ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2022: ಪಾಕಿಸ್ತಾನ ವಿರುದ್ಧ ಮ್ಯಾಚ್ ವಿನ್ನರ್ ಆಗಬಲ್ಲ ಭಾರತದ 3 ಆಟಗಾರರು

India vs pakistan

ಆಗಸ್ಟ್‌ ತಿಂಗಳ ಕೊನೆಯಲ್ಲಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ಸಾಂಪ್ರದಾಯಿಕ ಪಂದ್ಯ ನೋಡಲು ಜಗತ್ತು ಕಾಯುತ್ತಿದೆ. ಆಗಸ್ಟ್ 28 ರಂದು ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಅಖಾಡಕ್ಕಿಳಿಯುತ್ತಿದ್ದು, ಗ್ರೂಪ್ ಎನಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ. ಭಾನುವಾರ ನಡೆಯಲಿರುವ ಈ ಪಂದ್ಯವನ್ನ ನೋಡಲು ಇಡೀ ಕ್ರಿಕೆಟ್ ಅಭಿಮಾನಿಗಳು ಕಾತುರಾಗಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಯುಎಇಯಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕೊನೆಯದಾಗಿ ಮುಖಾಮುಖಿಯಾಗಿದ್ದವು. ಅಂದು ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ವಿರಾಟ್ ಕೊಹ್ಲಿ ತಂಡವನ್ನು ಹತ್ತು ವಿಕೆಟ್‌ಗಳಿಂದ ಸೋಲಿಸಿ ಮುಜುಗರಕ್ಕೀಡು ಮಾಡಿತ್ತು. ಆ ದಿನದ ಹೀನಾಯ ಸೋಲನ್ನು ಏಷ್ಯಾಕಪ್ ಮೂಲಕ ಸರಿದೂಗಿಸುವುದು ಭಾರತದ ಗುರಿಯಾಗಿದೆ.

ಕಳೆದ ವಿಶ್ವಕಪ್‌ಗೆ ಹೋಲಿಸಿದರೆ ಪ್ರಮುಖ ಬದಲಾವಣೆ ಎಂದರೆ ಈ ಬಾರಿ ಭಾರತವನ್ನ ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ. ಭಾರತ ತಂಡದಲ್ಲಿ ಬೆರಳೆಣಿಕೆಯಷ್ಟು ಅಗ್ರಮಾನ್ಯ ಆಟಗಾರರಿದ್ದಾರೆ. ಇವರಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿ ಸೋಲಿಸಬಲ್ಲವರು ಮೂವರು ಆಟಗಾರರು ಸಹ ಇದ್ದಾರೆ. ಅವರು ಯಾರು ಎಂದು ಮುಂದೆ ತಿಳಿಯಿರಿ.

ರಿಷಭ್ ಪಂತ್

ರಿಷಭ್ ಪಂತ್

ಯುವ ವಿಕೆಟ್‌ಕೀಪರ್ ರಿಷಬ್ ಪಂತ್ ಪಾಕಿಸ್ತಾನವನ್ನು ಏಕಾಂಗಿಯಾಗಿ ಸೋಲಿಸುವ ಭಾರತದ ಆಟಗಾರರಲ್ಲಿ ಒಬ್ಬರು. ರಿಷಬ್ ತಮ್ಮ ನಿರ್ಭೀತ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರು ಮಧ್ಯಮ ಓವರ್‌ಗಳಲ್ಲಿ ವೇಗವಾಗಿ ರನ್ ಗಳಿಸುವಲ್ಲಿ ನಿಪುಣರಾಗಿದ್ದಾರೆ ಮತ್ತು ಹಿಂದೆಂದೂ ನೋಡಿರದ ಅಸಾಮಾನ್ಯ ಹೊಡೆತಗಳನ್ನು ಸಹ ಹೊಡೆಯುತ್ತಾರೆ.

ಯಾವುದೇ ಬೌಲಿಂಗ್ ಲೈನ್ ಅಪ್‌ಗೆ ರಿಷಭ್ ಮಿಂಚಲು ಶುರುವಾದ್ರೆ ತಡೆಯುವುದು ಅಸಾಧ್ಯ. ಪೇಸ್-ಸ್ಪಿನ್ ವ್ಯತ್ಯಾಸವನ್ನು ಲೆಕ್ಕಿಸದೆ, ಅವರು ಯಾವುದೇ ಬೌಲಿಂಗ್ ಅನ್ನು ಸುಲಭವಾಗಿ ನಿಭಾಯಿಸುತ್ತಾರೆ. ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ರಿಷಭ್ ಅಜೇಯ ಶತಕ ಸಿಡಿಸಿರುವುದು ಇದಕ್ಕೆ ಉತ್ತಮ ಉದಾಹರಣೆ.

ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸತತ ಸೋಲಿಗೆ ಕಾರಣ ಏನು? ಪಾಕ್ ಕ್ರಿಕೆಟಿಗನ ಉತ್ತರ

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್

ಅನುಭವಿ ಆಟಗಾರ ಹಾಗೂ ಟಿ20ಯಲ್ಲಿ ಭಾರತದ ಹೊಸ ಫಿನಿಶರ್ ಆಗಿರುವ ದಿನೇಶ್ ಕಾರ್ತಿಕ್ ಪಾಕಿಸ್ತಾನದ ದಾಳಿಗೆ ಪ್ರತ್ಯುತ್ತರ ನೀಡುವ ಸಾಮರ್ಥ್ಯ ಹೊಂದಿರುವ ಎರಡನೇ ಆಟಗಾರ. ಟೂರ್ನಿಯಲ್ಲಿ ಭಾರತಕ್ಕೆ ಕೆಳ ಕ್ರಮಾಂಕದಲ್ಲಿ ಡಿಕೆ ಬಹಳ ಪ್ರಮುಖ ಆಟಗಾರನಾಗಲಿದ್ದಾರೆ. ಕೊನೆಯ ಓವರ್‌ಗಳಲ್ಲಿ ಹೆಚ್ಚಿನ ಸ್ಟ್ರೈಕ್ ರೇಟ್‌ನೊಂದಿಗೆ ರನ್ ಗಳಿಸುವಲ್ಲಿ ಅವರು ಉತ್ತಮರಾಗಿದ್ದಾರೆ.

ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಾರ್ತಿಕ್ ಅಂತಹ ಎರಡು ಇನ್ನಿಂಗ್ಸ್‌ಗಳನ್ನು ಆಡಿದ್ದರು. ಡಿಕೆ ಪಾಕಿಸ್ತಾನದ ವಿರುದ್ಧವೂ ಇದನ್ನೇ ಪುನರಾವರ್ತಿಸಿದರೆ ಗೆಲುವು ಭಾರತದ ಪಾಲಾಗಲಿದೆ.

Asia Cup 2022: ಭಾರತದಿಂದ ಮೊಹಮ್ಮದ್ ಶಮಿ ಕೈಬಿಟ್ಟಿದ್ದನ್ನು ಬೆಂಬಲಿಸಿ ಕಾರಣ ಕೊಟ್ಟ ಪಾಕ್ ಕ್ರಿಕೆಟಿಗ

Virat Kohli ತಮ್ಮ ನೂರನೇ ಪಂದ್ಯವನ್ನು Pakistan ವಿರುದ್ಧ ಆಡಲಿದ್ದಾರೆ | *Cricket | OneIndia Kannada
ಯುಜವೇಂದ್ರ ಚಹಾಲ್

ಯುಜವೇಂದ್ರ ಚಹಾಲ್

ಸ್ಟಾರ್ ಸ್ಪಿನ್ನರ್ ಯುಜವೇಂದ್ರ ಚಾಹಲ್ ಪಾಕಿಸ್ತಾನವನ್ನು ಎದುರಿಸಲು ಭಾರತದ ಬಳಿಯಿರುವ ಮತ್ತೊಂದು ಪ್ರಬಲ ಅಸ್ತ್ರ. ಕಳೆದ ಟಿ20 ವಿಶ್ವಕಪ್‌ನಲ್ಲಿ ಚಹಾಲ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಹೀಗಾಗಿ ಅಂದು ಪಾಕಿಸ್ತಾನದ ವಿರುದ್ಧ ಆಡಲು ಸಾಧ್ಯವಾಗಲಿಲ್ಲ. ಆದರೆ ಏಷ್ಯಾಕಪ್‌ಗೆ ಚಹಾಲ್‌ರನ್ನು ವಾಪಸ್ ಕರೆಸಿಕೊಳ್ಳುವ ಮೂಲಕ ಭಾರತ ಅದನ್ನು ಸರಿದೂಗಿಸಿದೆ.

ಸ್ಪಿನ್ ಬೌಲಿಂಗ್ ಅನ್ನು ಬೆಂಬಲಿಸುವ ಯುಎಇ ಪಿಚ್‌ಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಬಲ್ಲರು. ಚಹಾಲ್ ಉತ್ತಮ ಸ್ಪಿನ್ನರ್ ಆಗಿದ್ದು, ವಿಕೆಟ್ ಕಬಳಿಸುವ ಹಾಗೂ ಪಂದ್ಯದ ಗತಿಯನ್ನೇ ಬಹುಬೇಗ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಆಡಿದ ಎಲ್ಲಾ ಟಿ20 ಸರಣಿಗಳಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ

Story first published: Wednesday, August 10, 2022, 10:59 [IST]
Other articles published on Aug 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X