ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ನಲ್ಲಿ ಡೇವಿಡ್ ವಾರ್ನರ್ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್‌ಗಳ ಪಟ್ಟಿ

Bowlers who Most time dismissing David Warner in Test Cricket

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮತ್ತೆ ಎಡವಿದ್ದಾರೆ. ದ್ವಿತೀಯ ಇನ್ನಿಂಗ್ಸ್‌ನಲ್ಲೂ ವಾರ್ನರ್ 13 ರನ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ. ಆರಂಭಿಕ ಇನ್ನಿಂಗ್ಸ್‌ನಲ್ಲಿ ವಾರ್ನರ್ ಕೇವಲ 5 ರನ್‌ಗೆ ಔಟಾಗಿದ್ದರು.

ಭಾರತ vs ಆಸ್ಟ್ರೇಲಿಯಾ: ರಿ‍ಷಭ್ ಪಂತ್ ಆಸ್ಪತ್ರೆಗೆ ದಾಖಲು-ವಿಡಿಯೋಭಾರತ vs ಆಸ್ಟ್ರೇಲಿಯಾ: ರಿ‍ಷಭ್ ಪಂತ್ ಆಸ್ಪತ್ರೆಗೆ ದಾಖಲು-ವಿಡಿಯೋ

ಭಾರತ ವಿರುದ್ಧದ ಆರಂಭಿಕ ಎರಡೂ ಟೆಸ್ಟ್‌ ಪಂದ್ಯಗಳಲ್ಲಿ ಡೇವಿಡ್ ವಾರ್ನರ್ ಆಡಿರಲಿಲ್ಲ. ಗಾಯಕ್ಕೀಡಾಗಿದ್ದರಿಂದ ವಾರ್ನರ್ ಎರಡು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು. ತೃತೀಯ ಟೆಸ್ಟ್‌ನಲ್ಲಿ ವಾರ್ನರ್ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತಾದರೂ ಡೇವಿಡ್ ಮತ್ತೆ ಬೇಗನೆ ವಿಕೆಟ್ ನೀಡಿದ್ದಾರೆ.

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್‌ನಲ್ಲಿ ವಾರ್ನರ್ ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ನೀಡಿದ್ದರೆ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸ್ಪಿನ್ನರ್ ಆರ್‌ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಇದರೊಂದಿಗೆ ಡೇವಿಡ್ ಕೆಟ್ಟ ದಾಖಲೆಗೂ ಕಾರಣರಾಗಿದ್ದಾರೆ.

ಕ್ರಿಕೆಟ್ ದಂತಕತೆಗಳ ಹಿಂದಿಕ್ಕಿ ದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್!ಕ್ರಿಕೆಟ್ ದಂತಕತೆಗಳ ಹಿಂದಿಕ್ಕಿ ದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್!

ಟೆಸ್ಟ್‌ ಕ್ರಿಕೆಟ್‌ನಲ್ಲಿ ಡೇವಿಡ್ ಹೆಚ್ಚು ಬಾರಿ ಔಟ್ ಆಗಿದ್ದೆಂದರೆ ಅದು ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್, ಭಾರತದ ಆರ್‌ ಅಶ್ವಿನ್ ಮತ್ತು ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್‌ಗೆ. ಇದರಲ್ಲಿ ಬ್ರಾಡ್‌ಗೆ 12 ಸಾರಿ, ಅಶ್ವಿನ್‌ಗೆ 10 ಸಾರಿ ಮತ್ತು ಆ್ಯಂಡರ್ಸನ್‌ಗೆ 9 ಸಾರಿ ವಾರ್ನರ್ ವಿಕೆಟ್ ಲಭಿಸಿದೆ.

Story first published: Saturday, January 9, 2021, 12:08 [IST]
Other articles published on Jan 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X