ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಇಂಗ್ಲೆಂಡ್ ಉಲ್ಲೇಖಿಸಿದ ಪಾಕ್ ಕ್ರಿಕೆಟಿಗನ ವಿರುದ್ಧ ಬೆನ್‌ ಸ್ಟೋಕ್ಸ್ ಕಿಡಿ!

Ben Stokes angry after ex-Pak cricketer Sikander Bakhts controversial remarks

ಲಂಡನ್, ಮೇ 29: ಇಂಗ್ಲೆಂಡ್‌ನಲ್ಲಿ ನಡೆದಿದ್ದ 2019ರ ವಿಶ್ವಕಪ್‌ನ ಆರಂಭಿಕ ಪಂದ್ಯಗಳಲ್ಲಿ ಭಾರತ ಗೆಲ್ಲುತ್ತಾ ಸಾಗಿದ್ದನ್ನು ನೋಡಿದ್ದ ಯಾರಿಗಾದರೂ ಟೀಮ್ ಇಂಡಿಯಾ ಮೂರನೇ ಬಾರಿಗೆ ಏಕದಿನ ವಿಶ್ವಕಪ್‌ ಗೆಲ್ಲುವ ಆಸೆ, ಭರವಸೆ ಮೂಡಿಸಿರತ್ತೆ. ಆದರೆ ಕೊನೆಯವರೆಗೂ ಗೆಲುವಿನ ದಾರಿಯಲ್ಲಿದ್ದ ಭಾರತ ತಂಡ ಕೆಲವೇ ಕೆಲ ಪಂದ್ಯಗಳು ಬಾಕಿಯಿರುವಾಗ ಇಂಗ್ಲೆಂಡ್ ವಿರುದ್ಧ ಸೋತಿತ್ತು. ಇಂಗ್ಲೆಂಡ್ ಎದುರಿನ ಸೋಲು ಅಂಥ ಹಿನ್ನಡೆ ತಾರದಿದ್ದರೂ ನ್ಯೂಜಿಲೆಂಡ್‌ ವಿರುದ್ಧ ಸೆಮಿಫೈನಲ್‌ನಲ್ಲಿನ ಪರಾಜಯ ಕೊಹ್ಲಿ ಪಡೆಯ ವಿಶ್ವಕಪ್ ಕನಸಿಗೆ ಕೊಳ್ಳಿಯಿಟ್ಟಿತ್ತು.

ಆಸ್ಟ್ರೇಲಿಯಾಕ್ಕೆ ಟೀಮ್ ಇಂಡಿಯಾ ಪ್ರವಾಸ: ಸಂಪೂರ್ಣ ವೇಳಾಪಟ್ಟಿಆಸ್ಟ್ರೇಲಿಯಾಕ್ಕೆ ಟೀಮ್ ಇಂಡಿಯಾ ಪ್ರವಾಸ: ಸಂಪೂರ್ಣ ವೇಳಾಪಟ್ಟಿ

ಗೆಲುವಿನಂಚಿನಲ್ಲಿ ಭಾರತ ಸೋತಿದ್ದಾಗಿದೆ. ಆದರೆ ವಿಶ್ವಕಪ್‌ ವಿಚಾರದಲ್ಲೀಗ ಮತ್ತೆ ವಿವಾದ ಶುರುವಾಗಿದೆ. ಮುಖ್ಯವಾಗಿ 38ನೇ ಪಂದ್ಯವಾಗಿ ಇಂಗ್ಲೆಂಡ್ ಮತ್ತು ಭಾರತ ಸೆಣಸಾಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಹುಟ್ಟಿಕೊಂಡಿವೆ.

ಸುಲಭಕ್ಕೆ ನಂಬಲಾಗದ ಕ್ರಿಕೆಟ್‌ ಇತಿಹಾಸದ 6 ಅದ್ಭುತ ದಾಖಲೆಗಳು!ಸುಲಭಕ್ಕೆ ನಂಬಲಾಗದ ಕ್ರಿಕೆಟ್‌ ಇತಿಹಾಸದ 6 ಅದ್ಭುತ ದಾಖಲೆಗಳು!

ಇಂಗ್ಲೆಂಡ್ vs ಭಾರತ ಪಂದ್ಯ ಮತ್ತು ಬೆನ್ ಸ್ಟೋಕ್ಸ್ ಉಲ್ಲೇಖಿಸಿ ಹೇಳಿಕೆ ನೀಡಿದ್ದ ಪಾಕ್ ಮಾಜಿ ಬೌಲರ್ ಸಿಕಂದರ್ ಬಖ್ತ್ ವಿರುದ್ಧ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನೀ ಗಲಾಟೆ?

ಏನೀ ಗಲಾಟೆ?

ಭಾರತ-ಇಂಗ್ಲೆಂಡ್ ಪಂದ್ಯದ ಬಗ್ಗೆ ಸಿಕಂದರ್ ಬಖ್ತ್ ಒಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್‌ನಲ್ಲಿ, '2019ರ ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಸ್ಪರ್ಧೆಯಿಂದ ತೆಗೆಯಬೇಕೆಂದು ಉದ್ದೇಶಪೂರ್ವಕವಾಗಿಯೇ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋತಿದೆ ಎಂದು ಬೆನ್‌ ಸ್ಟೋಕ್ಸ್‌ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ. ನಾವಿದ್ದನ್ನು ಊಹಿಸಿದ್ದೆವು' ಎಂದು ಬರೆದುಕೊಂಡಿದ್ದರು.

ಸೊಹೈಬ್ ಖಾನ್ ತಿರುಗೇಟು

ಸೊಹೈಬ್ ಖಾನ್ ತಿರುಗೇಟು

ಸಿಕಂದರ್ ಅವರ ತಲೆಬುಡವಿಲ್ಲದ ಟ್ವೀಟ್‌ಗೆ ಸೊಹೈಬ್ ಖಾನ್ ತಿರುಗೇಟು ನೀಡಿದ್ದಾರೆ. 'ಇಂಗ್ಲೆಂಡ್‌ ವಿರುದ್ಧ ಭಾರತ ಬೇಕೆಂದೇ ಸೋತಿದೆ ಎಂದು ಬೆನ್ ಸ್ಟೋಕ್ಸ್ ಎಲ್ಲಿ ಹೇಳಿದ್ದಾರೆ?' ಎಂದು ಸಿಕಂದರ್ ಅವರನ್ನು ಖಾನ್ ಮರು ಪ್ರಶ್ನಿಸಿದ್ದಾರೆ. ಸ್ಟೋಕ್ಸ್ 'ಆನ್ ಫೈರ್' ಎಂಬ ಪುಸ್ತಕ ಪ್ರಕಟಿಸಿ ಅದರಲ್ಲಿ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪಂದ್ಯಗಳನ್ನು ವಿಶ್ಲೇಷಿಸಿದ್ದರು. ಇದೇ ವಿಶ್ಲೇಷಣೆಯನ್ನು ಸಿಕಂದರ್ ತಿರುಚಿದ್ದಾರೆ ಎಂದು ಸ್ಟೋಕ್ಸ್ ಆರೋಪಿಸಿದ್ದಾರೆ.

ಬೆನ್‌ ಸ್ಟೋಕ್ಸ್‌ ಪ್ರತಿಕ್ರಿಯೆ

ಬೆನ್‌ ಸ್ಟೋಕ್ಸ್‌ ಪ್ರತಿಕ್ರಿಯೆ

ಸೊಹೈಬ್ ಖಾನ್ ಟ್ವೀಟ್ ಮುಂದಿಟ್ಟು ಸಿಕಂದರ್‌ಗೆ ಪ್ರತಿಕ್ರಿಯಿಸಿರುವ ಸ್ಟೋಕ್ಸ್, 'ನಿಮಗದು ಸಿಗಲಾರದು. ಯಾಕೆಂದರೆ ನಾನಿದನ್ನು ಹೇಳೇಇಲ್ಲ. ಇದಕ್ಕೆ 'ಪದಗಳ ತಿರುಚುವಿಕೆ ಅಥವಾ 'ಕ್ಲಿಕ್ ಬೇಟ್' ಅಂತಾರೆ,' ಎಂದು ಖಾರವಾಗಿ ಬರೆದುಕೊಂಡಿದ್ದಾರೆ.

ಸಿಕಂದರ್ ಹಾಗಂದಿದ್ಯಾಕೆ?

ಸಿಕಂದರ್ ಹಾಗಂದಿದ್ಯಾಕೆ?

2019ರ ವಿಶ್ವಕಪ್ ಟೂರ್ನಿಯ ಪ್ರಮುಖ ಪಂದ್ಯಗಳನ್ನು ಸೋತಿದ್ದ ಪಾಕ್‌ ತಂಡಕ್ಕೆ ಸೆಮಿಫೈನಲ್ ಪ್ರವೇಶದ ದಾರಿ ಮುಚ್ಚುತ್ತಾ ಬಂದಿತ್ತು. ಲೆಕ್ಕಾಚಾರದ ಆಧಾರದಲ್ಲಿ ಅಂದರೆ ಇಂಗ್ಲೆಂಡ್‌-ಭಾರತ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ ಪಾಕ್‌ಗೆ ಪ್ರಶಸ್ತಿ ಸುತ್ತಿನೆಡೆಗಿನ ದಾರಿ ತೆರೆದುಕೊಳ್ಳುವ ಸಾಧ್ಯತೆಯಿತ್ತು. ಆದರೆ ದುರದೃಷ್ಟವಶಾತ್ ಭಾರತ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೇ ಟೂರ್ನಿಯ ಮೊದಲ ಸೋಲು ದಾಖಲಿಸಿತ್ತು. ಭಾರತ ಗೆದ್ದೇ ಗೆಲ್ಲುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಭಾರತದ, ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.

Story first published: Friday, May 29, 2020, 19:47 [IST]
Other articles published on May 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X