ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್ ಅಲ್ಲ; ಈತನೇ ಏಷ್ಯಾಕಪ್, ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾ ಉಪನಾಯಕ!

Asia Cup 2022: Hardik Pandya Likely To Be Named Team Indias Vice-Captain: Report

ಮುಂಬರುವ ಏಷ್ಯಾ ಕಪ್ 2022 ಮತ್ತು ಐಸಿಸಿ ಟಿ20 ವಿಶ್ವಕಪ್‌ 2022 ಟೂರ್ನಿಗಾಗಿ ಭಾರತ ಕ್ರಿಕೆಟ್ ತಂಡದ ಆಯ್ಕೆಗೆ ಈಗಾಗಲೇ ಕಸರತ್ತು ಆರಂಭವಾಗಿದೆ. ಇತ್ತೀಚೆಗಿನ ಹಲವು ಸರಣಿಗಳಲ್ಲಿ ಭಾರತ ತಂಡವನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ. ಓಪನಿಂಗ್, ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಹಲವು ಬದಲಾವಣೆಗಳು ನಡೆಯುತ್ತಿವೆ. ಈ ಮಧ್ಯೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬರುವ ಏಷ್ಯಾ ಕಪ್ 2022 ಮತ್ತು ಟಿ20 ವಿಶ್ವಕಪ್ ಟೂರ್ನಿಗಳಿಗೆ ಮೆನ್ ಇನ್ ಬ್ಲೂ ತಂಡಕ್ಕೆ ಉಪನಾಯಕರಾಗಬಹುದು ಎಂಬ ಸುದ್ದಿ ವೈರಲ್ ಆಗಿದೆ.

IND vs WI: ಮಳೆ ಭೀತಿಯಿಂದ 4ನೇ ಟಿ20 ಪಂದ್ಯ ವಿಳಂಬ: ಹವಾಮಾನ ವರದಿ ಏನಿದೆ?IND vs WI: ಮಳೆ ಭೀತಿಯಿಂದ 4ನೇ ಟಿ20 ಪಂದ್ಯ ವಿಳಂಬ: ಹವಾಮಾನ ವರದಿ ಏನಿದೆ?

ಇತ್ತೀಚೆಗೆ ಕೋವಿಡ್-19 ಪಾಸಿಟಿವ್ ಪರೀಕ್ಷೆಗೆ ಒಳಗಾದ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಕಳೆದುಕೊಂಡ ಕೆಎಲ್ ರಾಹುಲ್‌ ಅವರಿಂದ ಹಾರ್ದಿಕ್ ಪಾಂಡ್ಯ ಉಪ ನಾಯಕನ ಸ್ಥಾನವನ್ನು ಪಡೆದುಕೊಳ್ಳಬಹುದು ಎಂದು ಬಿಸಿಸಿಐನ ಮೂಲಗಳು ಬಹಿರಂಗಪಡಿಸಿವೆ.

ಗುಜರಾತ್ ಟೈಟನ್ಸ್ ಚಾಂಪಿಯನ್ ಮಾಡಿದ ಹಾರ್ದಿಕ್ ಪಾಂಡ್ಯ

ಗುಜರಾತ್ ಟೈಟನ್ಸ್ ಚಾಂಪಿಯನ್ ಮಾಡಿದ ಹಾರ್ದಿಕ್ ಪಾಂಡ್ಯ

"ಉಪನಾಯಕತ್ವಕ್ಕಾಗಿ ಮ್ಯಾನೇಜ್‌ಮೆಂಟ್ ಒಂದು ಹೆಸರನ್ನು ಚರ್ಚಿಸುತ್ತಿದೆ. ಹಿಂದೆ ನಮಗೆ ಉತ್ತಮ ಫಲಿತಾಂಶಗಳನ್ನು ನೀಡಿದ್ದರಿಂದ ಆ ಹೆಸರು ಹಾರ್ದಿಕ್ ಪಾಂಡ್ಯ ಆಗಿರಬಹುದು. ಅವರು ತಮ್ಮ ನಾಯಕತ್ವದಲ್ಲಿ ಗುಜರಾತ್ ಟೈಟನ್ಸ್ ಅನ್ನು ಐಪಿಎಲ್ 2022ರ ಚಾಂಪಿಯನ್‌ಗಳನ್ನಾಗಿ ಮಾಡಿದರು. ಅವರು ದಕ್ಷಿಣ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿಸಿದರು. ಅದೇ ರೀತಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧವೂ ಕೂಡ. ನಾವು ಈ ಹುದ್ದೆಗೆ ಆಲ್‌ರೌಂಡರ್ ಅನ್ನು ಹೆಸರಿಸಲು ಬಯಸುತ್ತೇವೆ ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಹಾರ್ದಿಕ್ ಪಾಂಡ್ಯ ಈ ಹುದ್ದೆಗೆ ಅರ್ಹರು," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ನಾಯಕನಾಗಿದ್ದ ಕೆಎಲ್ ರಾಹುಲ್

ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ನಾಯಕನಾಗಿದ್ದ ಕೆಎಲ್ ರಾಹುಲ್

ಇದಕ್ಕೂ ಮೊದಲು ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಟಿ20 ಸರಣಿಗೆ ನಾಯಕನಾಗಿದ್ದ ಕೆಎಲ್ ರಾಹುಲ್, ಸರಣಿಗೂ ಮೊದಲು ತೊಡೆಸಂದು ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ರಾಹುಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ನಲ್ಲಿ ತಮ್ಮ ತರಬೇತಿಯನ್ನು ಪುನರಾರಂಭಿಸಿದರು.

ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ನಂತರ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿದ ನಂತರ ಮತ್ತು ನಂತರದ ತಿಂಗಳು ಏಕದಿನ ತಂಡದ ನಾಯಕರಾಗಿ ರೋಹಿತ್ ಶರ್ಮಾ ಅವರನ್ನು ನೇಮಿಸಿದ ನಂತರ, ಕೆಎಲ್ ರಾಹುಲ್ ಅವರನ್ನು ವೈಟ್ ಬಾಲ್ ಸ್ವರೂಪಗಳ ಭಾರತದ ಉಪನಾಯಕರಾಗಿ ಹೆಸರಿಸಲಾಯಿತು.

15 ಪಂದ್ಯಗಳಲ್ಲಿ 487 ರನ್ ಗಳಿಸಿದ್ದ ಹಾರ್ದಿಕ್ ಪಾಂಡ್ಯ

15 ಪಂದ್ಯಗಳಲ್ಲಿ 487 ರನ್ ಗಳಿಸಿದ್ದ ಹಾರ್ದಿಕ್ ಪಾಂಡ್ಯ

ಡಿಸೆಂಬರ್ 2021ರಲ್ಲಿ ಭಾರತದ ಆಗಿನ ಟೆಸ್ಟ್ ಉಪನಾಯಕ ರೋಹಿತ್ ಶರ್ಮಾ ಅವರು ಗಾಯದ ಕಾರಣದಿಂದಾಗಿ ಸರಣಿಯಿಂದ ಹೊರಗುಳಿದ ನಂತರ ಕೆಎಲ್ ರಾಹುಲ್‌ರನ್ನು ಭಾರತದ ಟೆಸ್ಟ್ ತಂಡದ ಉಪನಾಯಕರಾಗಿ ಹೆಸರಿಸಲಾಯಿತು.

ಕೆಎಲ್ ರಾಹುಲ್ ತನ್ನ ಕೊನೆಯ ವೈಟ್-ಬಾಲ್ ಆಟವನ್ನು ಫೆಬ್ರವರಿ 2022ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಭಾರತಕ್ಕಾಗಿ ಆಡಿದರು. ಇದರಲ್ಲಿ ಅವರು 49 ರನ್ ಗಳಿಸಿದರು. ಅದು ಏಕದಿನ ಪಂದ್ಯವಾಗಿತ್ತು. ಹಾರ್ದಿಕ್ ಪಾಂಡ್ಯ ಇಲ್ಲಿಯವರೆಗೆ 2022ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಆಲ್‌ರೌಂಡರ್‌ನಲ್ಲಿ ನಾಯಕನ ಲಕ್ಷಣಗಳನ್ನು ಅಭಿಮಾನಿಗಳು ನೋಡಿದ್ದಾರೆ.

ನಾಯಕನಾಗಿ ಹಾರ್ದಿಕ್ ಪಾಂಡ್ಯ ತಮ್ಮ ಚೊಚ್ಚಲ ಋತುವಿನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಇಂಡಿಯನ್ ಪ್ರೀಮಿಯರ್ ಲೀಗ್ ವಿಜಯಕ್ಕೆ ಕಾರಣರಾದರು. ಅವರು 15 ಪಂದ್ಯಗಳಲ್ಲಿ 44.27 ಮತ್ತು ನಾಲ್ಕು ಅರ್ಧ ಶತಕಗಳ ಸರಾಸರಿಯಲ್ಲಿ 487 ರನ್ ಗಳಿಸಿದರು. ಪಂದ್ಯಾವಳಿಯುದ್ದಕ್ಕೂ ಹಾರ್ದಿಕ್ ಪಾಂಡ್ಯ ಎಂಟು ವಿಕೆಟ್‌ಗಳನ್ನು ಪಡೆದು ಆಲ್‌ರೌಂಡರ್ ಎಂದು ಸಾಬೀತುಪಡಿಸಿದರು.

ಐರ್ಲೆಂಡ್‌ ವಿರುದ್ಧ ಭಾರತ 2-0ಯಿಂದ ಗೆದ್ದುಕೊಂಡಿತು

ಐರ್ಲೆಂಡ್‌ ವಿರುದ್ಧ ಭಾರತ 2-0ಯಿಂದ ಗೆದ್ದುಕೊಂಡಿತು

ಮೆನ್ ಇನ್ ಬ್ಲ್ಯೂ ತಂಡ ಜೂನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಉಪನಾಯಕನಾಗಿ ಮೊದಲ ಅನುಭವವನ್ನು ಹೊಂದಿದ್ದರು. ರಿಷಭ್ ಪಂತ್ ನಾಯಕತ್ವದಲ್ಲಿ ನಡೆದ ಸರಣಿಯ ಅಂತಿಮ ಟಿ20 ರದ್ದಾದ ನಂತರ 2-2 ಡ್ರಾದಲ್ಲಿ ಕೊನೆಗೊಂಡಿತು.

ನಂತರ ಹಾರ್ದಿಕ್ ಪಾಂಡ್ಯ ಎರಡು ಟಿ20 ಪಂದ್ಯಗಳನ್ನು ಆಡಲು ಐರ್ಲೆಂಡ್‌ಗೆ ಹೋದ ಭಾರತೀಯ ತಂಡದ ನಾಯಕರಾಗಿ ಹೆಸರಿಸಲ್ಪಟ್ಟರು. ಆ ಸರಣಿಯನ್ನು ಭಾರತ 2-0ಯಿಂದ ಗೆದ್ದುಕೊಂಡಿತು. ಅಲ್ಲಿನಿಂದ ಹಾರ್ದಿಕ್ ಪಾಂಡ್ಯ ನಾಯಕರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ಕೆಎಲ್ ರಾಹುಲ್ ಅವರ ಉಪನಾಯಕ ಮತ್ತು ಭವಿಷ್ಯದ ಟೀಂ ಇಂಡಿಯಾ ನಾಯಕನ ಕನಸಿಗೆ ಕುತ್ತು ಬಂದಿದೆ. ಏನೇ ಆಗಲಿ, ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್‌ನಂತಹ ಪ್ರತಿಷ್ಠಿತ ಟೂರ್ನಿ ಗೆಲ್ಲುವಂತಹ ಭಾರತ ತಂಡದ ಆಯ್ಕೆ ಇರಲಿ ಎಂಬುದು ಭಾರತೀಯ ಕ್ರಿಕೆಟ್ ಪ್ರೇಮಿಗಳ ಆಶಯವಾಗಿದೆ.

Story first published: Saturday, August 6, 2022, 14:15 [IST]
Other articles published on Aug 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X