ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Aus vs Zim: ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆ ಬರೆದ ಮಿಚೆಲ್ ಸ್ಟಾರ್ಕ್

Aus vs Zim: Australias Mitchell Starc Surpasses Saqlain Mushtaq To Become Fastest To 200 ODI Wickets

ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಶನಿವಾರ, ಸೆಪ್ಟೆಂಬರ್ 3ರಂದು ಏಕದಿನ ಪಂದ್ಯಗಳಲ್ಲಿ ಅತಿ ವೇಗವಾಗಿ 200 ವಿಕೆಟ್‌ಗಳನ್ನು ಪಡೆದ ಆಟಗಾರ ಎನಿಸಿಕೊಂಡರು.

ಎಡಗೈ ಆಟಗಾರ ಮಿಚೆಲ್ ಸ್ಟಾರ್ಕ್ ಟೌನ್ಸ್‌ವಿಲ್ಲೆಯ ಟೋನಿ ಐರ್ಲೆಂಡ್ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಇದೇ ವೇಳೆ ಸಕ್ಲೇನ್ ಮುಷ್ತಾಕ್ ಅವರನ್ನು ಹಿಂದಿಕ್ಕಿದರು.

Asia Cup 2022 Super 4: ಪಾಕಿಸ್ತಾನ ವಿರುದ್ಧ ಜಡೇಜಾ ಬದಲಿ ಈತನನ್ನು ಆಡಿಸಿ; ವಾಸಿಂ ಜಾಫರ್Asia Cup 2022 Super 4: ಪಾಕಿಸ್ತಾನ ವಿರುದ್ಧ ಜಡೇಜಾ ಬದಲಿ ಈತನನ್ನು ಆಡಿಸಿ; ವಾಸಿಂ ಜಾಫರ್

ಜಿಂಬಾಬ್ವೆ ತಂಡ 142 ರನ್‌ಗಳ ಚೇಸ್ ಅನ್ನು ಬೆನ್ನಟ್ಟುತ್ತಿದ್ದಾಗ ರಿಯಾನ್ ಬರ್ಲ್ ಅವರನ್ನು ಔಟ್ ಮಾಡಿದ ನಂತರ ಮಿಚೆಲ್ ಸ್ಟಾರ್ಕ್ ತಮ್ಮ ವೇಗದ ವಿಕೆಟ್ ಮೈಲಿಗಲ್ಲನ್ನು ಹೆಚ್ಚಿಸಿಕೊಂಡರು. ಮಿಚೆಲ್ ಸ್ಟಾರ್ಕ್ 8-0-33-1 ಅಂಕಿಅಂಶಗಳೊಂದಿಗೆ ಮುಗಿಸಿದರು. ಆದರೆ ಆಸೀಸ್ ಪಂದ್ಯವನ್ನು ಮೂರು ವಿಕೆಟ್‌ಗಳಿಂದ ಹೀನಾಯವಾಗಿ ಸೋತಿತು. ಇದು ತವರಿನಲ್ಲಿ ಜಿಂಬಾಬ್ವೆ ವಿರುದ್ಧ ಮೊದಲ ಮುಖಭಂಗವಾಗಿದೆ.

102 ಏಕದಿನ ಪಂದ್ಯಗಳಲ್ಲಿ 32 ವರ್ಷದ ಮಿಚೆಲ್ ಸ್ಟಾರ್ಕ್ ಎಂಟು ಬಾರಿ ಐದು ವಿಕೆಟ್‌ಗಳ ಸಾಧನೆಯೊಂದಿಗೆ 200 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 200 ವಿಕೆಟ್‌ಗಳ ಗಡಿಯನ್ನು ತಲುಪಲು ಮಿಚೆಲ್ ಸ್ಟಾರ್ಕ್ ಕೇವಲ 104 ಪಂದ್ಯಗಳನ್ನು ತೆಗೆದುಕೊಂಡರು. ಈ ಮೂಲಕ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಅವರ ದಾಖಲೆಯನ್ನು ಮುರಿದರು.

Aus vs Zim: Australias Mitchell Starc Surpasses Saqlain Mushtaq To Become Fastest To 200 ODI Wickets

ಇದಕ್ಕೂ ಮೊದಲು ಆಸ್ಟ್ರೇಲಿಯಾದ ಆಲ್‌ರೌಂಡರ್ ಆಶ್ಟನ್ ಅಗರ್ ಅವರು ತಮ್ಮ ಸಹ ಆಟಗಾರ ಸ್ಟಂಪ್‌ಗಳನ್ನು ರಾಟಲ್ ಮಾಡುವ ಸಾಮರ್ಥ್ಯದಿಂದಾಗಿ ಮಿಚೆಲ್ ಸ್ಟಾರ್ಕ್ ಅವರನ್ನು ನೆಟ್ಸ್‌ನಲ್ಲಿ ಎದುರಿಸುವುದನ್ನು ದ್ವೇಷಿಸುತ್ತಾರೆ ಎಂದು ಹೇಳಿದರು. ಸ್ಟಾರ್ಕ್ ಅವರ 200 ವಿಕೆಟ್‌ಗಳ ಸಾಧನೆ ಮಾಡಿದ್ದಕ್ಕಾಗಿ ಆಶ್ಟನ್ ಅಗರ್ ಪ್ರಶಂಸಿಸಿದರು.

"140(kph) ಮತ್ತು 150 (kph) ಮಧ್ಯದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ದೊಡ್ಡ ಎಡಗೈ ವೇಗದ ಬೌಲರ್‌ ಭವಿಷ್ಯದಲ್ಲಿ ನೀವು ಸಾಕಷ್ಟು ಎತ್ತರಕ್ಕೆ ಬೆಳೆಯುತ್ತೀರಿ," ಎಂದು 3ನೇ ಏಕದಿನ ಪಂದ್ಯಕ್ಕೂ ಮುನ್ನ ಶುಕ್ರವಾರ ಆಶ್ಟನ್ ಅಗರ್ ಹೇಳಿದ್ದರು.

Asia Cup 2022: ಭಾರತ vs ಪಾಕಿಸ್ತಾನ ಸೂಪರ್ 4 ಪಂದ್ಯ; ಎರಡೂ ತಂಡಗಳಿಗೆ ಫೈನಲ್ ಚಾನ್ಸ್ ಹೇಗೆ?Asia Cup 2022: ಭಾರತ vs ಪಾಕಿಸ್ತಾನ ಸೂಪರ್ 4 ಪಂದ್ಯ; ಎರಡೂ ತಂಡಗಳಿಗೆ ಫೈನಲ್ ಚಾನ್ಸ್ ಹೇಗೆ?

"ನಾವೆಲ್ಲರೂ ಅವನನ್ನು ನೆಟ್‌ಗಳಲ್ಲಿ ಎದುರಿಸುವುದನ್ನು ದ್ವೇಷಿಸುತ್ತೇವೆ. ಅವರು ಅಭ್ಯಾಸ ಮಾಡುವಾಗ ಇಡೀ ದಿನ ಸ್ವಿಂಗ್ ಮಾಡಿ ಸ್ಟಂಪ್ ಎಗರಿಸುತ್ತಾರೆ," ಅವರು ಹೇಳಿದರು.

"ಇನ್ನು ಸಂಖ್ಯೆಯ ಏಕದಿನ ಪಂದ್ಯಗಳಲ್ಲಿ 200 ವಿಕೆಟ್‌ಗಳ ಸಮೀಪವಿರುವ ಅದ್ಭುತ ಸಾಧನೆಯಾಗಿದೆ," ಎಂದು ಆಶ್ಟನ್ ಅಗರ್ ಪಂದ್ಯಕ್ಕೂ ಮುನ್ನ ತಿಳಿಸಿದರು.

ಮಿಚೆಲ್ ಸ್ಟಾರ್ಕ್‌ಗಿಂತ ಮೊದಲು ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅತಿವೇಗವಾಗಿ 200 ಏಕದಿನ ವಿಕೆಟ್‌ಗಳನ್ನು ಪಡೆದ ಆಸ್ಟ್ರೇಲಿಯಾದ ದಾಖಲೆಯನ್ನು ಹೊಂದಿದ್ದರು. ಬ್ರೆಟ್ ಲೀ ತಮ್ಮ 112ನೇ ಏಕದಿನ ಪಂದ್ಯದಲ್ಲಿ 200ನೇ ವಿಕೆಟ್ ಪಡೆದಿದ್ದರು. ಅವರಿಗಿಂತ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Story first published: Saturday, September 3, 2022, 19:34 [IST]
Other articles published on Sep 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X