ಪಾಕಿಸ್ತಾನ ಏಕದಿನ ತಂಡದ ನಾಯಕನಾಗಿ ಬಾಬರ್ ಅಝಾಮ್ ನೇಮಕ

ಲಾಹೋರ್, ಮೇ 13: ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಝಾಮ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ತನ್ನ ಏಕದಿನ ತಂಡದ ನೂತನ ನಾಯಕನಾಗಿ ಬುಧವಾರ (ಮೇ 13) ಹೆಸರಿಸಿದೆ. ವೈಟ್ ಬಾಲ್‌ನಲ್ಲಿ ಪಾಕಿಸ್ತಾನ ರಾಷ್ಟ್ರೀಯ ತಂಡದ ನಾಯಕತ್ವದ ಜವಾಬ್ದಾರಿ ಬಾಬರ್ ಹೆಗಲೇರಿದೆ. ಐಸಿಸಿ ಟಿ20ಐ ರ್ಯಾಂಕಿಂಗ್‌ನಲ್ಲಿ ಬಾಬರ್ ಸದ್ಯ ನಂ.1 ಸ್ಥಾನದಲ್ಲಿರುವ ಆಟಗಾರ.
ಬಲಗೈ ಬ್ಯಾಟ್ಸ್‌ಮನ್ ಆಗಿರುವ ಬಾಬರ್ ಅಝಾಮ್ ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ ಮುಂಚೂಣಿ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಇದೇ ಬಾಬರ್, ಟಿ20ಐ ಮಾದರಿಯಲ್ಲಿ ಹಿಂದಿನ ನಾಯಕ ಸರ್ಫರಾಜ್ ಅಹ್ಮದ್ ಅವರನ್ನು ಕೆಳಗಿಳಿಸಿ ತಾನು ಜವಾಬ್ದಾರಿ ವಹಿಸಿಕೊಂಡಿದ್ದರು.
ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಸದ್ಯ 26ನೇ ಶ್ರೇಯಾಂಕದಲ್ಲಿರುವ ಅಝರ್ ಅಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್ ಮತ್ತು ಟಿ20 ಕ್ರಿಕೆಟ್‌ನಲ್ಲಿ ಬಾಬರ್ ಅಝಾಮ್ ತಂಡ ಮುನ್ನಡೆಸಲಿದ್ದಾರೆ.
'ನಾಯಕರಾಗಿ ಮುಂದುವರೆಯುತ್ತಿರುವ ಅಝರ್ ಅಲಿ ಮತ್ತು ಬಾಬರ್ ಅಝಾಮ್‌ಗೆ ಅಭಿನಂದನೆಗಳನ್ನು ಸಲ್ಲಿಸಲು ಬಯಸಿದ್ದೇನೆ. ಇದು ನಿಜಕ್ಕೂ ಉತ್ತಮ ನಿರ್ಧಾರ. ಅವರಿಗೂ ಕೂಡ ಭವಿಷ್ಯದಲ್ಲಿ ತಮ್ಮ ಪಾತ್ರ, ಜವಾಬ್ದಾರಿಯ ಬಗ್ಗೆ ಸ್ಪಷ್ಟ ಅರಿವಿರಬೇಕು,' ಎಂದು ಪಾಕ್ ಮುಖ್ಯ ಆಯ್ಕೆದಾರ ಮತ್ತು ಹೆಡ್‌ಕೋಚ್ ಆಗಿರುವ ಮಾಜಿ ಕ್ರಿಕೆಟರ್ ಮಿಸ್ಬಾ ಉಲ್ ಹಕ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications