ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Team INDIA Schedule 2023 : ಶ್ರೀಲಂಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯ ವೇಳಾಪಟ್ಟಿ ಪ್ರಕಟ

BCCI announced the schedule for the upcoming Mastercard home series against Sri Lanka, New Zealand, and Australia. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಮಹತ್ವದ ತವರಿನ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಮಹತ್ವದ ತವರಿನ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, 2023ರ ಜನವರಿ ಮೊದಲ ವಾರದಿಂದಲೇ ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಪ್ರಾರಂಭವಾಗಲಿದೆ.

IND vs BAN 2022: ಗಾಯಾಳು ರೋಹಿತ್ ಶರ್ಮಾ ಬದಲಿಗೆ ಈ ಬಂಗಾಳದ ಬ್ಯಾಟರ್ ಆಯ್ಕೆ?IND vs BAN 2022: ಗಾಯಾಳು ರೋಹಿತ್ ಶರ್ಮಾ ಬದಲಿಗೆ ಈ ಬಂಗಾಳದ ಬ್ಯಾಟರ್ ಆಯ್ಕೆ?

ಭಾರತ ಕ್ರಿಕೆಟ್ ತಂಡದ 2022-23ರ ಚಕ್ರದಲ್ಲಿ ಅಂತಾರಾಷ್ಟ್ರೀಯ ತವರಿನ ಸರಣಿ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಆರಂಭವಾಗುತ್ತದೆ.

ಶ್ರೀಲಂಕಾ ಕ್ರಿಕೆಟ್ ತಂಡದ ಭಾರತ ಪ್ರವಾಸದ ವೇಳಾಪಟ್ಟಿ

ಶ್ರೀಲಂಕಾ ಕ್ರಿಕೆಟ್ ತಂಡದ ಭಾರತ ಪ್ರವಾಸದ ವೇಳಾಪಟ್ಟಿ

1ನೇ ಟಿ20 ಪಂದ್ಯ - ಜನವರಿ 3, ಮುಂಬೈ.
2ನೇ ಟಿ20 ಪಂದ್ಯ - ಜನವರಿ 5, ಪುಣೆ.
3ನೇ ಟಿ20 ಪಂದ್ಯ - ಜನವರಿ 7, ರಾಜ್‌ಕೋಟ್.

1ನೇ ಏಕದಿನ ಪಂದ್ಯ - ಜನವರಿ 10, ಗುವಾಹಟಿ.
2ನೇ ಏಕದಿನ ಪಂದ್ಯ - ಜನವರಿ 12, ಕೋಲ್ಕತ್ತಾ.
3ನೇ ಏಕದಿನ ಪಂದ್ಯ - ಜನವರಿ 15, ತಿರುವನಂತಪುರ.

ಕಿವೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ

ಕಿವೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ

ಶ್ರೀಲಂಕಾ ವಿರುದ್ಧದ ಸರಣಿಯ ನಂತರ ನ್ಯೂಜಿಲೆಂಡ್ ಕ್ರಿಕೆಟ್ ಭಾರತಕ್ಕೆ ಬರಲಿದ್ದು, ಕಿವೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಚಾಲನೆ ಸಿಗಲಿದೆ.

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಪಂದ್ಯಗಳನ್ನು ಹೈದರಾಬಾದ್, ರಾಯ್‌ಪುರ ಮತ್ತು ಇಂದೋರ್‌ನಲ್ಲಿ ಆತಿಥೇಯ ಭಾರತ ತಂಡ ಆಡಲಿದೆ. ಜನವರಿ 21ರಂದು ನಡೆಯಲಿರುವ ಎರಡನೇ ಏಕದಿನ ಪಂದ್ಯ ರಾಯ್‌ಪುರ ನಗರಕ್ಕೆ ಮಹತ್ವದ್ದಾಗಿದೆ. ಏಕೆಂದರೆ ರಾಯ್‌ಪುರದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲಿದೆ.

ಅನಂತರ ರಾಂಚಿ, ಲಕ್ನೋ ಮತ್ತು ಅಹಮದಾಬಾದ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾವು ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನೂ ಆಡಲಿದೆ.

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಭಾರತ ಪ್ರವಾಸದ ವೇಳಾಪಟ್ಟಿ

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಭಾರತ ಪ್ರವಾಸದ ವೇಳಾಪಟ್ಟಿ

1ನೇ ಏಕದಿನ ಪಂದ್ಯ - ಜನವರಿ 18, ಹೈದರಾಬಾದ್
2ನೇ ಏಕದಿನ ಪಂದ್ಯ - ಜನವರಿ 21, ರಾಯಪುರ
3ನೇ ಏಕದಿನ ಪಂದ್ಯ - ಜನವರಿ 24, ಇಂಧೋರ್

1ನೇ ಟಿ20 ಪಂದ್ಯ - ಜನವರಿ 27, ರಾಂಚಿ
2ನೇ ಟಿ20 ಪಂದ್ಯ - ಜನವರಿ 29, ಲಕ್ನೋ
3ನೇ ಟಿ20 ಪಂದ್ಯ - ಫೆಬ್ರವರಿ 1, ಅಹಮದಾಬಾದ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಭಾರತ ಪ್ರವಾಸದ ವೇಳಾಪಟ್ಟಿ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಭಾರತ ಪ್ರವಾಸದ ವೇಳಾಪಟ್ಟಿ

ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಪ್ರವಾಸದ ಬೆನ್ನಲ್ಲೇ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಪ್ರವಾಸ ಕೈಗೊಳ್ಳಲಿದೆ. ಫೆಬ್ರವರಿ 9ರಿಂದ ನಾಗ್ಪುರದಲ್ಲಿ ಮೊದಲ ಟೆಸ್ಟ್ ಪಂದ್ಯದ ಮೂಲಕ ಸರಣಿ ಆರಂಭವಾಗಲಿದೆ.

1ನೇ ಟೆಸ್ಟ್ ಪಂದ್ಯ - ಫೆಬ್ರವರಿ 9ರಿಂದ 13, ನಾಗ್ಪುರ.
2ನೇ ಟೆಸ್ಟ್ ಪಂದ್ಯ - ಫೆಬ್ರವರಿ 17ರಿಂದ 21, ದೆಹಲಿ.
3ನೇ ಟೆಸ್ಟ್ ಪಂದ್ಯ - ಮಾರ್ಚ್ 1ರಿಂದ 5, ಧರ್ಮಶಾಲಾ.
4ನೇ ಟೆಸ್ಟ್ ಪಂದ್ಯ - ಮಾರ್ಚ್ 9ರಿಂದ 13, ಅಹಮದಾಬಾದ್.

ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಮುಕ್ತಾಯ

ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಮುಕ್ತಾಯ

ಟೀಂ ಇಂಡಿಯಾ ಮುಂದಿನ ಮೂರು ಟೆಸ್ಟ್ ಪಂದ್ಯಗಳನ್ನು ದೆಹಲಿ, ಧರ್ಮಶಾಲಾ ಮತ್ತು ಅಹಮದಾಬಾದ್‌ನಲ್ಲಿ ಆಡಲಿದೆ. ಇದು ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಆವೃತ್ತಿಯಾಗಿದೆ.

1ನೇ ಏಕದಿನ ಪಂದ್ಯ - ಮಾರ್ಚ್ 17, ಮುಂಬೈ.
2ನೇ ಏಕದಿನ ಪಂದ್ಯ - ಮಾರ್ಚ್ 19, ವಿಶಾಖಪಟ್ಟಣ.
3ನೇ ಏಕದಿನ ಪಂದ್ಯ - ಮಾರ್ಚ್ 22, ಚೆನ್ನೈ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಂತರ ಮುಂಬೈ, ವಿಶಾಖಪಟ್ಟಣ ಮತ್ತು ಚೆನ್ನೈನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಅನಂತರ 2023ರ ಐಪಿಎಲ್ ಹಬ್ಬ ಶುರುವಾಗಲಿದೆ.

Story first published: Thursday, December 8, 2022, 13:58 [IST]
Other articles published on Dec 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X