ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ವೃತ್ತಿ ಬದುಕಿನ ಬಗ್ಗೆ ಮರುಯೋಚಿಸಬೇಕೆಂದಿದ್ದೇನೆ: ಡೇವಿಡ್ ವಾರ್ನರ್

David Warner says he might ‘rethink’ future due to coronavirus restrictions

ಸಿಡ್ನಿ, ಜುಲೈ 29: ಕ್ರಿಕೆಟ್ ವೃತ್ತಿ ಬದುಕಿನ ಭವಿಷ್ಯದ ಬಗ್ಗೆ ಮರುಯೋಚಿಸಬೇಕೆಂದಿದ್ದೇನೆ ಎಂದು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹೇಳಿದ್ದಾರೆ. ಕೊರೊನಾವೈರಸ್‌ ಸೋಂಕು ಜಗತ್ತಿನ ಜನ ಜೀವನದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಗಿದೆ. ಕ್ರಿಕೆಟಿಗರಿಗೂ ಕೊರೊನಾ ಸಮಸ್ಯೆಯುಂಟು ಮಾಡುತ್ತಿದೆ. ಈ ಬಗ್ಗೆ ವಾರ್ನರ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಂದು 6 ಸಿಕ್ಸ್ ಹೊಡೆಸಿಕೊಂಡಿದ್ದ ಸ್ಟುವರ್ಟ್ ಬ್ರಾಡ್‌ರಿಂದ ಇಂದು ಟೆಸ್ಟ್ ದಾಖಲೆ!ಅಂದು 6 ಸಿಕ್ಸ್ ಹೊಡೆಸಿಕೊಂಡಿದ್ದ ಸ್ಟುವರ್ಟ್ ಬ್ರಾಡ್‌ರಿಂದ ಇಂದು ಟೆಸ್ಟ್ ದಾಖಲೆ!

ಕೋವಿಡ್-19 ಶುರುವಾದಾಗಿನಿಂದ ಕ್ರೀಡಾಪಟುಗಳು ಮೊದಲಿನಂತೆ ಕ್ರೀಡಾಭ್ಯಾಸದಲ್ಲಿ ತೊಡಗಿಕೊಳ್ಳಲಾಗುತ್ತಿಲ್ಲ. ಕ್ರೀಡಾ ಚಟುವಟಿಕೆಗಳು ಮತ್ತೆ ಆರಂಭವಾಗುತ್ತಿದೆಯಾದರೂ ಬಹಳಷ್ಟು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಪ್ರಯಾಣ ನಿರ್ಬಂಧವೂ ಕ್ರೀಡಾಪಟುಗಳಿಗೆ ತಲೆ ನೋವಾಗಿದೆ.

'ಅವನ ಕ್ರಿಕೆಟ್ ಎಲ್ಲೀವರೆಗೆ ಹೋಗುತ್ತೆ ನೋಡೋಣ': ರೋಹಿತ್ ಟೆಸ್ಟ್ ಭವಿಷ್ಯಕ್ಕೆ ಗಂಭೀರ್ ಹೇಳಿಕೆ'ಅವನ ಕ್ರಿಕೆಟ್ ಎಲ್ಲೀವರೆಗೆ ಹೋಗುತ್ತೆ ನೋಡೋಣ': ರೋಹಿತ್ ಟೆಸ್ಟ್ ಭವಿಷ್ಯಕ್ಕೆ ಗಂಭೀರ್ ಹೇಳಿಕೆ

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ಡೇವಿಡ್ ವಾರ್ನರ್, 'ನಾನು ಹಚ್ಚಿಕೊಂಡಿರುವ ನನ್ನ ಪತ್ನಿ ಮತ್ತು ಮೂವರು ಪುತ್ರಿಯರು ನನ್ನ ವೃತ್ತಿ ಬದುಕಿನ ಭಾಗವಾಗಿದ್ದಾರೆ. ನೀವು ಯಾವತ್ತಿಗೂ ನಿಮ್ಮ ಕುಟುಂಬಕ್ಕೆ ಆದ್ಯತೆ ಕೊಡಬೇಕಾಗುತ್ತದೆ,' ಎಂದರು.

ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!

'ಇಂಥ ಅಭೂತಪೂರ್ವ ಸಮಯದಲ್ಲಿ ನೀವು ಕುಟುಂಬದ ಕಡೆಗೆ ಹೆಚ್ಚು ಗಮನ ಕೊಡಬೇಕಿದೆ. ಟಿ20 ವಿಶ್ವಕಪ್ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿಲ್ಲ. ಇಲ್ಲೇ ನಡೆಯುತ್ತಿದ್ದರೆ ಆಡಿ ಗೆಲ್ಲುವ ಯೋಚನೆ ಇರುತ್ತಿತ್ತು. ಆದರೆ ಅದೀಗ ಮುಂದೂಡಲ್ಪಟ್ಟಿದೆ. ಭಾರತಕ್ಕೆ ಬಂದಾಗ ನಾನು ಅದರ ಬಗ್ಗೆ ಪುನರ್ವಿಮರ್ಶೆ ಮಾಡಬೇಕಾಗುತ್ತದೆ,' ಎಂದು ವಾರ್ನರ್ ಹೇಳಿದ್ದಾರೆ.

Story first published: Wednesday, July 29, 2020, 11:02 [IST]
Other articles published on Jul 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X