ಪಾಕ್ ಟೆಸ್ಟ್ ಸರಣಿ ತಪ್ಪಿಸಿಕೊಂಡಿದ್ದಕ್ಕೆ ಅಸಲಿ ಕಾರಣ ಬಾಯ್ಬಿಟ್ಟ ಬೆನ್ ಸ್ಟೋಕ್ಸ್

ಲಂಡನ್: ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ಆಂಗ್ಲ ಆಲ್ ರೌಂಡರ್ ಬೆನ್ ಸ್ಟೋಕ್ಸ್ ದೂರ ಉಳಿದಿದ್ದರು. ಆರಂಭಿಕ ಪಂದ್ಯದಲ್ಲಷ್ಟೇ ಆಡಿದ್ದ ಸ್ಟೋಕ್ಸ್ ಉಳಿದೆರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಇದಕ್ಕೆ ನಿಜವಾದ ಕಾರಣವೇನೆಂದು ಸ್ವತಃ ಸ್ಟೋಕ್ಸ್ ಬಾಯ್ಬಿಟ್ಟಿದ್ದಾರೆ.
ಪಾಕ್ ಟೆಸ್ಟ್ ಸರಣಿ ವೇಳೆ ತನ್ನ ತಂದೆ ಗೆರಾರ್ಡ್ ಸ್ಟೋಕ್ಸ್‌ಗೆ ಬ್ರೇನ್ ಕ್ಯಾನ್ಸರ್ ಇರೋದು ಪತ್ತೆಯಾಗಿತ್ತು. ಸರಣಿಯಿಂದ ಹಿಂದೆ ಸರಿಯಲು ಇದೇ ಪ್ರಮುಖ ಕಾರಣ ಎಂದು ಸ್ಟೋಕ್ಸ್ ಹೇಳಿಕೊಂಡಿದ್ದಾರೆ. ಸರಣಿಯಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸುವಾಗಲೇ ಸ್ಟೋಕ್ಸ್ ಇದಕ್ಕೆ ವೈಯಕ್ತಿಕ ಕಾರಣ ಎಂದು ಹೇಳಿದ್ದರು.
'ಟೆಸ್ಟ್ ಸರಣಿಯ ವೇಳೆ ಒಂದು ವಾರ ನಾನು ಸರಿಯಾಗಿ ನಿದ್ದೆ ಮಾಡಿಲ್ಲ. ನನ್ನ ತಲೆಯಲ್ಲಿ ಅದೇ (ಅಪ್ಪನಿಗೆ ಕ್ಯಾನ್ಸರ್) ವಿಚಾರ ತುಂಬಿತ್ತು. ಹೀಗಾಗಿ ಆವತ್ತು ಸರಣಿ ಕೈಬಿಟ್ಟಿದ್ದು ನನ್ನ ಮಾನಸಿಕ ವಿಚಾರದಲ್ಲಿ ಸರಿಯಾದ ನಿರ್ಧಾರವಾಗಿತ್ತು,' ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ಉಪನಾಯಕ ಸ್ಟೋಕ್ಸ್ ವಿವರಿಸಿದ್ದಾರೆ.
ತನ್ನ ತಂದೆಯ ಬಗ್ಗೆ ಮಾತನಾಡಿದ ಸ್ಟೋಕ್ಸ್, 'ನನ್ನ ಜೊತೆಗೆ ಅಪ್ಪ ಗಂಭೀರವಾಗಿದ್ದರು. ಅದಕ್ಕೆ ಕಾರಣವೇನೆಂದು ನಾನು ಬೆಳೆಯತೊಡಗಿದಂತೆ ನನಗೆ ಅರ್ಥವಾಗತೊಡಗಿತು. ನಾನೊಬ್ಬ ವೃತ್ತಿಪರ ಕ್ರೀಡಾಪಟು ಅನ್ನಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ನನ್ನ ತಂದೆ ಹಾಗಿರುತ್ತಿದ್ದರು,' ಎಂದಿದ್ದಾರೆ.
ತನಗಿರುವ ಖಾಯಿಲೆ ಬಗ್ಗೆ 64ರ ಹರೆಯದ ಗೆಡ್ ಸ್ಟೋಕ್ಸ್ ಕೂಡ ಮಾತನಾಡಿದ್ದಾರೆ. 'ನಾನು (ದಕ್ಷಿಣ ಆಫ್ರಿಕಾಕ್ಕೆ) ಹೇಗೆ ಪ್ರಯಾಣಿಸಿದೆ ಎಂದು ಅವರು (ಡಾಕ್ಟರ್‌ಗಳು) ನಿರ್ಣಯಿಸಬೇಕಾಗಿತ್ತು ಮತ್ತು ಆ ಮೂಲಕ ಅವರು ನನ್ನ ಮೆದುಳಿನಲ್ಲಿ ಒಂದೆರಡು ಗೆಡ್ಡೆಗಳಿವೆ ಎಂದು ಕಂಡುಹಿಡಿದರು,' ಎಂದು ಗೆಡ್ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications