ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ: ಸೆಮಿಫೈನಲ್‌ನಲ್ಲಿ ಬಂಗಾಳಕ್ಕೆ ಮಣಿದು ಹೋರಾಟ ಅಂತ್ಯಗೊಳಿಸಿದ ಕರ್ನಾಟಕ

Bengal defeats Karnataka, enters finals of Ranji Trophy
Ranji Semi Final : Karnataka out of Ranji trophy | Ranji | Karnataka | Bengal | Oneindia Kannada

8 ಬಾರಿಯ ರಣಜಿ ಚಾಂಪಿಯನ್ ಕರ್ನಾಟಕ 2019-20ನೇ ಸಾಲಿನ ಹೋರಾಟವನ್ನು ಸೆಮಿಫೈನಲ್‌ನಲ್ಲಿ ಅಂತ್ಯಗೊಳಿಸಿದೆ. ಬಂಗಾಳ ತಂಡದ ವಿರುದ್ಧ ಸೆಮಿ ಫೈನಲ್ ಕದನದಲ್ಲಿ ಕರ್ನಾಟಕ ನಾಲ್ಕನೇ ದಿನ 174 ರನ್‌ಗಳಿಂದ ಶರಣಾಗಿದೆ. ಈ ಮೂಲಕ ಬಂಗಾಳ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಕರ್ನಾಟಕ ತಂಡದ ಮೇಲೆ ಈ ಬಾರಿಯೂ ಸಾಕಷ್ಟು ನಿರೀಕ್ಷೆಯಿತ್ತು. ಅದ್ಭುತ ಪ್ರದರ್ಶನವನ್ನು ನೀಡಿಕೊಂಡು ಬಂದ ಕರ್ನಾಟಕ ಬಂಗಾಳ ತಂಡವನ್ನು ಸುಲಭವಾಗಿ ಮಣಿಸಿ ಫೈನಲ್ ಪ್ರವೇಶ ಪಡೆದುಕೊಳ್ಳಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಸೆಮಿಫೈನಲ್‌ಹಂತದಲ್ಲಿ ಕರ್ನಾಟಕ ಆಟಗಾರರು ಎಡವಿ ಸೋಲನ್ನು ಕಂಡಿದ್ದಾರೆ.

ರಣಜಿ : ಫೈನಲ್ ತಲುಪಲು ಕರ್ನಾಟಕ ತಂಡಕ್ಕೆ 352 ರನ್‌ಗಳ ಗುರಿರಣಜಿ : ಫೈನಲ್ ತಲುಪಲು ಕರ್ನಾಟಕ ತಂಡಕ್ಕೆ 352 ರನ್‌ಗಳ ಗುರಿ

ಎರಡನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 352 ರನ್‌ಗಳ ಬೃಹತ್ ಟಾರ್ಗೆಟನ್ನು ಪಡೆದಿತ್ತು. ಈ ಗುರಿಯನ್ನು ಬೆನ್ನತ್ತಿದ ಕರ್ನಾಟಕ ತಂಡ ಆರಂಭದಲ್ಲಿ ಪ್ರಮುಖ ಆಟಗಾರ ಕೆ.ಎಲ್ ರಾಹುಲ್ ವಿಕೆಟನ್ನು ಕಳೆದುಕೊಂಡು ಆಘಾತವನ್ನು ಅನುಭವಿಸಿತ್ತು. ಬಳಿಕ ಮೂರನೆ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 98 ರನ್‌ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು.

ಅರ್ಧ ಶತಕ ಗಳಿಸಿದ್ದ ಪಡಿಕ್ಕಲ್ ಮತ್ತು ಮನೀಶ್ ಪಾಂಡೆ ಅವರ ಮೇಲೆ ಇಂದು ಕರ್ನಾಟಕ ಸಾಕಷ್ಟು ನಿರೀಕ್ಷಯನ್ನು ಇಟ್ಟುಕೊಂಡಿತ್ತು. ಆದರೆ ಆ ನಿರಿಕ್ಷೆ ಆರಂಭದಲ್ಲೇ ಹುಸಿಯಾಯಿತು. ಆರಂಭದಲ್ಲೇ ಮನೀಶ್ ಪಾಂಡೆ ವಿಕೆಟ್ ಕಳೆದುಕೊಂಡು ಕರ್ನಾಟಕ ಮತ್ತಷ್ಟು ಕಷ್ಟಕ್ಕೆ ಸಿಲುಕಿತ್ತು.

ಅಷ್ಟರಲ್ಲಾಗಲೇ ಕರ್ನಾಟಕ ಸೆಮಿಫೈನಲ್ ಕನಸನ್ನು ಕೈಬಿಟ್ಟಾಗಿತ್ತು. ಬಂಗಾಳದ ಬೌಲರ್‌ಗಳ ಮುಂದೆ ಕರ್ನಾಟಕ ಹುಡುಗರು ಮುಗ್ಗರಿಸಿದರು. ಕೊನೆಗೆ ಕರ್ನಾಟಕ 177ನ ರನ್‌ಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಬಂಗಾಳ ತಂಡಕ್ಕೆ 174 ರನ್‌ಗಳಿಂದ ಶರಣಾಗಿದೆ.

Story first published: Tuesday, March 3, 2020, 12:08 [IST]
Other articles published on Mar 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X