ಇಂಗ್ಲೆಂಡ್ ವಿರುದ್ಧ ಸರಣಿ: ಭಾರತ ಮಹಿಳಾ ತಂಡ ಪ್ರಕಟ

Posted By:
BCCI announce Indian women cricket team

ಮುಂಬೈ, ಮಾರ್ಚ್ 26: ಇಂಗ್ಲೆಂಡ್ ವಿರುದ್ಧದ ಪೇಟಿಎಂ ಏಕದಿನ ಸರಣಿಗೆ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

ಪ್ರಸ್ತುತ ತ್ರಿಕೋನ ಸರಣಿ ಆಡುತ್ತಿರುವ ಭಾತರ ತಂಡ ಅಷ್ಟೇನು ಉತ್ತಮ ಪ್ರದರ್ಶನ ತೋರುತ್ತಿಲ್ಲ, ಈ ಮುಂಚಿನ ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯದ ಸರಣಿಯನ್ನು 0-3 ರಲ್ಲಿ ಸೋತಿದೆ. ಹಾಗಾಗಿ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಬಿಸಿಸಿಐ ಆಯ್ಕೆ ಸಮಿತಿ ಮಾಡಿದೆ.

ಈ ಸರಣಿಯ ನಾಯಕತ್ವವನ್ನು ಮಿಥಾಲಿ ರಾಜ್‌ಗೆ ಮರಳಿ ನೀಡಲಾಗಿರುವುದು ಪ್ರಮುಖ ಅಂಶ. ಜೊತೆಗೆ ಹೊಸ ವಿಕೆಟ್ ಕೀಪರ್ ಸುಷ್ಮಾ ವರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕರ್ನಾಟಕದ ವೇದಾ ಕೃಷ್ಣಮೂರ್ತಿ ಸ್ಥಾನ ಉಳಿಸಿಕೊಂಡಿದ್ದರೆ ತ್ರಿಕೋನ ಸರಣಿಯಿಂದ ಹೊರಗುಳಿದಿದ್ದ ರಾಜೇಶ್ವರಿ ಗಾಯಕ್‌ವಾಡ್ ಮತ್ತೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ದೀಪ್ತಿ ಶರ್ಮಾ, ದಯಲಾನ್ ಹೇಮಲತಾ, ದೇವಿಕಾ ವೈದ್ಯ, ಪೂಜಾ ವಸ್ತ್ರಾಕಾರ್, ಏಕ್ತಾ ಬಿಷ್ಟ್‌ ಅವರುಗಳು ಹೊಸದಾಗಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ಮಹಿಳಾ ಕ್ರಿಕೆಟ್ ತಂಡ ಹೀಗಿದೆ...
ಮಿಥಾಲಿ ರಾಜ್ (ನಾಯಕಿ)
ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ)
ಸ್ಮೃತಿ ಮಂದಾನಾ
ದೀಪ್ತಿ ಶರ್ಮಾ
ಜಿಮ್ಮಾ ರಾಡಿಗ್ರೋಸ್
ದಯಲಾನ್ ಹೇಮಲತಾ
ವೇದಾ ಕೃಷ್ಣಮೂರ್ತಿ
ದೇವಿಕಾ ವೈದ್ಯ
ಜೂಲನ್ ಗೋಸ್ವಾಮಿ
ಶಿಖಾ ಪಾಂಡೆ
ಪೂಜಾ ವಸ್ತ್ರಾಕಾರ್
ಏಕ್ತಾ ಬಿಷ್ಟ್‌
ಪೂನಮ್ ಯಾದವ್
ಸುಷ್ಮಾ ವರ್ಮಾ (ವಿಕೆಟ್ ಕೀಪರ್)
ರಾಜೇಶ್ವರಿ ಗಾಯಕ್‌ವಾಡ್‌

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, March 26, 2018, 21:20 [IST]
Other articles published on Mar 26, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ