Asia Cup 2022: ಭಾರತ ಸೂಪರ್‌ 4 ತಲುಪಲು ಈ ಪಂದ್ಯವನ್ನು ಕಡ್ಡಾಯವಾಗಿ ಗೆಲ್ಲಲೇಬೇಕು!

ಸದ್ಯ ಯುಎಇ ನೆಲದಲ್ಲಿ ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ ನಡೆಯುತ್ತಿದ್ದು, ಆಗಸ್ಟ್ 30ರಂದು ನಡೆದ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಪಂದ್ಯದ ಮುಕ್ತಾಯದ ಹಂತಕ್ಕೆ ಟೂರ್ನಿಯ ಒಟ್ಟು 3 ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾದಂತಾಗಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಿದ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳ ಪೈಕಿ ಅಫ್ಘಾನಿಸ್ತಾನ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಜಯ ಸಾಧಿಸಿತು ಹಾಗೂ ತೃತೀಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಗೆದ್ದ ಅಫ್ಘಾನಿಸ್ಥಾನ ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿತು.

Asia Cup 2022: ಹಾಂಗ್‌ಕಾಂಗ್ ವಿರುದ್ಧ ತಂಡಕ್ಕೆ ಪಂತ್ ವಾಪಸ್; ಯಾರನ್ನು ಹೊರ ಹಾಕ್ತಾರೆ ರೋಹಿತ್?Asia Cup 2022: ಹಾಂಗ್‌ಕಾಂಗ್ ವಿರುದ್ಧ ತಂಡಕ್ಕೆ ಪಂತ್ ವಾಪಸ್; ಯಾರನ್ನು ಹೊರ ಹಾಕ್ತಾರೆ ರೋಹಿತ್?

ಹೀಗೆ ಅಫ್ಘಾನಿಸ್ಥಾನ ಗ್ರೂಪ್ ಹಂತದಲ್ಲಿನ ತನ್ನ 2 ಪಂದ್ಯಗಳಲ್ಲಿ ಎರಡೂ ಪಂದ್ಯಗಳನ್ನೂ ಗೆದ್ದಿದ್ದು ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಸೂಪರ್ 4 ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಹಾಗೂ ಬಿ ಗುಂಪಿನ ಉಳಿದ ತಂಡಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿರುವ ಪಂದ್ಯದಲ್ಲಿ ಜಯ ಸಾಧಿಸಲಿರುವ ತಂಡ ಸೂಪರ್ 4 ಸುತ್ತನ್ನು ಪ್ರವೇಶಿಸಲಿದೆ.

Asia Cup 2022: ರೋಹಿತ್ ಕೊಹ್ಲಿಗಿಂತ ಬೆಸ್ಟ್ ಕ್ಯಾಪ್ಟನ್ ಆಗಲು ಇನ್ನೊಂದು ಪಂದ್ಯ ಸಾಕು!Asia Cup 2022: ರೋಹಿತ್ ಕೊಹ್ಲಿಗಿಂತ ಬೆಸ್ಟ್ ಕ್ಯಾಪ್ಟನ್ ಆಗಲು ಇನ್ನೊಂದು ಪಂದ್ಯ ಸಾಕು!

ಇತ್ತ ಎ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಮಾತ್ರ ನಡೆದಿದ್ದು, ಜಯ ಸಾಧಿಸಿರುವ ಭಾರತ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸೋಲನ್ನು ಅನುಭವಿಸಿರುವ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದ್ದರೆ, ಯಾವುದೇ ಪಂದ್ಯವನ್ನು ಆಡಿರದ ಹಾಂಗ್ ಕಾಂಗ್ ದ್ವಿತೀಯ ಸ್ಥಾನದಲ್ಲೇ ಉಳಿದುಕೊಂಡಿದೆ. ಹೀಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾ ಸೂಪರ್ 4 ಸುತ್ತನ್ನು ಪ್ರವೇಶಿಸುವ ಸನಿಹದಲ್ಲಿದೆ.

ಹಾಂಕಾಂಗ್ ವಿರುದ್ಧ ಗೆದ್ದರೆ ಭಾರತ ಸೂಪರ್ 4ಗೆ

ಹಾಂಕಾಂಗ್ ವಿರುದ್ಧ ಗೆದ್ದರೆ ಭಾರತ ಸೂಪರ್ 4ಗೆ

ಪಾಕಿಸ್ತಾನ ವಿರುದ್ಧ ಗೆದ್ದಿರುವ ಟೀಮ್ ಇಂಡಿಯಾ ತನ್ನ ಗುಂಪಿನ ಉಳಿದ ತಂಡವಾದ ಹಾಂಗ್ ಕಾಂಗ್ ವಿರುದ್ಧ ಆಗಸ್ಟ್ 31ರಂದು ಸೆಣಸಾಟ ನಡೆಸಲಿದೆ. ಸದ್ಯ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾ ಹಾಂಕಾಂಗ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಯ ಸಾಧಿಸಿದರೆ ಗ್ರೂಪ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದಂತಾಗಲಿದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಖಚಿತಪಡಿಸಿಕೊಂಡು ಸೂಪರ್ 4 ಸುತ್ತಿಗೆ ಲಗ್ಗೆ ಇಡಲಿದೆ.

ಹಾಂಗ್ ಕಾಂಗ್ ಗೆದ್ದರೆ ಸಮಸ್ಯೆ!

ಹಾಂಗ್ ಕಾಂಗ್ ಗೆದ್ದರೆ ಸಮಸ್ಯೆ!

ಇನ್ನು ಭಾರತ ಮತ್ತು ಹಾಂಗ್ ಕಾಂಗ್ ತಂಡಗಳ ನಡುವೆ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತರೆ ಸೆಪ್ಟೆಂಬರ್ 2ರಂದು ನಡೆಯಲಿರುವ ಪಾಕಿಸ್ತಾನ ಮತ್ತು ಹಾಂಕಾಂಗ್ ತಂಡಗಳ ನಡುವಿನ ಪಂದ್ಯದ ಫಲಿತಾಂಶ ಟೀಮ್ ಇಂಡಿಯಾದ ಸೂಪರ್ 4 ಪ್ರವೇಶವನ್ನು ನಿರ್ಧರಿಸಲಿದೆ. ಹೀಗಾಗಿ ಟೀಮ್ ಇಂಡಿಯಾ ಇತರೆ ಪಂದ್ಯದ ಮೇಲೆ ಅವಲಂಬಿತವಾಗದೆ ನೇರವಾಗಿ ಸೂಪರ್ 4 ಪ್ರವೇಶಿಸಬೇಕೆಂದರೆ ಹಾಂಗ್ ಕಾಂಗ್ ವಿರುದ್ಧದ ಪಂದ್ಯವನ್ನು ಕಡ್ಡಾಯವಾಗಿ ಗೆಲ್ಲಲೇಬೇಕಿದೆ.

ಭಾರತ ಗೆದ್ದರೆ ಪಾಕ್ ಮತ್ತು ಹಾಂಗ್ ಕಾಂಗ್ ತಂಡಗಳ ನಡುವೆ ನಿರ್ಣಾಯಕ ಪಂದ್ಯ

ಭಾರತ ಗೆದ್ದರೆ ಪಾಕ್ ಮತ್ತು ಹಾಂಗ್ ಕಾಂಗ್ ತಂಡಗಳ ನಡುವೆ ನಿರ್ಣಾಯಕ ಪಂದ್ಯ

ಇನ್ನು ನಿರೀಕ್ಷೆಯಂತೆ ಹಾಂಗ್ ಕಾಂಗ್ ತಂಡವನ್ನು ರೋಹಿತ್ ಶರ್ಮಾ ಪಡೆ ಸದೆಬಡಿದು ಸೂಪರ್ 4 ಸುತ್ತಿಗೆ ಪ್ರವೇಶವನ್ನು ಪಡೆದುಕೊಂಡರೆ ಸೆಪ್ಟೆಂಬರ್ 2ರಂದು ನಡೆಯಲಿರುವ ಪಾಕಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳ ನಡುವಿನ ಪಂದ್ಯ ಎ ಗುಂಪಿನಿಂದ ಸೂಪರ್ 4 ಪ್ರವೇಶಿಸಲಿರುವ ಎರಡನೇ ತಂಡ ಯಾವುದು ಎಂಬುದನ್ನು ನಿರ್ಧರಿಸಲಿದೆ. ಈ ಮೂಲಕ ಹಾಂಕಾಂಗ್ ವಿರುದ್ಧ ಭಾರತ ಗೆದ್ದು, ಹಾಂಕಾಂಗ್ ಮತ್ತು ಪಾಕ್ ನಡುವೆ ನಡೆಯುವ ಪಂದ್ಯದಲ್ಲಿ ವಿಜೇತವಾಗುವ ತಂಡ ಮುಂದಿನ ಸುತ್ತಿಗೆ ಲಗ್ಗೆ ಇಡಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 31, 2022, 17:03 [IST]
Other articles published on Aug 31, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X