ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CSA T20 League: ಹೊಸ ಫ್ರಾಂಚೈಸಿ ಘೋಷಿಸಿದ ಸನ್‌ರೈಸರ್ಸ್ ಹೈದರಾಬಾದ್

CSA T20 League: SunRisers Hyderabad Announced New Franchise

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ತಂಡ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಮ್ಮ ಕ್ರಿಕೆಟ್ ಸೌತ್ ಆಫ್ರಿಕಾ (ಸಿಎಸ್‌ಎ) ಟಿ20 ಲೀಗ್ ಫ್ರಾಂಚೈಸ್‌ನ ಹೆಸರನ್ನು "ಸನ್‌ರೈಸರ್ಸ್ ಈಸ್ಟರ್ನ್ ಕೇಪ್' ಎಂದು ಬಹಿರಂಗಪಡಿಸಿದೆ.

Breaking: ಬ್ರೆಂಡನ್ ಮೆಕಲಮ್ ಬದಲಿಗೆ ಕೆಕೆಆರ್ ತಂಡಕ್ಕೆ ಹೊಸ ಮುಖ್ಯ ಕೋಚ್ ಆಯ್ಕೆBreaking: ಬ್ರೆಂಡನ್ ಮೆಕಲಮ್ ಬದಲಿಗೆ ಕೆಕೆಆರ್ ತಂಡಕ್ಕೆ ಹೊಸ ಮುಖ್ಯ ಕೋಚ್ ಆಯ್ಕೆ

ಸಿಎಸ್ಎ ಟಿ20 ಲೀಗ್‌ನಲ್ಲಿ ತಂಡವನ್ನು ಹೊಂದಿರುವ ಇತರ ನಾಲ್ಕು ಐಪಿಎಲ್ ಫ್ರಾಂಚೈಸ್ ಮಾಲೀಕರನ್ನು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸ್ ಸೇರಿಕೊಂಡಿದೆ. ಇತರ ನಾಲ್ಕು ತಂಡಗಳೆಂದರೆ, MI ಕೇಪ್ ಟೌನ್ (ಮುಂಬೈ ಇಂಡಿಯನ್ಸ್ ಮಾಲೀಕರ ಒಡೆತನ), ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ (ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರ ಒಡೆತನ), ಪಾರ್ಲ್ ರಾಯಲ್ಸ್ (ರಾಜಸ್ಥಾನ್ ರಾಯಲ್ಸ್ ಮಾಲೀಕರ ಒಡೆತನ) ಮತ್ತು ಪ್ರಿಟೋರಿಯಾ ಕ್ಯಾಪಿಟಲ್ಸ್ (ದೆಹಲಿ ಕ್ಯಾಪಿಟಲ್ಸ್ ಮಾಲೀಕರ ಒಡೆತನ).

ತಂಡದ ಹೆಸರು ಸನ್‌ರೈಸರ್ಸ್ ಈಸ್ಟರ್ನ್ ಕೇಪ್

"ಆರೆಂಜ್ ಆರ್ಮಿ ಇದೀಗ ದೊಡ್ಡದಾಗಿದೆ, ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಕ್ರಿಕೆಟ್ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ನಮ್ಮ ತಂಡದ ಹೆಸರಾಗಿರುತ್ತದೆ," ಎಂದು ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಮಂಗಳವಾರ ಟ್ವೀಟ್ ಮಾಡಿದೆ.

"ಆರೆಂಜ್ ಆರ್ಮಿ, ಸನ್‌ರೈಸರ್ಸ್ ಈಸ್ಟರ್ನ್ ಕೇಪ್‌ಗೆ ಸುಸ್ವಾಗತ," ಎಂದು ಐಪಿಎಲ್ ಫ್ರಾಂಚೈಸಿಯಾದ ಸನ್‌ರೈಸರ್ಸ್ ಹೈದರಾಬಾದ್ ಕೂಡ ಟ್ವೀಟ್ ಮಾಡಿದೆ.

ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಮತ್ತು ಸೂಪರ್‌ಸ್ಪೋರ್ಟ್ ಟಿವಿ ಜನವರಿ 2023ರಿಂದ ಪ್ರಾರಂಭವಾಗುವ ಆರು ಖಾಸಗಿ ಸ್ವಾಮ್ಯದ ಫ್ರಾಂಚೈಸಿಗಳನ್ನು ಒಳಗೊಂಡ ಟಿ20 ಸ್ಪರ್ಧೆಯ ರಚನೆಯನ್ನು ಏಪ್ರಿಲ್‌ನಲ್ಲಿ ಘೋಷಿಸಿತ್ತು.

ಉದ್ಘಾಟನಾ ಟಿ20 ಲೀಗ್‌ನ ಆರು ಫ್ರಾಂಚೈಸಿಗಳು

ಉದ್ಘಾಟನಾ ಟಿ20 ಲೀಗ್‌ನ ಆರು ಫ್ರಾಂಚೈಸಿಗಳು

ದಕ್ಷಿಣ ಆಫ್ರಿಕಾದಲ್ಲಿ ಉದ್ಘಾಟನಾ ಟಿ20 ಲೀಗ್‌ನ ಆರು ಫ್ರಾಂಚೈಸಿಗಳು ಕೆಲವು ಅತ್ಯುತ್ತಮ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನು ಒಳಗೊಂಡಿರುವ ವಿಶ್ವ ದರ್ಜೆಯ ಆಟಗಾರರು ಸಹಿ ಮಾಡಿದ್ದಾರೆ. ಇದು ಲೀಗ್‌ಗೆ ಬದ್ಧವಾಗಿರುವ ಎಲ್ಲಾ ಒಪ್ಪಂದದ ದಕ್ಷಿಣ ಆಫ್ರಿಕಾ ಮತ್ತು ದೇಶೀಯ ಆಟಗಾರರಿಗೆ ಹೆಚ್ಚುವರಿಯಾಗಿದೆ.

ಆರು ಫ್ರಾಂಚೈಸಿಗಳು 17 ಆಟಗಾರರ ತಂಡವನ್ನು ಹೊಂದಿದ್ದು, ಹರಾಜಿನ ಮೊದಲು ಮೂರು ಅಂತಾರಾಷ್ಟ್ರೀಯ ಆಟಗಾರರು, ಒಬ್ಬ ದಕ್ಷಿಣ ಆಫ್ರಿಕಾ ಆಟಗಾರ ಮತ್ತು ಒಬ್ಬ ಅನ್‌ಕ್ಯಾಪ್ಡ್ ದಕ್ಷಿಣ ಆಫ್ರಿಕಾದ ಆಟಗಾರರಿಂದ ಮಾಡಲ್ಪಟ್ಟ ಐದು ಆಟಗಾರರನ್ನು ಪೂರ್ವ-ಸೈನ್ ಅಪ್ ಮಾಡಬಹುದಾಗಿದೆ.

ಮಾಜಿ ನಾಯಕ ಗ್ರೇಮ್ ಸ್ಮಿತ್ ಟಿ20 ಲೀಗ್‌ನ ಕಮಿಷನರ್

ಮಾಜಿ ನಾಯಕ ಗ್ರೇಮ್ ಸ್ಮಿತ್ ಟಿ20 ಲೀಗ್‌ನ ಕಮಿಷನರ್

ಜುಲೈನಲ್ಲಿ ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರನ್ನು ದಕ್ಷಿಣ ಆಫ್ರಿಕಾದ ಹೊಸ ಟಿ20 ಲೀಗ್‌ನ ಕಮಿಷನರ್ ಆಗಿ ನೇಮಿಸಲಾಗಿದೆ.

ಸನ್‌ರೈಸರ್ಸ್ ಈಸ್ಟರ್ನ್ ಕೇಪ್, ಬುಧವಾರ, ಆಗಸ್ಟ್ 17ರಂದು ಬಲಗೈ ಬ್ಯಾಟರ್ ಐಡೆನ್ ಮಾರ್ಕ್ರಾಮ್ ಮತ್ತು ಬಲಗೈ ಮಧ್ಯಮ ವೇಗದ ಬೌಲರ್ ಒಟ್ನಿಯೆಲ್ ಬಾರ್ಟ್‌ಮ್ಯಾನ್ ಅವರನ್ನು CSA ಟಿ20 ಲೀಗ್‌ನ ಉದ್ಘಾಟನಾ ಆವೃತ್ತಿಗೆ ತಮ್ಮ ಮೊದಲ ಎರಡು ಆಟಗಾರರನ್ನು ಹೆಸರಿಸಿದೆ.

ಸೆಂಚುರಿಯನ್ ಮೂಲದ ಐಡೆನ್ ಮಾರ್ಕ್ರಾಮ್ ದಕ್ಷಿಣ ಆಫ್ರಿಕಾದ ಎಲ್ಲಾ ಸ್ವರೂಪದ ಆಟಗಾರರಾಗಿದ್ದಾರೆ ಮತ್ತು ಇತ್ತೀಚೆಗೆ ಅವರು CSA ಪ್ರಶಸ್ತಿಗಳಲ್ಲಿ ಅಗ್ರ ಟಿ20 ಪಂದ್ಯದ ಆಟಗಾರನ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್)ಗಾಗಿ ಐಡೆನ್ ಮಾರ್ಕ್ರಾಮ್ ಆಟವಾಡಿದ್ದಾರೆ.

ಐಡೆನ್ ಮಾರ್ಕ್ರಾಮ್ 35.10ರ ಸರಾಸರಿಯಲ್ಲಿ 2247 ರನ್

ಐಡೆನ್ ಮಾರ್ಕ್ರಾಮ್ 35.10ರ ಸರಾಸರಿಯಲ್ಲಿ 2247 ರನ್

ಐಡೆನ್ ಮಾರ್ಕ್ರಾಮ್ 87 ಟಿ20 ಪಂದ್ಯಗಳಲ್ಲಿ 35.10ರ ಸರಾಸರಿಯಲ್ಲಿ 2247 ರನ್ ಗಳಿಸಿದ್ದಾರೆ ಮತ್ತು 132.95 ಸ್ಟ್ರೈಕ್ ರೇಟ್ ಜೊತೆಗೆ 19 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರ್ಕ್ರಾಮ್ 22 ಪಂದ್ಯಗಳಿಂದ ಎಂಟು ಅರ್ಧ ಶತಕಗಳೊಂದಿಗೆ 722 ರನ್ ಗಳಿಸಿದ್ದಾರೆ.

ಇನ್ನು ವೇಗದ ಬೌಲರ್ ಒಟ್ನಿಯೆಲ್ ಬಾರ್ಟ್‌ಮ್ಯಾನ್‌ಗೆ ಸಂಬಂಧಿಸಿದಂತೆ, ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ತಂಡಕ್ಕಾಗಿ ಆಡಿಲ್ಲ, ಆದರೆ ದೇಶೀಯ ಪಂದ್ಯಗಳಲ್ಲಿ ಪ್ರಭಾವಶಾಲಿಯಾಗಿದ್ದಾನೆ. 35 ಟಿ20 ಪಂದ್ಯಗಳಲ್ಲಿ ವೆಸ್ಟರ್ನ್ ಕೇಪ್‌ನ 29 ವರ್ಷದ ಆಟಗಾರ ಬಾರ್ಟ್‌ಮ್ಯಾನ್‌ 6.21ರ ಎಕಾನಮಿ ದರದಲ್ಲಿ 41 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ ಮತ್ತು ತನ್ನ ಹೆಸರಿಗೆ ಎರಡು ಬಾರಿ ನಾಲ್ಕು ವಿಕೆಟ್‌ಗಳನ್ನು ಸೇರಿಸಿಕೊಂಡಿದ್ದಾರೆ.

ಹಲವಾರು ದೇಶಗಳ ಆಟಗಾರರು ಲೀಗ್‌ನ ಭಾಗವಾಗಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಪ್ರಸ್ತುತ 2023ರ ಸೀಸನ್ ಮತ್ತು ಅದರಾಚೆಗೆ ಸೈನ್ ಅಪ್ ಮಾಡಲಾಗುತ್ತಿದೆ. ಮುಂಬರುವ ವಾರಗಳಲ್ಲಿ ಹರಾಜು ನಡೆಯಲಿದ್ದು, ಇದು CSA ಟಿ20 ಲೀಗ್‌ಗೆ ಸಹಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ20 ಲೀಗ್‌ಗೆ 30ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟಿಗರು ಸಹಿ ಹಾಕಿದ್ದಾರೆ.

Story first published: Wednesday, August 17, 2022, 19:36 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X