ಐಸಿಸಿ ಏಪ್ರಿಲ್ ತಿಂಗಳ ಆಟಗಾರ ಪ್ರಶಸ್ತಿ ಪ್ರಕಟ ; ಮೊದಲ ಬಾರಿಗೆ ಭಾರತೀಯರ ಕೈತಪ್ಪಿದ ಪ್ರಶಸ್ತಿ

ಏಪ್ರಿಲ್ ತಿಂಗಳ ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಿಂಗಳ ಆಟಗಾರ ಪ್ರಶಸ್ತಿ ಪ್ರಕಟವಾಗಿದ್ದು ಪಾಕಿಸ್ತಾನದ ಬಾಬರ್ ಅಜಮ್‌ಗೆ ಲಭಿಸಿದೆ. ಸೌತ್ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 82 ಎಸೆತಗಳಿಗೆ 94 ರನ್ ಬಾರಿಸಿ ಪಂದ್ಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಾಬರ್ ಅಜಮ್ ಆಡಿದ ಅದ್ಭುತ ಆಟ ಅವರಿಗೆ 13 ರೇಟಿಂಗ್ ಪಾಯಿಂಟ್‌ಗಳನ್ನು ತಂದುಕೊಟ್ಟಿತು.

ಹಾಗೂ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಬಾಬರ್ ಅಜಮ್ 59 ಎಸೆತಗಳಲ್ಲಿ 122 ರನ್ ಬಾರಿಸಿ ಮಿಂಚಿದರು. ಏಪ್ರಿಲ್ ತಿಂಗಳಿನಲ್ಲಿ ಐಸಿಸಿ ಅತ್ಯುತ್ತಮ ಬ್ಯಾಟ್ಸ್‌ಮನ್‌ ಶ್ರೇಯಾಂಕ ಪಟ್ಟಿಯಲ್ಲಿ ಬಾಬರ್ ಅಜಮ್ ಭಾರತದ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದರು. ಹಾಗೂ ಏಪ್ರಿಲ್ ತಿಂಗಳಿನಲ್ಲಿ ಬಾಬರ್ ಅಜಮ್ 3 ಏಕದಿನ ಪಂದ್ಯಗಳನ್ನಾಡಿ 228 ರನ್ ಬಾರಿಸಿದರು ಮತ್ತು 7 ಟಿ ಟ್ವೆಂಟಿ ಪಂದ್ಯಗಳನ್ನಾಡಿ 305 ರನ್ ಬಾರಿಸಿದರು.

ಈ ಮೂಲಕ ಬಾಬರ್ ಅಜಮ್ ಐಸಿಸಿ ಏಪ್ರಿಲ್ ತಿಂಗಳ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಈ ವರ್ಷದ ಮೊದಲ 3 ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಭಾರತೀಯರೇ ಪಡೆದುಕೊಂಡಿದ್ದರು, ಪ್ರಸ್ತುತ ವರ್ಷದಲ್ಲಿ ಇದೇ ಮೊದಲ ಬಾರಿಗೆ ಭಾರತೀಯರಲ್ಲದೆ ಬೇರೆ ತಂಡದ ಆಟಗಾರನೊಬ್ಬ ತಿಂಗಳ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ವರ್ಷದ ಜನವರಿ ತಿಂಗಳಿನಲ್ಲಿ ರಿಷಭ್ ಪಂತ್, ಫೆಬ್ರವರಿಯಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ಮಾರ್ಚ್ ತಿಂಗಳಿನಲ್ಲಿ ಭುವನೇಶ್ವರ್ ಕುಮಾರ್ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

For Quick Alerts
ALLOW NOTIFICATIONS
For Daily Alerts
Read more about: babar azam icc rankings
Story first published: Monday, May 10, 2021, 15:58 [IST]
Other articles published on May 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X