ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನಿಲ್ಲದೆ ವಿಶ್ವಕಪ್‌ನಲ್ಲಿ ಸ್ಪರ್ಧೆ ಸಾಧ್ಯವೇ ಇಲ್ಲ: ಏಷ್ಯಾಕಪ್‌ನಲ್ಲಿಲ್ಲದ ಆಟಗಾರನ ಬಗ್ಗೆ ಕಿರಣ್ ಮೋರೆ ಹೇಳಿಕೆ

Asia cup 2022: Former cricketer Kiran More said Mohammed Shami Should include t20 world cup
ಕೆ‌. ಎಲ್ ರಾಹುಲ್ ಗೆ ಅದೃಷ್ಟ ಕೈ ಹಿಡಿಯುತ್ತಾ..? | Oneindia Kannada

ಏಷ್ಯಾ ಕಪ್‌ನಲ್ಲಿ ಭಾಗವಹಿಸುವ ಭಾರತ ತಂಡದ ಸದಸ್ಯರನ್ನು ಮಂಗಳವಾರ ಬಿಸಿಸಿಐ ಘೋಷಣೆ ಮಾಡಿದೆ. ಈ ತಂಡದ ಆಯ್ಕೆಯ ಬಗ್ಗೆ ಸಾಕಷ್ಟು ರೀತಿಯಲ್ಲಿ ಚರ್ಚೆಗಳು ನಡೆಯುತ್ತಿದ್ದು ಆಟಗಾರರ ಆಯ್ಕೆ ಬಗ್ಗೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಕಿರಣ್ ಮೋರೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಏಷ್ಯಾಕಪ್‌ಗೆ ಆಯ್ಕೆ ಮಾಡಿರುವ ಈ ತಂಡ ಟಿ20 ವಿಶ್ವಕಪ್‌ನಲ್ಲಿ ಆಡುವುದಿಲ್ಲ. ಈ ತಂಡಕ್ಕೆ ಓರ್ವ ಆಟಗಾರನ ಸೇರ್ಪಡೆಯಾಗುವುದು ಖಚಿತ ಎಂದಿದ್ದು ಆತನಿಲ್ಲದೆ ವಿಶ್ವಕಪ್‌ನಲ್ಲಿ ಭಾರತ ಆಡುವುದು ಸಾಧ್ಯವೇ ಇಲ್ಲ ಎಂದಿದ್ದಾರೆ. ಕಿರಣ್ ಮೋರೆ ನೀಡಿರುವ ಈ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.

CWG 2022: ಕಾಮನ್‍ವೆಲ್ತ್ ಮುಕ್ತಾಯ; ಭಾರತದ ಪರ ಪದಕ ಗೆದ್ದ ಎಲ್ಲಾ ಕ್ರೀಡಾಪಟುಗಳ ಪಟ್ಟಿCWG 2022: ಕಾಮನ್‍ವೆಲ್ತ್ ಮುಕ್ತಾಯ; ಭಾರತದ ಪರ ಪದಕ ಗೆದ್ದ ಎಲ್ಲಾ ಕ್ರೀಡಾಪಟುಗಳ ಪಟ್ಟಿ

ಕೊಹ್ಲಿ, ಕೆಎಲ್ ಕಮ್‌ಬ್ಯಾಕ್: ಬೂಮ್ರಾ ಹರ್ಷಲ್ ಗಾಯ

ಕೊಹ್ಲಿ, ಕೆಎಲ್ ಕಮ್‌ಬ್ಯಾಕ್: ಬೂಮ್ರಾ ಹರ್ಷಲ್ ಗಾಯ

ಏಷ್ಯಾ ಕಪ್‌ಗೆ 15 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಟೂರ್ನಿಯ ಮೂಲಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಕಮ್ಬ್ಯಾಕ್ ಮಾಡಿದ್ದಾರೆ. ಗಾಯದಿಂದ ಸುದೀರ್ಘ ಕಾಲದಿಂದ ಕೆಎಲ್ ರಾಹುಲ್ ತಂಡದಿಂದ ಹೊರಗುಳಿದಿದ್ದರೆ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದ ಬಳಿಕ ವಿಶ್ರಾಂತಿ ಪಡೆದುಕೊಂಡಿದ್ದರು. ಇನ್ನು ವೇಗಿಗಳಾದ ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ಗಾಯದ ಕಾರಣದಿಂದಾಗಿ ಈ ಟೂರ್ನಿಗೆ ಆಯ್ಕೆಯಾಗಿಲ್ಲ. ಶ್ರೇಯಸ್ ಐಯ್ಯರ್, ದೀಪಕ್ ಚಾಹರ್ ಹಾಗೂ ಅಕ್ಷರ್ ಪಟೇಲ್ ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಈ ತಂಡದಲ್ಲಿ ಅನುಭವಿ ಆಟಗಾರ ಮೊಹಮ್ಮದ್ ಶಮಿ ಅವರನ್ನು ಸೇರಿಸಿಕೊಳ್ಳದ ಬಗ್ಗೆ ಕಿರಣ್ ಮೋರೆ ಪ್ರಶ್ನಿಸಿದ್ದಾರೆ.

ಹಾರ್ದಿಕ್ ಸೇರ್ಪಡೆಗೆ ಮೋರೆ ಹರ್ಷ

ಹಾರ್ದಿಕ್ ಸೇರ್ಪಡೆಗೆ ಮೋರೆ ಹರ್ಷ

ಈ ಸಂದರ್ಭದಲ್ಲಿ ಏಷ್ಯಾಕಪ್‌ಗೆ ಹಾರ್ದಿಕ್ ಪಾಂಡ್ಯ ಅವರ ಸೇರ್ಪಡೆ ಬಗ್ಗೆ ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಹರ್ಷ ವ್ಯಕ್ತಪಡಿಸಿದ್ದಾರೆ. "ಹಾರ್ದಿಕ್ ಪಾಂಡ್ಯ ಕಮ್‌ಬ್ಯಾಕ್ ಮಾಡಿದ ರೀತಿ ಅದ್ಭುತ. ಈಗ ಅವರು 140+ ಕಿ,ಮೀ ವೇಗದಲ್ಲಿ ಬೌಲಿಂಗ್ ನಡೆಸುತ್ತಿದ್ದಾರೆ. ಆತನಂತಾ ಆಟಗಾರನನ್ನು ನಾಯಕ ಬಯಸುತ್ತಾನೆ. ಆತ ರನ್‌ಗಳಿಸಬಲ್ಲ, ವಿಕೆಟ್ ತೆಗೆಯಬಲ್ಲ ಹಾಗೂ ಫೀಲ್ಡಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನಿಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ನಾನು ಒಂದು ಸಂಗತಿ ಹೇಳುತ್ತೇನೆ. ಈ ತಂಡ ವಿಶ್ವಕಪ್‌ಗೆ ಹೋಗಲು ಸಾಧ್ಯವಿಲ್ಲ" ಎಂದಿದ್ದಾರೆ ಕಿರಣ್ ಮೋರೆ.

ಮೊಹಮ್ಮದ್ ಶಮಿ ಇಲ್ಲದೆ ವಿಶ್ವಕಪ್ ಅಸಾಧ್ಯ!

ಮೊಹಮ್ಮದ್ ಶಮಿ ಇಲ್ಲದೆ ವಿಶ್ವಕಪ್ ಅಸಾಧ್ಯ!

ಇನ್ನು ಈ ಸಂದರ್ಭದಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಅನುಭವಿ ಬೌಲರ್ ಮೊಹಮ್ಮದ್ ಶಮಿ ಸೇರ್ಪಡೆ ಅನಿವಾರ್ಯ ಎಂದಿದ್ದಾರೆ ಕಿರಣ್ ಮೋರೆ. ಮೊಹಮ್ಮದ್ ಶಮಿ ಇಲ್ಲದೆ ಭಾರತ ತಂಡ ವಿಶ್ವಕಪ್‌ಗೆ ಪ್ರಯಾಣಿಸಲು ಸಾಧ್ಯವಿಲ್ಲ. ಇದು ವಿಶ್ವಕಪ್‌ಗೆ ತೆರಳುವ ಬ್ಯಾಕ್‌ಅಪ್ ಆಗಿದೆ. ವಿಶ್ವಕಪ್‌ಗಾಗಿ ಇದು ಸಿದ್ಧತೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಕಿರಣ್ ಮೋರೆ. "ಮೊಹಮ್ಮದ್ ಶಮಿ ವಿಶ್ವಕಪ್‌ಗೆ ಪ್ರಯಾಣಿಸಲೇಬೇಕು. ರಾಹುಲ್ ದ್ರಾವಿಡ್ ಆ ಪ್ರಕ್ರಿಯೆಯಲ್ಲಿದ್ದಾರೆ. ಅವರು ಬ್ಯಾಕ್‌ಅಪ್‌ಅನ್ನು ಹೊಂದಲು ಇಷ್ಟಪಡುತ್ತಾರೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಆಯ್ಕೆಗಾರ ಕಿರಣ್ ಮೋರೆ.

ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ಸ್ಕ್ವಾಡ್ ಹೀಗಿದೆ

ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ಸ್ಕ್ವಾಡ್ ಹೀಗಿದೆ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್

Story first published: Tuesday, August 9, 2022, 14:38 [IST]
Other articles published on Aug 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X