60 ವರ್ಷಗಳ ವೃತ್ತಿ ಬದುಕಿಗೆ ವಿದಾಯ ಹೇಳಿದ ವಿಂಡೀಸ್ ವೇಗಿ ಸೆಸಿಲ್ ರೈಟ್

ವೆಸ್ಟ್ ಇಂಡೀಸ್ ಕ್ರಿಕೆಟ್ ಎಂದರೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜರಾದ ವಿವಿಯನ್ ರಿಚರ್ಡ್ಸ್, ಗ್ಯಾರಿ ಸೋಬರ್ಸ್ ಮತ್ತು ಫ್ರಾಂಕ್ ವೊರೆಲ್, ಮಾಲ್ಕಂ ಮಾರ್ಷಲ್ ಹೆಸರುಗಳು ಕೇಳಿ ಬರಬಹುದು. ಆದರೆ, ಇತ್ತೀಚೆಗೆ ಹೆಚ್ಚು ಜನಪ್ರಿಯವಾದ ಹೆಸರು ಸೆಸಿಲ್ ರೈಟ್.
85 ವರ್ಷ ವಯಸ್ಸಿನ ಸೆಸಿಲ್ ರೈಟ್ ತಮ್ಮ 60 ವರ್ಷಗಳ ಸುದೀರ್ಘ ವೃತ್ತಿ ಬದುಕಿಗೆ ಗುಡ್ ಬೈ ಹೇಳಿದ್ದಾರೆ. ಇನ್ನೆರಡು ವಾರಗಳಲ್ಲಿ ವೃತ್ತಿ ಬದುಕು ಅಂತ್ಯಗೊಳಿಸುವುದಾಗಿ ಈ ಮುಂಚಿತವಾಗಿ ಘೋಷಿಸಿದ್ದರು.
60 ವರ್ಷಗಳ ವೃತ್ತಿಬದುಕಿನ ಕಟ್ಟ ಕಡೆಯ ಪಂದ್ಯವನ್ನು ಪೆನೈನ್ ಲೀಗ್ ನಲ್ಲಿ ಅಪರ್ ಮಿಲ್ ಕ್ರಿಕೆಟ್ ಕ್ಲಬ್ ಪರ ಸ್ಪ್ರಿಂಗ್ ಹೆಡ್ ವಿರುದ್ಧ ಶನಿವಾರ(ಸೆ.07)ದಂದು ಆಡಿದರು. 1958ರಲ್ಲಿ ಜಮೈಕಾ ಪರ ಬಾರ್ಬಡೋಸ್ ವಿರುದ್ಧ ಒಂದು ಪ್ರಥಮ ದರ್ಜೆ ಪಂದ್ಯವಾಡಿದ್ದರು ಎಂದು ದಾಖಲೆಗಳು ತಿಳಿಸಿವೆ.
1959 ಇಂಗ್ಲೆಂಡ್‌ಗೆ ತೆರಳಿ ಅಲ್ಲಿ ಸೆಂಟ್ರಲ್ ಲಂಕಾಷೈರ್ ಲೀಗ್‌ನಲ್ಲಿ ಕ್ರಾಂಪ್ಟನ್ ಕ್ರಿಕೆಟ್ ಕ್ಲಬ್ ಪರ ವೃತ್ತಿ ಜೀವನವನ್ನು ಶುರು ಮಾಡಿದ್ದರು. ಟೀಂ ಮೇಟ್ ಗಳೀದ ಸೆಸ್ ಎಂದು ಕರೆಸಿಕೊಳ್ಳುವ ಈ ಮಾಜಿ ವೇಗಿ ಸುಮಾರು 7,000 ವಿಕೆಟ್ ಉದುರಿಸಿದ್ದಾರೆ ಎಂಬ ಮಾಹಿತಿಯಿದೆ. "ಕ್ರೀಡೆ ಜತೆಗಿನ ಬಾಂಧವ್ಯ ನನ್ನನ್ನು ಇಷ್ಟು ಕಾಲ ಆಡುವಂತೆ ಮಾಡಿತು, ಹೆಚ್ಚೆಚ್ಚು ವಿಕೆಟ್ ತೆಗೆಯಬೇಕೆಂಬ ಆಸೆ, ಹೆಚ್ಚು ಪಂದ್ಯವಾಡುವಂತೆ ಮಾಡಿತು' ಎಂದು ಸೆಸಿಲ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications