ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೂಮ್ರಾ, ಶಮಿ ಉತ್ತಮವೇಗಿಗಳು, ಆದರೆ ನಮ್ಮಲ್ಲೂ ವೇಗಿಗಳು ಇದ್ದಾರೆ: ಅಲೆಕ್ಸ್ ಕ್ಯಾರಿ

Bumrah, Shami good but we too have Starc, Hazlewood and Cummins says Alex Carey

ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೇ ಸಾಕಷ್ಟು ರಂಗು ಪಡೆದುಕೊಂಡಿದೆ. ಆಟಗಾರರ ಹೇಳಿಕೆಗಳು ತಮ್ಮ ತಂಡದ ಮೇಲಿನ ಭರವಸೆಯನ್ನು ಹೆಚ್ಚಿಸುವ ಜೊತೆಗೆ ಎದುರಾಳಿ ತಂಡದ ಮೇಲೆ ಒತ್ತಡವನ್ನು ಹೇರುವ ತಂತ್ರಗಾರಿಕೆಗಳು ನಡೆಯುತ್ತಿದೆ. ಆಸ್ಟ್ರೇಲಿಯಾದ ಯುವ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಆಸಿಸ್ ವೇಗಿಗಳ ಬಗ್ಗೆ ಪ್ರಶಂಸೆಯ ಮಾತುಗಳ್ನು ಆಡಿದ್ದಾರೆ.

ಟೀಮ್ ಇಂಡಿಯಾದ ವೇಗಿಗಳಾದ ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಅತ್ಯುತ್ತಮ ವೇಗದ ಬೌಲರ್‌ಗಳು. ಆದರೆ ನಮ್ಮ ತಂಡದಲ್ಲೂ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್ ಹಾಗೂ ಸ್ಟಾರ್ಕ್ ಅವರಂತಾ ವೇಗಿಗಳು ಇದ್ದಾರೆ ಎಂದು ಅಲೆಕ್ಸ್ ಕ್ಯಾರಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ವಿರಾಟ್ ಕೊಹ್ಲಿಯ ತಂಡದ ಜೊತೆಗಿರಲು ಇಷ್ಟಪಡುತ್ತೇನೆ: ಬಾರ್ಡರ್ವಿರಾಟ್ ಕೊಹ್ಲಿಯ ತಂಡದ ಜೊತೆಗಿರಲು ಇಷ್ಟಪಡುತ್ತೇನೆ: ಬಾರ್ಡರ್

"ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಎಷ್ಟು ಅದ್ಭುತ ಬೌಲರ್‌ಗಳು ಎಂಬುದು ನಮಗೆ ತಿಳಿದಿದೆ. ಅದರ ಜೊತೆಯಲ್ಲಿ ನಮ್ಮ ತಂಡದಲ್ಲೂ ಎಂತಾ ಅದ್ಭುತ ವೇಗದ ಬೌಲರ್‌ಗಳು ಇದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ" ಎಂದು ಅಲೆಕ್ಸ್ ಕ್ಯಾರಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ವೇಗಿಗಳ ವಿರುದ್ಧ ಆರಂಭದಲ್ಲಿ ಡೇವಿಡ್ ವಾರ್ನರ್ ಹಾಗೂ ಆರೋನ್ ಫಿಂಚ್ ಅತ್ಯುತ್ತಮ ದಾಖಲೆ ಹೊಂದಿದ ಆಟಗಾರರನ್ನು ನಮ್ಮ ತಂಡ ಹೊಂದಿದೆ. ನಾವು ಶಮಿ ಬೂಮ್ರಾ ಜೊತೆಗೆ ಚಾಹಕ್ ಹಾಗೂ ಜಡೇಜಾ ಮತ್ತು ಎಲ್ಲಾ ಭಾರತೀಯ ಬೌಲರ್‌ಗಳ ಬಗ್ಗೆಯೂ ಮಾತನಾಡುತ್ತೇವೆ. ಆದರೆ ನಾನು ಪ್ಯಾಟ್ ಕಮ್ಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಅವರ ಆಟವನ್ನು ನೋಡಲು ಉತ್ಸುಕನಾಗಿದ್ದೇನೆ ಎಂದು ಅಲೆಕ್ಸ್ ಕ್ಯಾರಿ ಹೇಳಿದ್ದಾರೆ.

ಬ್ಯಾಟಿಂಗ್ ಮಾಡಿದ ಚಾಹಲ್ ಕಾಲೆಳೆದ ಡೇಲ್ ಸ್ಟೇನ್: ವಿಡಿಯೋಬ್ಯಾಟಿಂಗ್ ಮಾಡಿದ ಚಾಹಲ್ ಕಾಲೆಳೆದ ಡೇಲ್ ಸ್ಟೇನ್: ವಿಡಿಯೋ

ಇನ್ನು ಇದೇ ಸಂದರ್ಭದಲ್ಲಿ ಕ್ಯಾರಿ ಭಾರತೀಯ ಬ್ಯಾಟಿಂಗ್ ಬಗ್ಗೆಯೂ ಮಾತನಾಡಿದ್ದಾರೆ. ಕೆಎಲ್ ರಾಹುಲ್ ವಿರುದ್ಧ ನಾನು ಕೆಲ ಪಂದ್ಯಗಳಲ್ಲಿ ಆಡಿದ್ದೇನೆ. ನಿಜಕ್ಕೂ ಆತ ವಿಧ್ವಂಸಕ ಆಟಗಾರ. ಟೀಮ್ ಇಂಡಿಯಾದಲ್ಲಿ ಸಾಕಷ್ಟು ಅದ್ಭುತ ಆಟಗಾರರಿದ್ದಾರೆ. ಕೆಎಲ್ ರಾಹುಲ್ ದೊಡ್ಡ ವಿಕೆಟ್ ಆಗಲಿದ್ದಾರೆ. ವಿರಾಟ್ ಕೊಹ್ಲಿ ಯಾವಾಗಲೂ ಬೃಹತ್ ವಿಕೆಟ್ ಆಗಿರಲಿದೆ" ಎಂದು ಅಲೆಕ್ಸ್ ಕ್ಯಾರಿ ಹೇಳಿದ್ದಾರೆ.

Story first published: Friday, November 20, 2020, 13:09 [IST]
Other articles published on Nov 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X