ಆಸಿಸ್ ನಾಯಕತ್ವ ಮತ್ತೆ ಸ್ಟೀವ್ ಸ್ಮಿತ್ ಹೆಗಲಿಗೆ ? : ಟಿಮ್ ಪೈನ್ ಕೊಟ್ಟ ಸುಳಿವು

Steve Smith ಮತ್ತೊಮ್ಮೆ Australia ನಾಯಕರಾಗುತ್ತಾರಾ ? | Oneindia Kannada

ಕಳೆದ ವರ್ಷಾಂತ್ಯದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತದ ವಿರುದ್ಧ ಹೀನಾಯ ವಾಗಿ ಸೋಲು ಕಂಡ ನಂತರ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವ ಬದಲಾವಣೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ಹಾಲಿ ನಾಯಕ ಟಿಮ್ ಪೈನ್ ಸ್ಥಾನದ ಮೇಲೆ ಈಗಾಗೇ ತೂಗುಗತ್ತಿ ನೇತಾಡುತ್ತಿದೆ. ಆದರೆ ಕೋಚ್ ಹಾಗೂ ಮ್ಯಾನೇಜ್‌ಮೆಂಟ್ ಪೈನ್ ಬೆಂಬಲಕ್ಕೆ ನಿಂತಿದ್ದಾರೆ.

ಆದರೆ ಈಗ ಸ್ವತಃ ಟಿನ್ ಪೈನ್ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಸ್ಟೀವ್ ಸ್ಮಿತ್ ನಾಯಕತ್ವಕ್ಕೆ ಅತ್ಯಂತ ಅರ್ಹ ಎಂದು ಟಿಮ್ ಪೈನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆಯ ಚರ್ಚೆಗೆ ಮತ್ತಷ್ಟು ಬಲ ಬಂದಿದೆ.

ನಮ್ಮ ತಲೆಯನ್ನು ದ್ರಾವಿಡ್ ಭಾರತಕ್ಕೆ ಬಳಸಿಕೊಂಡರು: ಗ್ರೆಗ್ ಚಾಪೆಲ್

ಅವಕಾಶ ಬಂದರೆ ನಾನು ಸಂತೋಷವಾಗಿ ಸ್ಟೀವ್ ಸ್ಮಿತ್‌ಗೆ ನಾಯಕತ್ವ ಹಿಂದಿರುಗಿಸುತ್ತೇನೆ ಎಂದು ಪೈನ್ ಹೇಳಿದ್ದಾರೆ. "ನಿಸ್ಸಂಶಯವಾಗಿ ನಾನು ಆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಸ್ಟೀವ್ ಸ್ಮಿತ್ ಅವರ ನಾಯಕತ್ವದಲ್ಲಿ ಆಡಿದ್ದೇನೆ. ನಾಯಕನಾಗಿ ಆತನೋರ್ವ ಅದ್ಭುತ. ನಾಯಕನಾಗಿ ತಾಂತ್ರಿಕವಾಗಿಯೂ ಆತ ಸಾಕಷ್ಟು ಅತ್ಯುತ್ತಮವಾಗಿದ್ದಾರೆ" ಎಂದು ಪೈನ್ ಪ್ರತಿಕ್ರಿಯಿಸಿದ್ದಾರೆ.

"ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಟ್ಟ ಘಟನೆಯ ನಂತರ ಆತ ನಾಯಕತ್ವದ ಜವಾಬ್ಧಾರಿಯನ್ನು ಮತ್ತೆ ವಹಿಸಿಕೊಳ್ಳಲಿಲ್ಲ. ಆದರೆ ಆತ ಮತ್ತೆ ಆ ಜವಾಬ್ಧಾರಿಯನ್ನು ವಹಿಸಿಕೊಳ್ಳುವುದಕ್ಕೆ ನಾನು ಬೆಂಬಲವನ್ನು ನೀಡುತ್ತೇನೆ" ಎಂದು ಟಿಮ್ ಪೈನ್ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

'ನಾನು ಮತ್ತೆ ಕಣಕ್ಕಿಳಿಯಲಿದ್ದೇನೆ, ಆದರೆ ಐಪಿಎಲ್ ಆಡೋದು ಕಷ್ಟ'

ಟಿಮ್ ಪೈನ್ 2018ರಲ್ಲಿ ಆಸ್ಟ್ರೇಲಿಯಾ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಾಲ್ ಟ್ಯಾಂಪರಿಂಗ್ ಪ್ರಕರಣ ಬಹಿರಂಗವಾದ ಹಿನ್ನೆಲೆಯಲ್ಲಿ ಸ್ಟೀವ್ ಸ್ಮಿತ್ ಅವರನ್ನು ಒಂದು ವರ್ಷ ನಿಷೇಧ ಮಾಡಿದ್ದಲ್ಲೇ ಎರಡು ವರ್ಷ ನಾಯಕತ್ವದಿಂದಲೂ ನಿರ್ಬಂಧವನ್ನು ವಿಧಿಸಲಾಗಿತ್ತು. ಆದರೆ ನಂತರವೂ ಸ್ಟೀವ್ ಸ್ಮಿತ್‌ಗೆ ನಾಯಕತ್ವ ಜವಾಬ್ಧಾರಿ ನೀಡುವ ಮನಸ್ಸು ಆಸಿಸ್ ಮಂಡಳಿ ಮಾಡಿಲ್ಲ.

For Quick Alerts
ALLOW NOTIFICATIONS
For Daily Alerts
Story first published: Thursday, May 13, 2021, 11:24 [IST]
Other articles published on May 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X