ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೆಕ್ಕನ್ ಚಾರ್ಜರ್ಸ್‌ಗೆ 4,800 ಕೋ.ರೂ. ನೀಡಬೇಕಾದ ಸಂಕಟದಲ್ಲಿ ಬಿಸಿಸಿಐ

BCCI told to pay Deccan Chargers Rs 4,800 crore

ನವದೆಹಲಿ, ಜುಲೈ 18: ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳಲ್ಲಿ ಒಂದಾಗಿದ್ದ ಡೆಕ್ಕನ್ ಚಾರ್ಜರ್ಸ್‌ಗೆ ಬೋರ್ಡ್ ಆಫ್‌ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು ಬರೋಬ್ಬರಿ 4,800 ಕೋ.ರೂ. ನೀಡಬೇಕಾದ ಸಂಕಟದಲ್ಲಿದೆ. ಡೆಕ್ಕನ್ ಚಾರ್ಜರ್ಸ್‌ ಅನ್ನು ಐಪಿಎಲ್‌ನಿಂದ ಕೊನೆಗೊಳಿಸಿದ ವಿವಾದಕ್ಕೆ ಸುಮಾರು 8 ವರ್ಷಗಳ ಬಳಿಕ ಜೀವ ಬಂದಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಿಟ್-ವಿಕೆಟ್ ಆದ ಎಲ್ಲಾ ಭಾರತೀಯರ ಸಂಪೂರ್ಣ ಪಟ್ಟಿಟೆಸ್ಟ್‌ ಕ್ರಿಕೆಟ್‌ನಲ್ಲಿ ಹಿಟ್-ವಿಕೆಟ್ ಆದ ಎಲ್ಲಾ ಭಾರತೀಯರ ಸಂಪೂರ್ಣ ಪಟ್ಟಿ

ಬಾಂಬೆ ಹೈಕೋರ್ಟ್‌ನಿಂದ ನೇಮಿತ ಏಕೈಕ ಮಧ್ಯಸ್ಥಗಾರ ಸಿಕೆ ಠಾಕೂರ್ ಅವರು ಡೆಕ್ಕನ್ ಚಾರ್ಜರ್ಸ್ ಅನ್ನು ಐಪಿಎಲ್‌ನಿಂದ ಕೊನೆಗಾಣಿಸಿದ್ದು ಅಕ್ರಮವೆಂದು ಪರಿಗಣಿಸಿದ್ದಾರೆ. ಹೀಗಾಗಿ ಬಿಸಿಸಿಐಯು ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ಲಿಮಿಟೆಡ್‌ (ಡಿಸಿಎಚ್‌ಎಲ್)ಗೆ ಸೆಪ್ಟೆಂಬರ್ ಮುಕ್ತಾಯದ ಒಳಗೆ 4,800 ಕೋ.ರೂ. ನೀಡಬೇಕೆಂದು ಹೇಳಿದ್ದಾರೆ.

'ಒಬ್ಬ ಭಾರತೀಯನೂ ಸೇರಿ 3 ದಿಗ್ಗಜರ ವಿಕೆಟ್ ಪಡೆಯೋದು ನನ್ನ ಕನಸು''ಒಬ್ಬ ಭಾರತೀಯನೂ ಸೇರಿ 3 ದಿಗ್ಗಜರ ವಿಕೆಟ್ ಪಡೆಯೋದು ನನ್ನ ಕನಸು'

ಡೆಕ್ಕನ್ ಚಾರ್ಜರ್ ಜೊತೆಗಿನ ಒಪ್ಪಂದವನ್ನು ಬಿಸಿಸಿಐ 2012ರ ಸೆಪ್ಟೆಂಬರ್ 15ರಂದು ಕೊನೆಗೊಳಿಸಿತ್ತು. ಅದಾಗಿ ಒಂದು ವಾರದ ಬಳಿಕ ಎರಡೂ ಪಾರ್ಟಿಗಳು ಮಧ್ಯಸ್ಥಿಕೆಗೆ ಹೋಗಲು ಒಪ್ಪಿದ್ದವು. ಬಲ್ಲ ಮೂಲಗಳ ಪ್ರಕಾರ, ಬಿಸಿಸಿಐಗೆ ಇನ್ನೂ ಆದೇಶ ಪ್ರತಿ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಈ ಆದೇಶದ ವಿರುದ್ಧ ಬಿಸಿಸಿಐ ಮತ್ತೆ ಕೋರ್ಟ್‌ಗೆ ಹೋಗುವ ಸಾಧ್ಯತೆಗಳಿವೆ.

2020ರ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಗೆ ಸಜ್ಜಾಗಿದೆ ಯುಎಇ2020ರ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಗೆ ಸಜ್ಜಾಗಿದೆ ಯುಎಇ

2008ರಲ್ಲಿ ಐಪಿಎಲ್ ಉದ್ಘಾಟನಾ ಸೀಸನ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಕೂಡ ಐಪಿಎಲ್‌ನ ಸಾಂಪ್ರದಾಯಿಕ 8 ತಂಡಗಳಲ್ಲಿ ಒಂದಾಗಿತ್ತು. ಮುಂದೆ ಕೂಡ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಕ್ಕನ್ ಚಾರ್ಜರ್ಸ್ ಬಲಿಷ್ಠ ತಂಡಗಳಲ್ಲಿ ಗುರುತಿಸಿಕೊಂಡಿದ್ದವು. 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್ಸ್ ಆಗಿತ್ತು ಕೂಡ. ಆ ಬಳಿಕ ಡೆಕ್ಕನ್ ಅನ್ನು ಐಪಿಎಲ್‌ನಿಂದ ತೆಗೆಯಲಾಯ್ತು.

Story first published: Saturday, July 18, 2020, 16:29 [IST]
Other articles published on Jul 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X