ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಕ್ರಿಮಿನಲ್ ಅಲ್ಲ: ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ವಿರುದ್ಧ ಸಿಟ್ಟಿಗೆದ್ದ ಡೇವಿಡ್ ವಾರ್ನರ್!

David Warner criticises the Australian Board for said I am not a criminal

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ತಮ್ಮ ದೇಶದ ಕ್ರಿಕೆಟ್ ಮಂಡಳಿಯ ವಿರುದ್ಧ ಕಿಡಿಕಾರಿದ್ದಾರೆ. ಚೆಂಡು ವಿರೂಪ ಪ್ರಕರಣದಲ್ಲಿ ಡೇವಿಡ್ ವಾರ್ನರ್ ತಪ್ಪಿತಸ್ತ ಎಂದು ಸಾಬೀತಾದ ಬಳಿಕ ಅವರನ್ನು ಆಸ್ಟ್ರೇಲಿಯಾ ತಂಡದ ನಾಯಕತ್ವದಿಂದ ಆಜೀವ ನಿಷೇಧಕ್ಕೆ ಗುರಿ ಪಡಿಸಲಾಗಿತ್ತು. ಇದೀಗ ಈ ತೀರ್ಮಾನವನ್ನು ಪ್ರಶ್ನಿಸಲು ಡೇವಿಡ್ ವಾರ್ನರ್‌ಗೆ ಮಂಡಳಿ ಅವಕಾಶ ನೀಡಿದೆ. ಈ ಸಂದರ್ಭದಲ್ಲಿ ಮಂಡಳಿ ತನ್ನ ವಿಚಾರದಲ್ಲಿ ನಡೆದುಕೊಂಡ ರೀತಿಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ಕಿಡಿಕಾರಿದ್ದಾರೆ.

2018ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಚೆಂಡು ವಿರೂಪ ಪ್ರಕರಣದ ಬಳಿಕ ವಾರ್ನರ್‌ಗೆ ಒಂದು ವರ್ಷಗಳ ಕಾಲ ನಿಷೇಧವನ್ನು ಹೇರಲಾಗಿತ್ತು. ಜೊತೆಗೆ ನಾಯಕತ್ವಕ್ಕೆ ಜೀವಮಾನ ನಿಷೇಧ ಶಿಕ್ಷೆಯನ್ನು ವಿಧಿಸಲಾಗಿತ್ತು. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಆಟಗಾರರ ನಿಷೇಧ ವಿಚಾರವಾಗಿದ್ದ ನಿಯಮದಲ್ಲಿ ಬದಲಾವಣೆ ಮಾಡಿಕೊಂಡಿದೆ. ಈ ಬದಲಾವಣೆಯಿಂದಾಗಿ ಆಟಗಾರರು ಮತ್ತು ಸಿಬ್ಬಂದಿಗೆ ದೀರ್ಘಾವಧಿಯ ನಿಷೇಧಗಳಿಗೆ ಒಳಗಾಗಿದ್ದಲ್ಲಿ ಅದರ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುತ್ತದೆ. ಈ ಕಾರಣದಿಂದಾಗಿ ವಾರ್ನರ್ ಈಗ ಅವರ ನಾಯಕತ್ವದ ನಿಷೇಧವನ್ನು ಪರಿಶೀಲಿಸಲು ವಿನಂತಿ ಮಾಡುವ ಅವಕಾಶ ಹೊಂದಿದ್ದಾರೆ.

ವಿಜಯ್ ಹಜಾರೆ ಟ್ರೋಫಿ 2022: ಸತತ 5ನೇ ಶತಕ ಸಿಡಿಸಿ ದಿಗ್ಗಜರನ್ನು ಹಿಂದಿಕ್ಕಿದ ಎನ್ ಜಗದೀಸನ್ವಿಜಯ್ ಹಜಾರೆ ಟ್ರೋಫಿ 2022: ಸತತ 5ನೇ ಶತಕ ಸಿಡಿಸಿ ದಿಗ್ಗಜರನ್ನು ಹಿಂದಿಕ್ಕಿದ ಎನ್ ಜಗದೀಸನ್

ಬೇಸರ ಹೊರಹಾಕಿದ ವಾರ್ನರ್

ಬೇಸರ ಹೊರಹಾಕಿದ ವಾರ್ನರ್

ತಮ್ಮ ಮೇಲಿನ ನಿಷೇಧವನ್ನು ತೆಗೆದು ಹಾಕುವಂತೆ ಡೇವಿಡ್ ವಾರ್ನರ್ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಆಟಗಾರರ ಒಕ್ಕೂಟದ ಮೂಲಕ ಮನವಿ ಮಾಡಿದ್ದರು. ಅದಾಗಿ ಬರೊಬ್ಬರಿ 9 ತಿಂಗಳ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಪ್ರಕ್ರಿಯೆ ಇಷ್ಟು ತಡವಾಗಿರುವ ವಿಚಾರವಾಗಿ ಡೇವಿಡ್ ವಾರ್ನರ್ ಕಿಡಿ ಕಾರಿದ್ದಾರೆ. "2018ರಲ್ಲಿ ಈ ನಿಷೇಧದ ನಿರ್ಧಾರವನ್ನು ಕೇವಲ ನಾಲ್ಕು ದಿನಗಳಲ್ಲಿ ತೆಗೆದುಕೊಂಡಿದ್ದರು. ಆದರೆ ಈಗ ಅದನ್ನು ಬದಲಾವಣೆ ಮಾಡಲು 9 ತಿಂಗಳು ತೆಗೆದುಕೊಂಡಿರುವುದು ಬೇಸರ ಮೂಡಿಸಿದೆ" ಎಂದಿದ್ದಾರೆ.

"ನಾನು ಕ್ರಿಮಿನಲ್ ಅಲ್ಲ"

ಆಸ್ಟ್ರೇಲಿಯಾ ಮಾಧ್ಯಮದ ಜೊತೆಗೆ ಮಾತನಾಡಿದ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಕ್ರಿಕೆಟ್ ಆಸ್ಟ್ರೇಲಿಯಾದ ಈ ನಿರ್ಧಾರದ ಬಗ್ಗೆ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. "ನಾನು ಕ್ರಿಮಿನಲ್ ಅಲ್ಲ. ಒಂದು ಹಂತದ ಬಳಿಕ ಮನವಿ ಮಾಡುವ ಹಕ್ಕು ದೊರೆಯಬೇಕು. ನಿಷೇಧ ಮಾಡುವ ನಿರ್ಧಾರದ ಬಗ್ಗೆ ನಾನು ಅರ್ಥ ಮಾಡಿಕೊಳ್ಳುತ್ತೇನೆ. ಆದರೆ ಒಬ್ಬ ವ್ಯಕ್ತಿಯನ್ನು ಜೀವಮಾನ ಶಿಕ್ಷೆಗೆ ಒಳಪಡಿಸುವುದು ನಿಜಕ್ಕೂ ಕಠಿಣ ನಿರ್ಧಾರ" ಎಂದಿದ್ದಾರೆ ಡೇವಿಡ್ ವಾರ್ನರ್.

ಸ್ಟೀವ್ ಸ್ಮಿತ್ ಮೇಲೆ ಇತ್ತು ನಾಯಕತ್ವದ ನಿಷೇಧ

ಸ್ಟೀವ್ ಸ್ಮಿತ್ ಮೇಲೆ ಇತ್ತು ನಾಯಕತ್ವದ ನಿಷೇಧ

ಇನ್ನು ಸ್ಯಾಂಡ್ ಪೇಪರ್ ಪ್ರಕೆರಣದಲ್ಲಿ ಭಾಗಿಯಾಗಿದ್ದ ಆಸ್ಟ್ರೇಲಿಯಾದ ಪ್ರಮುಖ ಆಟಗಾರ ಹಾಗೂ ಅಂದಿನ ನಾಯಕ ಸ್ಟೀವ್ ಸ್ಮಿತ್ ವಿರುದ್ಧ ಕೂಡ ಕಠಿಣ ಕ್ರಮವನ್ನು ಕ್ರಿಕೆಟ್ ಆಸ್ಟ್ರೇಲಿಯಾ ತೆಗೆದುಕೊಂಡಿತ್ತು. ಒಂದು ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಕ್ಕೆ ಒಳಗಾಗಿದ್ದ ಸ್ಟೀವ್ ಸ್ಮಿತ್ ಎರಡು ವರ್ಷಗಳ ಕಾಲ ನಾಯಕತ್ವದ ನಿಷೇಧಕ್ಕೂ ಗುರಿಯಾಗಿದ್ದರು. 2020ರ ಮಾರ್ಚ್‌ನಲ್ಲಿ ಸ್ಟೀವ್ ಸ್ಮಿತ್ ಅವರ ಮೇಲಿದ್ದ ನಾಯಕತ್ವದ ನಿಷೇಧ ಮುಕ್ತಾಯಗೊಂಡಿತ್ತು.

ಆಸ್ಟ್ರೇಲಿಯಾಗೆ ಕಪ್ಪುಚುಕ್ಕೆಯಿಟ್ಟ ಪ್ರಕರಣ

ಆಸ್ಟ್ರೇಲಿಯಾಗೆ ಕಪ್ಪುಚುಕ್ಕೆಯಿಟ್ಟ ಪ್ರಕರಣ

ಸ್ಯಾಂಡ್ ಪೇಪರ್ ಪ್ರಕರಣದಿಂದಾಗಿ ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಮುಖಭಂಗಕ್ಕೆ ಗುರಿಯಾಗಿತ್ತು. ಹೀಗಾಗಿ ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಆಟಗಾರರ ವಿರುದ್ಧ ಕ್ರಿಕೆಟ್ ಆಸ್ಟ್ರೇಲಿಯಾ ಕಠಿಣ ಕ್ರಮವನ್ನು ತೆಗೆದುಕೊಂಡಿತ್ತು. ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್‌ಗೆ ಒಂದು ವರ್ಷಗಳ ಕಾಲ ಕ್ರಿಕೆಟ್ ಚಟುವಟಿಕೆಯಿಂದ ಸಂಪೂರ್ಣ ನಿಷೇಧ ಹೇರಲಾಗಿದ್ದರೆ ಬೌಲರ್ ಬೆನ್‌ಕ್ರಾಫ್ಟ್‌ಗೆ 9 ತಿಂಗಳ ಕಾಳ ನಿಷೇಧ ಹೇರಲಾಗಿತ್ತು. ಅಲ್ಲದೆ ಕೋಚ್ ಆಗಿದ್ದ ಡ್ಯಾರನ್ ಲೆಹ್ಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಜೇಮ್ಸ್ ನೆದರ್ಲ್ಯಾಂಡ್ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು.

Story first published: Monday, November 21, 2022, 20:34 [IST]
Other articles published on Nov 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X