ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ಪಂದ್ಯ ಸೋತಿರುವ ಕಳಪೆ ತಂಡವಿದು! ಭಾರತ ಎಷ್ಟು ಸೋತಿದೆ?

Asia Cup 2022: Which team has lost the most number of matches in Asia Cup history

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಈ ವರ್ಷ ಆಯೋಜನೆಯಾಗಿರುವ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ 2020ರಲ್ಲಿಯೇ ನಡೆಯಬೇಕಿತ್ತು. ಆದರೆ, ಆ ವರ್ಷ ಕೊರೊನಾ ಸೋಂಕಿನ ಭೀತಿಯ ಕಾರಣದಿಂದಾಗಿ ಟೂರ್ನಿ ರದ್ದಾಗಿ ಮುಂದೂಡಲ್ಪಟ್ಟಿತ್ತು. ಹೀಗೆ ಮುಂದೂಡಲ್ಪಟ್ಟ ಏಷ್ಯಾಕಪ್ ಟೂರ್ನಿ ಈ ವರ್ಷ ಶ್ರೀಲಂಕಾ ನೆಲದಲ್ಲಿ ನಡೆಯಬೇಕಿತ್ತು. ಆದರೆ ಅಲ್ಲಿನ ಆರ್ಥಿಕ ಪರಿಸ್ಥಿತಿ ಹೀನಾಯ ಹಂತ ತಲುಪಿದ್ದು, ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಟೂರ್ನಿಯನ್ನು ಆಯೋಜನೆ ಮಾಡಲಾಗದ ಕಾರಣ ಸದ್ಯ ಟೂರ್ನಿ ಯುಎಇಗೆ ಸ್ಥಳಾಂತರಿಸಲ್ಪಟ್ಟಿದೆ.

IND vs ZIM: ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿದ್ದರೂ ಸಹ ಈ ಮೂವರಿಗೆ ಆಡುವ ಅವಕಾಶ ಸಿಗುವುದು ಕನಸೇ!IND vs ZIM: ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿದ್ದರೂ ಸಹ ಈ ಮೂವರಿಗೆ ಆಡುವ ಅವಕಾಶ ಸಿಗುವುದು ಕನಸೇ!

ಇನ್ನು ಇದೇ ತಿಂಗಳ 27ರಂದು ನಡೆಯಲಿರುವ ಶ್ರೀಲಂಕಾ ಮತ್ತು ಅಪ್ಘಾನಿಸ್ತಾನ ತಂಡಗಳ ನಡುವಿನ ಪಂದ್ಯದ ಮೂಲಕ ಟೂರ್ನಿ ಆರಂಭಗೊಳ್ಳಲಿದ್ದು, ಟೂರ್ನಿಯ ಅತ್ಯಾಕರ್ಷಕ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹಣಾಹಣಿ ಟೂರ್ನಿಯ ಎರಡನೇ ದಿನವಾದ ಆಗಸ್ಟ್ 28ರಂದು ನಡೆಯಲಿದೆ. ಇನ್ನು ಕಳೆದ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಟ್ರೋಫಿ ಗೆದ್ದು ಹಾಲಿ ಚಾಂಪಿಯನ್ ಎನಿಸಿಕೊಂಡಿರುವ ಟೀಮ್ ಇಂಡಿಯಾ ಈ ಬಾರಿಯೂ ಸಹ ಗೆದ್ದು ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಒಂದಲ್ಲಾ ಎರಡಲ್ಲ ಮೂರು ಬಾರಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲಿವೆ ಭಾರತ ಮತ್ತು ಪಾಕ್!ಒಂದಲ್ಲಾ ಎರಡಲ್ಲ ಮೂರು ಬಾರಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲಿವೆ ಭಾರತ ಮತ್ತು ಪಾಕ್!

ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಸೆಣಸಾಟ ನಡೆಸಲಿದ್ದು, ಮೊದಲಿಗೆ ನಡೆಯಲಿರುವ ಗ್ರೂಪ್ ಹಂತದ ಪಂದ್ಯಗಳಲ್ಲಿ ಎರಡೂ ಗುಂಪುಗಳಲ್ಲಿ ಟಾಪ್ ಎರಡು ಸ್ಥಾನಗಳನ್ನು ಪಡೆದುಕೊಳ್ಳಲಿರುವ ತಂಡಗಳು ಸೂಪರ್ 4 ಸುತ್ತಿಗೆ ಪ್ರವೇಶಿಸಲಿವೆ ಹಾಗೂ ಈ ಸೂಪರ್ 4 ಹಣಾಹಣಿಯಲ್ಲಿ ಟಾಪ್ ಎರಡು ಸ್ಥಾನ ಪಡೆಯಿಲಿರುವ ತಂಡಗಳು ಫೈನಲ್ ಪಂದ್ಯಕ್ಕೆ ಲಗ್ಗೆ ಇಡಲಿವೆ. ಈ ಬಾರಿ ನಡೆಯಲಿರುವ ಏಷ್ಯಾಕಪ್ ಟೂರ್ನಿ ಹದಿನೈದನೇ ಆವೃತ್ತಿಯ ಏಷ್ಯಾಕಪ್ ಆಗಿದ್ದು, ಟಿ ಟ್ವೆಂಟಿ ಮಾದರಿಯಲ್ಲಿ ನಡೆಯಲಿರುವ ಎರಡನೇ ಏಷ್ಯಾಕಪ್ ಟೂರ್ನಿಯಾಗಲಿದೆ. ಇನ್ನು 1984ರಿಂದ 2018ರವರೆಗೂ ನಡೆದಿರುವ ಎಲ್ಲಾ ಏಷ್ಯಾಕಪ್ ಟೂರ್ನಿಗಳ ಪೈಕಿ ಅತಿಹೆಚ್ಚು ಪಂದ್ಯಗಳಲ್ಲಿ ಸೋತಿರುವ ಕಳಪೆ ತಂಡ ಯಾವುದು ಹಾಗೂ ಯಾವ ತಂಡಗಳು ಎಷ್ಟು ಪಂದ್ಯಗಳಲ್ಲಿ ಕಣಕ್ಕಿಳಿದು ಎಷ್ಟು ಪಂದ್ಯಗಳನ್ನು ಸೋತಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಎಲ್ಲಾ ತಂಡಗಳ ಪಂದ್ಯ ಮತ್ತು ಫಲಿತಾಂಶ

ಎಲ್ಲಾ ತಂಡಗಳ ಪಂದ್ಯ ಮತ್ತು ಫಲಿತಾಂಶ

* ಅಪ್ಘಾನಿಸ್ತಾನ ಇಲ್ಲಿಯವರೆಗೂ ಒಟ್ಟು 12 ಏಷ್ಯಾಕಪ್ ಪಂದ್ಯಗಳಲ್ಲಿ ಕಣಕ್ಕಿಳಿದು 5 ಪಂದ್ಯಗಳಲ್ಲಿ ಗೆದ್ದು, 6 ಪಂದ್ಯಗಳಲ್ಲಿ ಸೋತಿದೆ ಹಾಗೂ ಉಳಿದ 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

* ಬಾಂಗ್ಲಾದೇಶ ಇಲ್ಲಿಯವರೆಗೂ ಒಟ್ಟು 48 ಏಷ್ಯಾಕಪ್ ಪಂದ್ಯಗಳಲ್ಲಿ ಕಣಕ್ಕಿಳಿದು 10 ಪಂದ್ಯಗಳಲ್ಲಿ ಗೆದ್ದಿದ್ದು, ಉಳಿದ 38 ಪಂದ್ಯಗಳಲ್ಲಿ ಸೋತಿದೆ.

* ಹಾಂಗ್‌ಕಾಂಗ್ ಇಲ್ಲಿಯವರೆಗೂ ಒಟ್ಟು 9 ಏಷ್ಯಾಕಪ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು ಎಲ್ಲಾ ಪಂದ್ಯಗಳಲ್ಲಿಯೂ ಸೋತು ಗೆಲುವನ್ನೇ ಕಾಣದೇ ಮಂಕಾಗಿದೆ.

* ಟೀಮ್ ಇಂಡಿಯಾ ಒಟ್ಟು 54 ಏಷ್ಯಾಕಪ್ ಪಂದ್ಯಗಳಲ್ಲಿ ಕಣಕ್ಕಿಳಿದು 36 ಪಂದ್ಯಗಳಲ್ಲಿ ಗೆದ್ದು, 16 ಪಂದ್ಯಗಳಲ್ಲಿ ಸೋತಿದೆ, 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದರೆ, ಉಳಿದ 1 ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ಮುಕ್ತಾಯಗೊಂಡಿದೆ.

* ಕ್ರಿಕೆಟ್ ಶಿಶು ಒಮನ್ 3 ಏಷ್ಯಾಕಪ್ ಪಂದ್ಯಗಳಲ್ಲಿ ಕಣಕ್ಕಿಳಿದು 1 ಪಂದ್ಯದಲ್ಲಿ ಮಾತ್ರ ಗೆದ್ದು ಉಳಿದ 2 ಪಂದ್ಯಗಳಲ್ಲಿ ಸೋತಿದೆ.

* ಪಾಕಿಸ್ತಾನ ಇಲ್ಲಿಯವರೆಗೂ ಒಟ್ಟು 49 ಏಷ್ಯಾಕಪ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 28 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ 20 ಪಂದ್ಯಗಳಲ್ಲಿ ಸೋತಿದೆ. ಇನ್ನು ಉಳಿದ 1 ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ.

* ಶ್ರೀಲಂಕಾ ಇಲ್ಲಿಯವರೆಗೂ ಒಟ್ಟು 54 ಏಷ್ಯಾಕಪ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 35 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದ 19 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ.

* 11 ಏಷ್ಯಾಕಪ್ ಪಂದ್ಯಗಳನ್ನಾಡಿರುವ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡ 3 ಪಂದ್ಯಗಳಲ್ಲಿ ಗೆದ್ದು ಉಳಿದ 8 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ.

ಗೆಲುವನ್ನೇ ಕಾಣದ ತಂಡ

ಗೆಲುವನ್ನೇ ಕಾಣದ ತಂಡ

ಹಾಂಗ್‌ಕಾಂಗ್ ತಂಡ ಇಲ್ಲಿಯವರೆಗೂ ಒಟ್ಟು 9 ಏಷ್ಯಾಕಪ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು ಎಲ್ಲಾ ಪಂದ್ಯಗಳಲ್ಲಿಯೂ ಸೋತಿದ್ದು ಏಷ್ಯಾಕಪ್‌ನಲ್ಲಿ ಕಣಕ್ಕಿಳಿದು ಗೆಲುವನ್ನೇ ಸಾಧಿಸದಿರುವ ಏಕೈಕ ತಂಡ ಎಂಬ ಕೆಟ್ಟ ದಾಖಲೆಯನ್ನು ಹೊಂದಿದೆ.

ಅತಿಕೆಟ್ಟ ಸೋಲಿನ ಶೇಕಡಾಂಶ

ಅತಿಕೆಟ್ಟ ಸೋಲಿನ ಶೇಕಡಾಂಶ

ಆಡಿರುವ ಎಲ್ಲಾ ಪಂದ್ಯಗಳಲ್ಲಿಯೂ ಸೋತಿರುವ ತಂಡ ಎಂಬ ಕೆಟ್ಟ ದಾಖಲೆಯನ್ನು ಹಾಂಗ್‌ಕಾಂಗ್ ಹೊಂದಿದ್ದರೆ, 48 ಏಷ್ಯಾಕಪ್ ಪಂದ್ಯಗಳಲ್ಲಿ ಕಣಕ್ಕಿಳಿದು 10 ಪಂದ್ಯಗಳಲ್ಲಿ ಗೆದ್ದಿದ್ದು, ಉಳಿದ 38 ಪಂದ್ಯಗಳಲ್ಲಿ ಸೋತು 79.17% ಪಂದ್ಯಗಳಲ್ಲಿ ಮಣ್ಣು ಮುಕ್ಕಿರುವ ಬಾಂಗ್ಲಾದೇಶ ಅತಿಕೆಟ್ಟ ಸೋಲಿನ ಶೇಕಡಾಂಶವನ್ನು ಹೊಂದಿದೆ.

Story first published: Wednesday, August 17, 2022, 20:58 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X