ಬಿಸಿಸಿಐ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹಿಮ್ ವರ್ಮಾ

ನವದೆಹಲಿ, ಮಾರ್ಚ್ 14: ಬಿಸಿಸಿಐ ಉಪಾಧ್ಯಕ್ಷರಾಗಿದ್ದ ಮಹಿಮ್ ವರ್ಮಾ ರಾಜೀನಾಮೆ ಸಲ್ಲಿಸಿದ್ದಾರೆ. ಉತ್ತರಖಂಡ್‌ನ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಜವಾಬ್ದಾರಿ ದೊರೆತಿರುವುದರಿಂದ ಬಿಸಿಸಿಐ ಉಪಾಧ್ಯಕ್ಷ ಸ್ಥಾನವನ್ನು ವರ್ಮಾ ಬಿಟ್ಟುಕೊಟ್ಟಿದ್ದಾರೆ. ಉತ್ತರಖಂಡ ಕ್ರಿಕೆಟ್ ಅಸೋಸಿಯೇಶನ್‌ನ ಕಾರ್ಯದರ್ಶಿಯಾಗಿ ವರ್ಮಾ ಸದ್ಯ ನೇಮಕವಾಗಿದ್ದಾರೆ.
ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಮಹಿಮ್ ವರ್ಮಾ ಪಿಟಿಐಗೆ ಖಾತರಿಪಡಿಸಿದ್ದಾರೆ. 'ನಾನೀಗ ನನ್ನ ಸ್ಟೇಟ್ ಅಸೋಸಿಯೇಶನ್‌ನ ಬಗ್ಗೆ ಕಾಳಜಿ ವಹಿಸಬೇಕಿದೆ. ಯಾಕೆಂದರೆ ಅದನ್ನು ನಡೆಸೋದು ಸುಲಭವಿಲ್ಲ. ಹೀಗಾಗಿ ನಾನು ನನ್ನ ರಾಜೀನಾಮೆಯನ್ನು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿಗೆ ಕಳುಹಿಸಿದ್ದೇನೆ. ಅದು ಸ್ವೀಕರಿಸಲ್ಪಡುತ್ತದೆ ಎಂದು ನನಗೆ ಭರವಸೆಯಿದೆ,' ಎಂದು ಸೋಮವಾರ (ಏಪ್ರಿಲ್ 13) ಹೇಳಿದ್ದಾರೆ.
ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್‌ನ ಜವಾಬ್ದಾರಿ ದೊರೆತ ಬಳಿಕ ಯಾರಾದರೂ ಬಿಸಿಸಿಐ ಮೇಲಿನ ಜವಾಬ್ದಾರಿಗೆ ರಾಜೀನಾಮೆ ನೀಡಲೇಬೇಕು. ಯಾಕೆಂದರೆ ಬಿಸಿಸಿಐ ನಿಯಮದಲ್ಲಿ ಏಕಕಾಲಕ್ಕೆ ಒಬ್ಬ ವ್ಯಕ್ತಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ.
ಬಿಸಿಸಿಐ ನಿಯಮದ ಪ್ರಕಾರ, ಬೋರ್ಡ್‌ನ ಒಂದು ಸ್ಥಾನ ತೆರವಾದರೆ 45 ದಿನಗಳ ಒಳಗೆ ಸಭೆ ನಡೆಸಬೇಕಾಗುತ್ತದೆ. ಸಭೆಯಲ್ಲಿ ತೆರವಾದ ಸ್ಥಾನಕ್ಕೆ ಬೇರೆಯವರನ್ನು ಆರಿಸುವ ಬಗ್ಗೆ ನಿರ್ಧಾರ ತಾಳಬೇಕಾಗುತ್ತದೆ. ಆದರೆ ಸದ್ಯ ದೇಶದಲ್ಲಿ ಕೊರೊನಾವೈರಸ್‌ನಿಂದ ಲಾಕ್‌ಡೌನ್ ಇರೋದ್ರಿಂದ ಬಿಸಿಸಿಐ ಮುಂದೇನು ಮಾಡಲಿದೆ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications