ಇಸ್ರೇಲ್‌ನಲ್ಲಿ ಭಾರತೀಯ ಸಂಶೋಧಕರ ರಕ್ಷಿಸಿದ ಕ್ರಿಕೆಟ್ ಕ್ಲಬ್

ಜೆರುಸಲೇಮ್: ಪ್ಯಾಲೆಸ್ತೈನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಲ್ಲಿ ಸಿಲುಕಿದ್ದ ಭಾರತೀಯ ಸಂಶೋಧಕರನ್ನು ಇಸ್ರೇಲ್‌ನ ಕ್ರಿಕೆಟ್ ಕ್ಲಬ್ ಒಂದು ರಕ್ಷಿಸಿರುವ ಘಟನೆ ನಡೆದಿದೆ. ದಕ್ಷಿಣ ಇಸ್ರೇಲ್‌ನಗರಲ್ಲಿ ಪ್ಯಾಲೆಸ್ತೈನ್ ದಾಳಿಯಿಂದಾಗಿ ಸಮಸ್ಯೆಗೆ ಸಿಲುಕಿದ್ದ ಭಾರತೀಯರನ್ನು ಕ್ರಿಕೆಟ್ ಕ್ಲಬ್ ರಕ್ಷಿಸಿದೆ.

ಭಾರತ 2011ರ ವಿಶ್ವಕಪ್‌ ಗೆದ್ದಾಗ ಕೊಹ್ಲಿ, ಪಠಾಣ್‌ರಲ್ಲಿ ಸಚಿನ್ ಹೇಳಿದ್ದೇನು ಗೊತ್ತಾ?!ಭಾರತ 2011ರ ವಿಶ್ವಕಪ್‌ ಗೆದ್ದಾಗ ಕೊಹ್ಲಿ, ಪಠಾಣ್‌ರಲ್ಲಿ ಸಚಿನ್ ಹೇಳಿದ್ದೇನು ಗೊತ್ತಾ?!

ಬೀರ್‌ಶೇಬ ಹೆಸರಿನ ಸ್ಥಳೀಯ ಕ್ರಿಕೆಟ್ ಕ್ಲಬ್, ನೆಗೆವ್ ದಕ್ಷಿಣ ಪ್ರದೇಶದಲ್ಲಿದ್ದ ಬೆನ್-ಗುರಿಯನ್ ವಿಶ್ವವಿದ್ಯಾಲಯದಲ್ಲಿ ಪರದಾಡುತ್ತಿದ್ದ ಭಾರತೀಯ ಸಂಶೋಧಕರನ್ನು ಪಾರು ಮಾಡಿದೆ. ಕಳೆದ ವಾರದಿಂದ ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ರಾಕೆಟ್‌ಗಳ ಮುತ್ತಿಗೆ ಮಧ್ಯೆ ಪರದಾಡುತ್ತಿದ್ದ ಭಾರತೀಯರಿಗೆ ಕ್ರಿಕೆಟ್ ಕ್ಲಬ್ ಸೂರು ಒದಗಿಸಿದೆ.

'ಭಾರತೀಯ ಸಂಶೋಧಕರಲ್ಲಿ ಕೆಲವರು ಕ್ರಿಕೆಟ್ ಕ್ಲಬ್‌ಗಾಗಿ ಆಡುತ್ತಾರೆ ಮತ್ತು ನಮ್ಮ ಕುಟುಂಬದ ಭಾಗವಾಗಿದ್ದಾರೆ. ಆದರೆ ಸುರಕ್ಷಿತ ಆಶ್ರಯವನ್ನು ಹುಡುಕುವ ಯಾರಾದರೂ ನಮ್ಮ ಸೌಲಭ್ಯವನ್ನು ಬಳಸಲು ಸ್ವಾಗತಿಸುತ್ತೇವೆ ಎಂದು ನಾವು ಅವರಿಗೆ ತಿಳಿಸಿದ್ದೇವೆ,' ಎಂದು ಬೀರ್‌ಶೇಬ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷ ನೌರ್ ಗಡ್ಕರ್ ಹೇಳಿದ್ದಾರೆ.

ಮೊಹಮ್ಮದ್ ಆಮೀರ್ ಐಪಿಎಲ್ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡ್ತಾ ಇದ್ದಾನೆ ಎಂದ ಪಾಕ್ ಮಾಜಿ ಕ್ರಿಕೆಟಿಗಮೊಹಮ್ಮದ್ ಆಮೀರ್ ಐಪಿಎಲ್ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡ್ತಾ ಇದ್ದಾನೆ ಎಂದ ಪಾಕ್ ಮಾಜಿ ಕ್ರಿಕೆಟಿಗ

ವಿರಾಜ್ ಭಿಂಗಾರ್ಡಿವ್, ಹೀನಾ ಖಾಂಡ್, ಶಶಾಂಕ್ ಶೇಖರ್, ರುದ್ರರು ಸೆಂಗುಟಾ ಮತ್ತು ಬಿಷ್ಣು ಖಾಂಡ್ ಮೊದಲಾದ ಒಂದಿಷ್ಟು ಸಂಶೋಧನಾ ವಿದ್ಯಾರ್ಥಿಗಳು ಕ್ರಿಕೆಟ್‌ ಕ್ಲಬ್‌ನ ಆಶ್ರಯದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, May 17, 2021, 18:35 [IST]
Other articles published on May 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X