ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

AUS vs ENG 2nd ODI : ವಿಶ್ವ ಚಾಂಪಿಯನ್ನರಿಗೆ ಮುಖಭಂಗ, ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದ ಆಸ್ಟ್ರೇಲಿಯಾ

AUS vs ENG : Australia Won By 72 Runs In 2nd ODI Against England To Clinch The Series

ಹಾಲಿ ಏಕದಿನ ಮತ್ತು ಟಿ20 ವಿಶ್ವಕಪ್ ವಿಜೇತ ಇಂಗ್ಲೆಂಡ್‌ ಮುಖಭಂಗ ಅನುಭವಿಸಿದೆ. ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಯಲ್ಲಿ 2ನೇ ಪಂದ್ಯದಲ್ಲೂ ಜಯ ಸಾಧಿಸುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿಯನ್ನು ವಶಪಡಿಸಿಕೊಂಡಿದೆ.

ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಉತ್ತಮ ಆಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ 72 ರನ್‌ಗಳ ಜಯ ಸಾಧಿಸಿದೆ. ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಮಿಚೆಲ್ ಮಾರ್ಷ್ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ 50 ಓವರ್ 8 ವಿಕೆಟ್ ಕಳೆದುಕೊಂಡು 280 ರನ್ ಗಳಿಸಿತು.

IPL 2023: ಸ್ಯಾಮ್ ಕರನ್‌ ಖರೀದಿಸಲು ಈ ಮೂರು ತಂಡಗಳ ನಡುವೆ ಭಾರಿ ಪೈಪೋಟಿ ಸಾಧ್ಯತೆIPL 2023: ಸ್ಯಾಮ್ ಕರನ್‌ ಖರೀದಿಸಲು ಈ ಮೂರು ತಂಡಗಳ ನಡುವೆ ಭಾರಿ ಪೈಪೋಟಿ ಸಾಧ್ಯತೆ

ಈ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್ ಆಸ್ಟ್ರೇಲಿಯಾ ಬೌಲರ್ ಗಳ ದಾಳಿಗೆ ತತ್ತರಿಸಿತು. ಸ್ಯಾಮ್ ಬಿಲ್ಲಿಂಗ್ಸ್, ಜೇಮ್ಸ್ ವಿನ್ಸ್ ಅರ್ಧಶತಕ ಗಳಿಸಿದರೂ ಇಂಗ್ಲೆಂಡ್ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 38.5 ಓವರ್ ಗಳಲ್ಲಿ 208 ರನ್ ಗಳಿಸುವಷ್ಟರಲ್ಲಿ ಆಲ್ ಔಟ್ ಆಗುವ ಮೂಲಕ 72 ರನ್‌ಗಳ ಸೋಲನುಭವಿಸಿತು.

ಸ್ಮಿತ್, ಲ್ಯಾಬುಸ್ಚಾಗ್ನೆ, ಮಾರ್ಷ್ ಅರ್ಧಶತಕ

ಸ್ಮಿತ್, ಲ್ಯಾಬುಸ್ಚಾಗ್ನೆ, ಮಾರ್ಷ್ ಅರ್ಧಶತಕ

ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ್ದ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಎರಡನೇ ಪಂದ್ಯದಲ್ಲಿ ಉತ್ತಮ ರನ್ ಗಳಿಸುವಲ್ಲಿ ವಿಫಲರಾದರು. ಆದರೆ, ಸ್ಟೀವ್ ಸ್ಮಿತ್ ತಮ್ಮ ಉತ್ತಮ ಫಾರ್ಮ್ ಮುಂದುವರೆಸಿದರು. 114 ಎಸೆತಗಳಲ್ಲಿ 94 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದರು.

ಮಾರ್ಕಸ್‌ ಲಾಬುಸ್ಚಾಗ್ನೆ ಕೂಡ 55 ಎಸೆತಗಳಲ್ಲಿ 58 ರನ್‌ ಗಳಿಸಿದರು. ಮಿಚೆಲ್ ಮಾರ್ಷ್ ಕೂಡ ತಮ್ಮ ಅರ್ಧಶತಕ ಗಳಿಸಿದರು. 59 ಎಸೆತಗಳಲ್ಲಿ 50 ರನ್ ಗಳಿಸಿ ಔಟಾದರು. ಇಂಗ್ಲೆಂಡ್ ಪರವಾಗಿ ಆದಿಲ್ ರಶೀದ್ 10 ಓವರ್ ಗಳಲ್ಲಿ 57 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು. ಕ್ರಿಸ್ ವೋಕ್ಸ್ ಮತ್ತು ಡೇವಿಡ್ ವಿಲ್ಲಿ ತಲಾ 2 ವಿಕೆಟ್ ಪಡೆದರು.

ಟೀಕೆಗಳ ನಡುವೆ ಕೋಚ್ ರಾಹುಲ್ ದ್ರಾವಿಡ್‌ಗೆ ಬೆಂಬಲ ವ್ಯಕ್ತಪಡಿಸಿದ ಅಶ್ವಿನ್

ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯ

ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯ

281 ರನ್‌ಗಳ ಸವಾಲಿನ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್‌ಗೆ ಆಸ್ಟ್ರೇಲಿಯಾ ಬೌಲರ್ ಗಳು ಆರಂಭದಲ್ಲಿ ಆಘಾತ ನೀಡಿದರು. ಜೇಸನ್ ರಾಯ್ ಮತ್ತು ಡೇವಿಡ್ ಮಲನ್ ಶೂನ್ಯಕ್ಕೆ ಔಟ್ ಆಗಿ ನಿರಾಸೆ ಅನುಭವಿಸಿದರು. ಫಿಲ್ ಸಾಲ್ಟ್ ಕೂಡ 16 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು.

ಜೇಮ್ಸ್ ವಿನ್ಸ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು. ವಿನ್ಸ್ 72 ಎಸೆತಗಳಲ್ಲಿ 60 ರನ್ ಗಳಿಸಿದರು. ಬಿಲ್ಲಿಂಗ್ಸ್ 80 ಎಸೆತಗಳಲ್ಲಿ 71 ರನ್ ಗಳಿಸಿ ಇಂಗ್ಲೆಂಡ್‌ಗೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ಇವರಿಬ್ಬರೂ ಔಟಾದ ನಂತರ, ಯಾವೊಬ್ಬ ಬ್ಯಾಟರ್ ಕೂಡ ಆಸ್ಟ್ರೇಲಿಯಾ ಬೌಲಿಂಗ್ ಎದುರಿಸಲಿಲ್ಲ. ಆಡಮ್ ಝಂಪಾ ಮತ್ತು ಮಿಚೆಲ್ ಸ್ಟಾರ್ಕ್ ತಲಾ 4 ವಿಕೆಟ್ ಪಡೆದು ಮಿಂಚಿದರು. ನಾಯಕ ಜೋಶ್ ಹೇಝಲ್‌ವುಡ್ 2 ವಿಕೆಟ್ ಪಡೆದರು.

ಎರಡೂ ತಂಡಗಳ ಆಡುವ ಬಳಗ

ಎರಡೂ ತಂಡಗಳ ಆಡುವ ಬಳಗ

ಇಂಗ್ಲೆಂಡ್: ಜೇಸನ್ ರಾಯ್, ಫಿಲಿಪ್ ಸಾಲ್ಟ್, ಡೇವಿಡ್ ಮಲನ್, ಜೇಮ್ಸ್ ವಿನ್ಸ್, ಸ್ಯಾಮ್ ಬಿಲ್ಲಿಂಗ್ಸ್, ಮೊಯಿನ್ ಅಲಿ (ನಾಯಕ), ಕ್ರಿಸ್ ವೋಕ್ಸ್, ಸ್ಯಾಮ್ ಕರ್ರಾನ್, ಲಿಯಾಮ್ ಡಾಸನ್, ಡೇವಿಡ್ ವಿಲ್ಲಿ, ಆದಿಲ್ ರಶೀದ್

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಅಲೆಕ್ಸ್ ಕ್ಯಾರಿ, ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೊಯಿನಿಸ್, ಆಶ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹೇಜಲ್‌ವುಡ್(ನಾಯಕ)

Story first published: Saturday, November 19, 2022, 17:07 [IST]
Other articles published on Nov 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X