ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ತಂಡದ ನಾಯಕತ್ವದ ಮೇಲೆ ವಾರ್ನರ್ ಕಣ್ಣು!: ಮನಬಿಚ್ಚಿ ಮಾತನಾಡಿದ ಸ್ಟಾರ್ ಕ್ರಿಕೆಟಿಗ

David Warner important statement on leading australia side said Would be a privilege

ಆಸ್ಟ್ರೇಲಿಯಾ ತಂಡದ ಸೀಮಿತ ಓವರ್‌ಗಳ ನಾಯಕ ಆರೋನ್ ಫಿಂಚ್ ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಆಸಿಸ್ ತಂಡವನ್ನು ಫಿಂಚ್ ಮುನ್ನಡೆಸುತ್ತಿದ್ದಾರಾದರೂ ಚುಟುಕು ವಿಶ್ವಕಪ್‌ನ ಮುಕ್ತಾಯದ ಬಳಿಕ ಟಿ20 ಮಾದರಿಯ ವಿಚಾರವಾಗಿ ಫಿಂಚ್ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಸಂದರ್ಭದಲ್ಲಿ ಏಕದಿನ ನಾಯಕತ್ವ ತೆರವಾಗಿರುವ ಹಿನ್ನೆಲೆಯಲ್ಲಿ ಆಸಿಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬುದು ಪ್ರಶ್ನೆಯಾಗಿದೆ.

ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಆಸಿಸ್ ಏಕದಿನ ತಂಡದ ನಾಯಕನನ್ನು ಆಯ್ಕೆ ಮಾಡಲು ಆತುರವನ್ನು ತೋರ್ಪಡಿಸಿಲ್ಲ. ಹೀಗಾಗಿ ವಿಶ್ವಕಪ್‌ನ ಅಂತ್ಯಬಳಿಕವೇ ಆಸಿಸ್ ಕ್ರಿಕೆಟ್ ಮಂಡಳಿ ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಿಕೊಳ್ಳಲು ತಾನು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ.

ಟಿ20 ಕ್ರಿಕೆಟ್‌ನ ಅತ್ಯುತ್ತಮ ಬೌಲರ್ ಬೂಮ್ರಾ: ಟಿ20 ವಿಶ್ವಕಪ್‌ಗೆ ಅಲಭ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಆಸಿಸ್ ಸ್ಟಾರ್ಟಿ20 ಕ್ರಿಕೆಟ್‌ನ ಅತ್ಯುತ್ತಮ ಬೌಲರ್ ಬೂಮ್ರಾ: ಟಿ20 ವಿಶ್ವಕಪ್‌ಗೆ ಅಲಭ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಆಸಿಸ್ ಸ್ಟಾರ್

ನಾಯಕತ್ವದ ನಿರ್ಬಂಧಕ್ಕೆ ಒಳಗಾಗಿದ್ದ ವಾರ್ನರ್

ನಾಯಕತ್ವದ ನಿರ್ಬಂಧಕ್ಕೆ ಒಳಗಾಗಿದ್ದ ವಾರ್ನರ್

ಆಸ್ಟ್ರೇಲಿಯಾದ ಕುಖ್ಯಾತ ಸ್ಯಾಂಡ್‌ಪೇಪರ್ ಘಟನೆಯ ನಂತರ ಡೇವಿಡ್ ವಾರ್ನರ್ ಅವರನ್ನು ಕ್ರಿಕೆಟ್ ಚಟುವಟಿಕೆಗಳಿಂದ ನಿಷೇಧ ಮಾಡುವ ಜೊತೆಗೆ ನಾಯಕತ್ವದಿಂದಲೂ ನಿಷೇಧ ಮಾಡಲಾಗಿತ್ತು. ಇದೇ ಪ್ರಕರಣದಲ್ಲಿ ಸ್ಟೀವ್ ಸ್ಮಿತ್ ಕೂಡ ನಿಷೇಧಕ್ಕೆ ಒಳಗಾಗಿದ್ದರು ಕೂಡ ಅದನ್ನು ಪೂರೈಸಿದ ಬಳಿಕ ಕಳೆದ ಆಶಸ್ ಸರಣಿಯನ್ನು ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸುವ ಅವಕಾಶವನ್ನು ಕೂಡ ಪಡೆದುಕೊಂಡಿದ್ದರು. ಹೀಗಾಗಿ ನಾಯಕತ್ವದ ನಿಷೇಧವನ್ನು ಡೇವಿಡ್ ವಾರ್ನರ್ ಅವರಿಗೂ ತೆಗೆದುಯಹಾಕಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಆಸಿಸ್ ತಂಡದ ಸೀಮಿತ ಓವರ್‌ಗಳ ಜವಾಬ್ಧಾರಿ ವಹಿಸಿಕೊಳ್ಳಲಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಅದು ನಿಜಕ್ಕೂ ದೊಡ್ಡ ಜವಾಬ್ಧಾರಿ

ಅದು ನಿಜಕ್ಕೂ ದೊಡ್ಡ ಜವಾಬ್ಧಾರಿ

ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ತಾನು ಇನ್ನು ಕೂಡ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಜೊತೆಗೆ ಮಾತುಕತೆ ನಡೆಸಿಲ್ಲ ಎಂದಿದ್ದಾರೆ ಡೇವಿಡ್ ವಾರ್ನರ್. ಈ ಅವಕಾಶ ದೊರೆತರೆ ಅದು ದೊಡ್ಡ ಗೌರವ ಎಂಬ ಮಾತನ್ನು ಕೂಡ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದು ಈ ಮೂಲಕ ನಾಯಕತ್ವದ ಹೊಣೆಗಾರಿಕೆ ವಹಿಸಿಕೊಳ್ಳಲು ತಾನು ಸಿದ್ದ ಎಂದಿದ್ದಾರೆ. "ನಾನು ಈ ವಿಚಾರವಾಗಿ ಯಾವುದೇ ಮಾತುಕತೆಯನ್ನು ನಡೆಸಿಲ್ಲ. ಆದರೆ ಅಂತಿಮವಾಗಿ ಯಾವುದೇ ಮಾದರಿಯಲ್ಲಾದರೂ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುವ ಅವಕಾಶ ದೊರೆತದರೆ ಅದು ದೊಡ್ಡ ಗೌರವ" ಎಂದಿದ್ದಾರೆ ಡೇವಿಡ್ ವಾರ್ನರ್.

ಟಿ20 ವಿಶ್ವಕಪ್‌ನಲ್ಲಿ ವಾರ್ನರ್ ನಿರ್ಣಾಯಕ ಪಾತ್ರ

ಟಿ20 ವಿಶ್ವಕಪ್‌ನಲ್ಲಿ ವಾರ್ನರ್ ನಿರ್ಣಾಯಕ ಪಾತ್ರ

ಇನ್ನು ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿಯೇ ನಡೆಯಲಿದ್ದು ಕೆಲವೇ ದಿನಗಳು ಮಾತ್ರವೇ ಬಾಕಿಯಿದೆ. ಕಳೆದ ವರ್ಷ ಯುಎಇನಲ್ಲಿ ನಡೆದ ಚುಟುಕು ವಿಶ್ವಕಪ್ ಗೆದ್ದು ಮೊದಲ ಬಾರಿಗೆ ಆಸ್ಟ್ರೇಲಿಯಾ ಟಿ20 ಮಾದರಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಇದೀಗ ಎರಡನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿ ಆಸಿಸ್ ಪಡೆಯಿದೆ. ಕಳೆದ ವರ್ಷದ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಡೇವಿಡ್ ವಾರ್ನರ್ ಈ ಬಾರಿಯೂ ಅಂಥಾದ್ದೇ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ತವರಿನಲ್ಲಿಯೇ ನಡೆಯುತ್ತಿರುವ ಕಾರಣ ಮತ್ತಷ್ಟು ಆಕ್ರಮಣಕಾರಿಯಾಗುವ ಸಾಧ್ಯತೆಯೂ ಇದೆ.

Story first published: Friday, September 30, 2022, 18:14 [IST]
Other articles published on Sep 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X