ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಡೇಲ್ ಸ್ಟೇನ್‌ಗೆ ಕೃತಜ್ಞತೆ ಸಲ್ಲಿಸಿದ ಕ್ರಿಕೆಟ್ ಪ್ರಪಂಚ

ದಕ್ಷಿಣ ಆಫ್ರಿಕಾ ಕಂಡ ಸಾರ್ವಕಾಲಿಕ ಅತ್ಯುತ್ತಮ ಕ್ರಿಕೆಟಿಗರ ಪೈಕಿ ಒಬ್ಬರಾದ ಡೇಲ್ ಸ್ಟೇನ್ ಮಂಗಳವಾರ ( ಆಗಸ್ಟ್ 31 ) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಸಾಕಷ್ಟು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿ, ಅನೇಕ ಪಂದ್ಯಗಳಲ್ಲಿ ತನ್ನ ತಂಡವನ್ನು ಗೆಲ್ಲಿಸಿ, ಹಲವಾರು ವಿಕೆಟ್ ಸಾಧನೆಗಳನ್ನು ಮಾಡಿರುವ ಡೇಲ್ ಸ್ಟೇನ್ ತಮ್ಮ ಕ್ರಿಕೆಟ್ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

38 ವರ್ಷದ ಡೇಲ್ ಸ್ಟೇನ್ 2004 ರ ಡಿಸೆಂಬರ್ 17 ರಂದು ಆರಂಭವಾಗಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಡಿದ ಮೊದಲ ಸರಣಿಯಲ್ಲಿಯೇ ಅತ್ಯುತ್ತಮ ಪ್ರದರ್ಶನ ನೀಡಿದ ಡೇಲ್ ಸ್ಟೇನ್ ತಂಡದಲ್ಲಿ ಹೆಚ್ಚು ದಿನಗಳ ಕಾಲ ಸ್ಥಾನ ಪಡೆದುಕೊಳ್ಳುವ ಭರವಸೆಯನ್ನು ಮೂಡಿಸಿದ್ದರು. ಅದರಂತೆಯೇ ಮುಂದಿನ ಸರಣಿಗಳಲ್ಲಿ ಏಳುಬೀಳುಗಳನ್ನು ಕಂಡ ಡೇಲ್ ಸ್ಟೇನ್ ದಿನ ಕಳೆದಂತೆ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ದಕ್ಷಿಣ ಆಫ್ರಿಕಾ ತಂಡದ ಖಾಯಂ ಆಟಗಾರನಾಗಿ ಸ್ಥಾನ ಪಡೆದುಕೊಂಡುಬಿಟ್ಟರು.

ಭಾರತ vs ಇಂಗ್ಲೆಂಡ್: ಓವಲ್ ಅಂಗಳದಲ್ಲಿ ಭಾರತಕ್ಕಿದೆ ಅತಿ ಕೆಟ್ಟ ಇತಿಹಾಸ, ಕಳಪೆ ಪಂದ್ಯಗಳ ಪಟ್ಟಿ ಇಲ್ಲಿದೆಭಾರತ vs ಇಂಗ್ಲೆಂಡ್: ಓವಲ್ ಅಂಗಳದಲ್ಲಿ ಭಾರತಕ್ಕಿದೆ ಅತಿ ಕೆಟ್ಟ ಇತಿಹಾಸ, ಕಳಪೆ ಪಂದ್ಯಗಳ ಪಟ್ಟಿ ಇಲ್ಲಿದೆ

2018ರ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಡೇಲ್ ಸ್ಟೇನ್ ಶಾನ್ ಪೊಲಾಕ್ ಅವರನ್ನು ಹಿಂದಿಕ್ಕಿ ದಕ್ಷಿಣ ಆಫ್ರಿಕಾದ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡರು. ಇನ್ನು ಆಗಸ್ಟ್ 5, 2019 ರಂದು ಡೇಲ್ ಸ್ಟೇನ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿ ಸೀಮಿತ ಓವರ್‌ಗಳ ಪಂದ್ಯಗಳತ್ತ ಹೆಚ್ಚಿನ ಗಮನವನ್ನು ಹರಿಸುವುದಾಗಿ ಹೇಳಿದ್ದರು. ಇದಾಗಿ ಸದ್ಯಕ್ಕೆ 2 ವರ್ಷಗಳು ಕಳೆದಿದ್ದು ಡೇಲ್ ಸ್ಟೇನ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ.

ಐಪಿಎಲ್ 2021: ಹೊಸ ಆಟಗಾರರ ಸೇರ್ಪಡೆಯ ನಂತರ ಎಲ್ಲಾ 8 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ

ಹೀಗೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಡೇಲ್ ಸ್ಟೇನ್‌ಗೆ ಹಲವಾರು ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಹೌದು ಸಾಮಾಜಿಕ ಜಾಲತಾಣಗಳ ಮೂಲಕ ಡೇಲ್ ಸ್ಟೇನ್‌ಗೆ ವಿವಿಧ ಕ್ರಿಕೆಟಿಗರು ಮತ್ತು ಈ ಕೆಳಕಂಡಂತೆ ಟ್ವೀಟ್ ಮಾಡುವ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ..

ಡೇಲ್ ಸ್ಟೇನ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದ ಐಸಿಸಿ

ಡೇಲ್ ಸ್ಟೇನ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದ ಐಸಿಸಿ

ಡೇಲ್ ಸ್ಟೇನ್ ನಿವೃತ್ತಿಯ ಕುರಿತು ಟ್ವೀಟ್ ಮಾಡಿರುವ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಡೇಲ್ ಸ್ಟೇನ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಅವರ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಟ್ವೀಟ್ ಮಾಡಿ ಶುಭ ಹಾರೈಸಿದೆ..

ಸ್ಟೇನ್ ಲೆಜೆಂಡ್ ಎಂದ ಎಬಿಡಿ

ಸ್ಟೇನ್ ಲೆಜೆಂಡ್ ಎಂದ ಎಬಿಡಿ

ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿರುವ ಡೇಲ್ ಸ್ಟೇನ್ ಕುರಿತು ತಮ್ಮ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಮಾಡಿರುವ ಎಬಿ ಡಿವಿಲಿಯರ್ಸ್ 'ಅತ್ಯುತ್ತಮ ಆಟಗಾರ, ಅತ್ಯುತ್ತಮ ವ್ಯಕ್ತಿ, ಅಮರ ನೆನಪುಗಳು, ಎಂದೆಂದಿಗೂ ಸ್ಟೇನ್ ಲೆಜೆಂಡ್' ಎಂದು ಬರೆದುಕೊಳ್ಳುವುದರ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

Dale Steyn ಅವರಿಗೆ IPL ಅನುಭವ ಮರೆಯಲಾಗದ ಅನುಭವವಂತೆ | Oneindia Kannada
ಸ್ಟೇನ್ ನನ್ನ ವೃತ್ತಿ ಜೀವನದಲ್ಲಿ ಕಂಡ ಅತ್ಯಂತ ಶ್ರೇಷ್ಠ ಬೌಲರ್

ಸ್ಟೇನ್ ನನ್ನ ವೃತ್ತಿ ಜೀವನದಲ್ಲಿ ಕಂಡ ಅತ್ಯಂತ ಶ್ರೇಷ್ಠ ಬೌಲರ್

ಡೇಲ್ ಸ್ಟೇನ್ ನಿವೃತ್ತಿಯ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಆಸ್ಟ್ರೇಲಿಯಾದ ಶೇನ್ ವಾಟ್ಸನ್ ಡೇಲ್ ಸ್ಟೇನ್ ನನ್ನ ವೃತ್ತಿಜೀವನದಲ್ಲಿಯೇ ನಾನು ಕಂಡ ಅತ್ಯಂತ ಶ್ರೇಷ್ಠ ಬೌಲರ್ ಎಂದು ಕೊಂಡಾಡಿದ್ದಾರೆ. ನಾನು ಎದುರಿಸಿದ ಡೇಲ್ ಸ್ಟೇನ್ ಎಸೆತಗಳಲ್ಲಿ ಅವರು ಯಾವುದೇ ಕೆಟ್ಟ ಎಸೆತಗಳನ್ನೇ ಎಸೆದಿಲ್ಲ ಎನಿಸುತ್ತದೆ. ಮೈದಾನದಲ್ಲಿ ಅಂತಹ ಅತ್ಯದ್ಭುತ ಪೈಪೋಟಿಯುತ ಆಟಗಾರ ಡೇಲ್ ಸ್ಟೇನ್, ಮೈದಾನದಿಂದ ಆಚೆಗೆ ಅಷ್ಟೇ ಸರಳ ವ್ಯಕ್ತಿ ಎಂದು ಟ್ವೀಟ್ ಮಾಡುವ ಮೂಲಕ ಶೇನ್ ವಾಟ್ಸನ್ ಕೃತಜ್ಞತೆ ಸಲ್ಲಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, August 31, 2021, 20:49 [IST]
Other articles published on Aug 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X