ಈ ಚಾನೆಲ್‌ಗಳಲ್ಲಿ ಏಕಕಾಲಕ್ಕೆ ಎರಡು ಐಪಿಎಲ್ ಪಂದ್ಯಗಳ ನೇರ ಪ್ರಸಾರ!

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆವೃತ್ತಿಯಲ್ಲಿ ಒಂದೇ ದಿನ ಒಂದೇ ಸಮಯಕ್ಕೆ ಎರಡೆರಡು ಪಂದ್ಯಗಳು ನಡೆಯಲಿವೆ. ಐಪಿಎಲ್ ಇತಿಹಾಸದಲ್ಲೇ ಹೀಗೆ ಏಕಕಾಲಕ್ಕೆ ಎರಡು ಪಂದ್ಯಗಳು ನಡೆಯುತ್ತಿರುವುದು ಬಲು ಅಪರೂಪ. ಅಕ್ಟೋಬರ್ 8ರಂದು ಒಂದೇ ದಿನ ಒಂದೇ ಸಮಯಕ್ಕೆ ಐಪಿಎಲ್ ಲೀಗ್ ಹಂತದ ಎರಡು ನಡೆಯಲಿವೆ. ಆ ಪಂದ್ಯಗಳು ಯಾವ ಚಾನೆಲ್‌ನಲ್ಲಿ ಪ್ರಕಟವಾಗಲಿವೆ ಅನ್ನೋದು ಘೋಷಣೆಯಾಗಿದೆ.

ಐಪಿಎಲ್ ಕಳಪೆ ಆಟದ ಹೊರತಾಗಿಯೂ ಟಿ20 ವಿಶ್ವಕಪ್‌ನಲ್ಲಿ ವಾರ್ನರ್ ಓಪನರ್!ಐಪಿಎಲ್ ಕಳಪೆ ಆಟದ ಹೊರತಾಗಿಯೂ ಟಿ20 ವಿಶ್ವಕಪ್‌ನಲ್ಲಿ ವಾರ್ನರ್ ಓಪನರ್!

ಅಕ್ಟೋಬರ್‌ 8ರ ಶನಿವಾರ ಐಪಿಎಲ್ 55ನೇ ಪಂದ್ಯವಾಗಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಅದೇ ದಿನ 56ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಡಲಿವೆ. ಎಸ್‌ಆರ್‌ಎಚ್ vs ಎಂಐ ಪಂದ್ಯ ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ 7.30 PMಗೆ ಆರಂಭವಾಗಲಿದೆ.

MI vs RR ಪಂದ್ಯದ ಬಳಿಕ ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಮತ್ತು ಅಂಕಪಟ್ಟಿಯಲ್ಲಾದ ಬದಲಾವಣೆ ಹೀಗಿದೆMI vs RR ಪಂದ್ಯದ ಬಳಿಕ ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಮತ್ತು ಅಂಕಪಟ್ಟಿಯಲ್ಲಾದ ಬದಲಾವಣೆ ಹೀಗಿದೆ

ಅದೇ ವೇಳೆಗೆ ಆರ್‌ಸಿಬಿ ಮತ್ತು ಡಿಸಿ ನಡುವಿನ ಪಂದ್ಯ ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ 7.30 PMಗೆ ಆರಂಭಗೊಳ್ಳಲಿದೆ.

ಯಾವ ಚಾನೆಲ್‌ಗಳಲ್ಲಿ ಯಾವ ಪಂದ್ಯ ನೇರ ಪ್ರಸಾರ?

ಯಾವ ಚಾನೆಲ್‌ಗಳಲ್ಲಿ ಯಾವ ಪಂದ್ಯ ನೇರ ಪ್ರಸಾರ?

ಐಪಿಎಲ್ ಲೀಗ್‌ ಹಂತದ ಎರಡು ಪಂದ್ಯಗಳು ಒಂದೇ ದಿನ ಒಂದೇ ಸಮಯಕ್ಕೆ ನಡೆಯಲಿದ್ದು ಅವನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಅಧಿಕೃತ ಪ್ರಸಾರಕ ಸ್ಟಾರ್‌ ಸ್ಪೋರ್ಟ್ಸ್‌ ನೆಟ್ವರ್ಕ್ಸ್‌ನ ಬೇರೆ ಬೇರೆ ಚಾನೆಲ್‌ಗಳು ನೇರ ಪ್ರಸಾರ ಮಾಡಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಸ್ಟಾರ್ 1, ಸ್ಟಾರ್ ಸೆಲೆಕ್ಟ್ 1, ಸ್ಟಾರ್ ಹಿಂದಿ, ಸ್ಟಾರ್ ತಮಿಳು, ಸ್ಟಾರ್ ತೆಲುಗು, ಸ್ಟಾರ್ ಕನ್ನಡ ಚಾನೆಲ್‌ಗಳಲ್ಲಿ ನೇರ ಪ್ರಸಾರ ಆಗಲಿವೆ. ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಸ್ಟಾರ್ 2, ಸ್ಟಾರ್ 3, ಸ್ಟಾರ್ ಸ್ಪೋರ್ಟ್ಸ್ ಲಿಸ್ಟ್ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿವೆ.

ಅಕ್ಟೋಬರ್‌ 10ರಿಂದ ನಾಕೌಟ್ ಹಂತದ ಪಂದ್ಯಗಳು

ಅಕ್ಟೋಬರ್‌ 10ರಿಂದ ನಾಕೌಟ್ ಹಂತದ ಪಂದ್ಯಗಳು

ಅಕ್ಟೋಬರ್‌ 8ಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್‌ 2021ರ ಲೀಗ್ ಹಂತದ ಪಂದ್ಯಗಳು ಮುಗಿಯಲಿವೆ. ಒಂದು ದಿನ ಬಿಡುವಿನ ಬಳಿಕ ಅಂದರೆ ಅಕ್ಟೋಬರ್ 10ರಿಂದ ನಾಕೌಟ್ ಹಂತದ ಪಂದ್ಯಗಳು ಶುರುವಾಗಲಿವೆ. ಲೀಗ್ ಹಂತದಲ್ಲಿ ಅಗ್ರ ನಾಲ್ಕು ಸ್ಥಾನಗಳಲ್ಲಿ ಉಳಿಯುವ ತಂಡಗಳು ಪ್ಲೇ ಆಫ್ಸ್‌ ಹಂತದಲ್ಲಿ ಸೆಣಸಾಡಲಿವೆ. ಅಕ್ಟೋಬರ್‌ 10ಕ್ಕೆ ಕ್ವಾಲಿಫೈಯರ್ ಪಂದ್ಯ 1, ಅಕ್ಟೋಬರ್ 11ಕ್ಕೆ ಎಲಿಮಿನೇಟರ್ ಪಂದ್ಯ, ಅಕ್ಟೋಬರ್ 13ಕ್ಕೆ ಕ್ವಾಲಿಫೈಯರ್ ಪಂದ್ಯ 2, ಅಕ್ಟೋಬರ್ 15ಕ್ಕೆ ಫೈನಲ್ ಪಂದ್ಯ ನಡೆಯಲಿವೆ. ಐಪಿಎಲ್ ಮುಗಿದು ಎರಡು ದಿನಗಳಲ್ಲೇ ಅಂದರೆ ಅಕ್ಟೋಬರ್ 17ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ ಮತ್ತು ಓಮನ್‌ನಲ್ಲಿ ಟಿ20 ವಿಶ್ವಕಪ್‌ ಪಂದ್ಯಗಳು ಶುರುವಾಗಲಿವೆ.

RCB ನಿನ್ನೆ ಸೋಲಲು Padikkal ಮುಖ್ಯ ಕಾರಣವೇ | Oneindia Kannada
ಮೂರು ತಂಡಗಳು ಈಗಾಗಲೇ ಪ್ಲೇ ಆಫ್ಸ್‌ಗೆ ಎಂಟ್ರಿ

ಮೂರು ತಂಡಗಳು ಈಗಾಗಲೇ ಪ್ಲೇ ಆಫ್ಸ್‌ಗೆ ಎಂಟ್ರಿ

ಇಂಡಿಯನ್ ಪ್ರೀಮಿಯರ್ ಲೀಗ್‌ 14ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಸದ್ಯ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈಗಾಗಲೇ ಪ್ಲೇ ಆಫ್ಸ್‌ಗೆ ಪ್ರವೇಶಿಸಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಮಧ್ಯೆ ಕೊನೇ ಸ್ಥಾನಕ್ಕಾಗಿ ಸ್ಪರ್ಧೆ ನಡೆಯಲಿವೆ. ಮುಂಬೈ, ಕೋಲ್ಕತ್ತಾ, ಪಂಜಾಬ್ ಮತ್ತು ರಾಜಸ್ಥಾನ್ ತಂಡಗಳಿಗೆ ಇನ್ನು ಒಂದೊಂದು ಪಂದ್ಯಗಳಿದ್ದರೆ, ಹೈದರಾಬಾದ್ ಮತ್ತು ಬೆಂಗಳೂರು ತಂಡಗಳಿಗೆ ಇನ್ನು ತಲಾ ಎರಡು ಪಂದ್ಯಗಳು ಬಾಕಿ ಉಳಿದಿವೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಈ ಬಾರಿ ಪ್ಲೇ ಆಫ್ಸ್‌ಗೆ ಪ್ರವೇಶಿಸಿಸೋದು ಅನುಮಾನವಾಗಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Wednesday, October 6, 2021, 18:57 [IST]
Other articles published on Oct 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X