ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್‌ಮನ್ ಸೈಫ್ ಹಸನ್‌ಗೆ ದಂಡ!

Bangladesh opener Saif Hassan fined Rs 21,600 for overstaying in India

ನವದೆಹಲಿ, ನವೆಂಬರ್ 28: ಬಾಂಗ್ಲಾದೇಶ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಸೈಫ್ ಹಸನ್‌ಗೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 21,600 ರೂ. ದಂಡ ವಿಧಿಸಲಾಗಿದೆ. ವೀಸಾ ಅವಧಿ ಮೀರಿದ್ದಕ್ಕಾಗಿ ದಂಡ ಕಟ್ಟಿದ ಕ್ರಿಕೆಟಿಗ ಹಸನ್, ಆ ಬಳಿಕ ಬುಧವಾರ (ನವೆಂಬರ್ 27) ತವರಿಗೆ ವಿಮಾನಯಾನ ಬೆಳೆಸಿದ್ದಾರೆ.

ಟೆಸ್ಟ್‌ನಲ್ಲಿ ವೇಗಿಗಳ ಪರಾಕ್ರಮ: ಈ ವರ್ಷದಲ್ಲಿ ವೇಗಿಗಳ ಸಾಧನೆ ಹೇಗಿದೆ!ಟೆಸ್ಟ್‌ನಲ್ಲಿ ವೇಗಿಗಳ ಪರಾಕ್ರಮ: ಈ ವರ್ಷದಲ್ಲಿ ವೇಗಿಗಳ ಸಾಧನೆ ಹೇಗಿದೆ!

ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ಬಾಂಗ್ಲಾ ಕ್ರಿಕೆಟ್‌ ತಂಡ, ಆತಿಥೇಯ ಭಾರತದ ಜೊತೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿತ್ತು. ಬಾಂಗ್ಲಾ ಟೆಸ್ಟ್‌ ತಂಡದಲ್ಲಿ ಬ್ಯಾಕ್‌-ಅಪ್ ಓಪನರ್ ಆಗಿ ಹಸನ್, ಭಾರತಕ್ಕೆ ಬಂದಿದ್ದರು. ಅಂದ್ಹಾಗೆ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ 2-0ಯ ಜಯ ಗಳಿಸಿತು.

ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ಗೆ ಕಳವಳ ವ್ಯಕ್ತಪಡಿಸಿದ ಕಪಿಲ್‌ ದೇವ್ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ಗೆ ಕಳವಳ ವ್ಯಕ್ತಪಡಿಸಿದ ಕಪಿಲ್‌ ದೇವ್

ಈಡನ್ ಗಾರ್ಡನ್‌ನಲ್ಲಿ ನಡೆದಿದ್ದ ಡೇ-ನೈಟ್‌ ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಯಕ್ಕೊಳಗಾಗಿದ್ದ ಹಸನ್, ಪಿಂಕ್‌ ಬಾಲ್ ಟೆಸ್ಟ್ ನಲ್ಲಕಿ ಅವಕಾಶ ಕೈತಪ್ಪಿತ್ತು. ಆದರೆ ಪ್ರವಾಸಿ ತಂಡದಲ್ಲೇ ಉಳಿದುಕೊಂಡಿದ್ದ ಹಸನ್‌ಗೆ ತನ್ನ 6 ತಿಂಗಳ ವೀಸಾ ಅವಧಿ ಮುಗಿದಿದ್ದು ಅರಿವಿಗೆ ಬಂದಿರಲಿಲ್ಲ.

ಸೌರವ್ ಗಂಗೂಲಿ ಜೊತೆಗೆ ಕೊಹ್ಲಿಗೂ ಜೈ ಎಂದ ಗೌತಮ್ ಗಂಭೀರ್ !ಸೌರವ್ ಗಂಗೂಲಿ ಜೊತೆಗೆ ಕೊಹ್ಲಿಗೂ ಜೈ ಎಂದ ಗೌತಮ್ ಗಂಭೀರ್ !

'ಹಸನ್ ಅವರ ವೀಸಾ ಅವಧಿ 2 ದಿನಗಳ ಹಿಂದೆಯೇ ಮುಗಿದಿತ್ತು. ಆದರೆ ಇದು ಅವರ ಗಮನಕ್ಕೆ ಬಂದಿದ್ದು ವಿಮಾನ ನಿಲ್ದಾಣಕ್ಕೆ ಬಂದಾಗಲೆ. ವೀಸಾ ಅವಧಿ ಮುಗಿದು ತಂದಿದ್ದಕ್ಕಾಗಿ, ನಿಯಮಾನುಸಾರ ಅವರಿಗೆ ಬುಕ್ ಮಾಡಿದ್ದ ವಿಮಾನದಲ್ಲಿ ಪಯಣಿಸಲಾಗಿಲ್ಲ. ಹಸನ್ ದಂಡ ಕಟ್ಟಬೇಕಾಗಿ ಬಂದಿದೆ,' ಎಂದು ಬಾಂಗ್ಲಾದ ಡೆಪ್ಯುಟಿ ಹೈ ಕಮಿಷನರ್ ತೌಫಿಕ್ ಹಸನ್ ಪಿಟಿಐಗೆ ತಿಳಿಸಿದ್ದಾರೆ.

ಕೆಪಿಎಲ್ ಫಿಕ್ಸಿಂಗ್: ಎಲ್ಲಾ ಆಟಗಾರಿಗೂ ಸಮನ್ಸ್ ಸಮನ್ಸ್‌ ನೀಡಲು ಮುಂದಾದ ಸಿಸಿಬಿಕೆಪಿಎಲ್ ಫಿಕ್ಸಿಂಗ್: ಎಲ್ಲಾ ಆಟಗಾರಿಗೂ ಸಮನ್ಸ್ ಸಮನ್ಸ್‌ ನೀಡಲು ಮುಂದಾದ ಸಿಸಿಬಿ

'ಹಸನ್ ಅವರ ವೀಸಾ ಸಂಸ್ಕರಿಸಿ, ಅವರು ತವರಿಗೆ ಬರಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ಭಾರತದ ಹೈ ಕಮಿಷನ್‌ಗೆ ಧನ್ಯವಾದಗಳು. ಸೈಫ್ ಅವರು ನೆನ್ನೆ (ನವೆಂಬರ್ 27) ಬಾಂಗ್ಲಾಕ್ಕೆ ತಲುಪಿದ್ದಾರೆ,' ಎಂದು ತೌಫಿಕ್ ಮಾಹಿತಿ ನೀಡಿದ್ದಾರೆ. ಹಸನ್ ಬುಕ್ ಮಾಡಿದ್ದ ವಿಮಾನ ತಪ್ಪಿಸಿಕೊಂಡರಾದರೂ ಅದೇ ದಿನ ಹಿಂದಿನ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು.

Story first published: Thursday, November 28, 2019, 23:21 [IST]
Other articles published on Nov 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X