನ್ ಶನಕ, ಧನಂಜಯ ಡಿ ಸಿಲ್ವಾ, ಅಕಿಲ ಧನಂಜಯ, ದುಲ್ರುವಾನ್ ಪೆರೆರಾ, ಅಮಿಲಾ ಅಪೊನ್ಸೊ, ಕಸುನ್ ರಂಜಿತಾ, ಸುರಂಗಾ ಲಕ್ಮಲ್, ದುಷ್ಮಂತಾ ಚಮೀರಾ, ಲಸಿತ್ ಮಾಲಿಂಗಾ.

ಬಾಂಗ್ಲಾದೇಶ ತಂಡ

ಬಾಂಗ್ಲಾದೇಶ ತಂಡ

ಮಸ್ರಾಫೆ ಬಿನ್ ಮೊರ್ತಾಜೋ(ನಾಯಕ​), ಶಕೀಬ್ ಅಲ್ ಹಸನ್ (ಉಪ ನಾಯಕ), ತಮೀಮ್ ಇಕ್ಬಾಲ್, ಮೊಹಮ್ಮದ್ ಮಿಥುನ್, ಲಿಟ್ಟೊನ್ ಕುಮಾರ್ ದಾಸ್, ಮುಷ್ಫಿಕರ್ ರಹೀಮ್, ಅರಿಫುಲ್ ಹಕ್, ಮಹಮೂದುಲ್ಲಾ, ಮೊಸಡೆಕ್ ಹುಸೇನ್,ನಜ್ಮುಲ್ ಹುಸೇನ್​, ಮೆಹಿದ್ ಹಸನ್ ಮಿರಾಜ್, ನಜ್ಮುಲ್ ಇಸ್ಲಾಂ ಅಪು, ರುಬೆಲ್ ಹುಸೇನ್, ಮುಸ್ತಾಫಿಜರ್ ರಹಮಾನ್, ಅಬು ಹೈದರ್ ರೋನಿ.

Story first published: Saturday, September 15, 2018, 17:21 [IST]
Other articles published on Sep 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X