ಆತನಲ್ಲಿ ಆತ್ಮವಿಶ್ವಾಸ ತುಂಬಿದರೆ ಅಚ್ಚರಿಗಳನ್ನು ಸೃಷ್ಟಿಸಬಲ್ಲ: ಸಹ ಆಟಗಾರನ ಬಗ್ಗೆ ಪಂತ್ ಮಾತು

ಡೆಲ್ಲಿ ಕ್ಯಾಪಿಟಲ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಡೆಲ್ಲಿ 7 ವಿಕೆಟ್‌ಗಳಿಂದ ನಿರಾಯಾಸವಾಗಿ ಗೆದ್ದುಕೊಂಡಿತು. ಆರಂಭಿಕ ಆಟಗಾರ ಪೃಥ್ವಿ ಶಾ ನೀಡಿದ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ಇಲ್ಲ ಎಲ್ಲರ ಗಮನ ಸೆಳೆಯಿತು.

ಪೃಥ್ವಿ ಶಾ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 41 ಎಸೆತಗಳನ್ನು ಎದುರಿಸಿ 82 ರನ್‌ಗಳನ್ನು ಗಳಿಸಿ ಮಿಂಚಿದರು. ಈ ಮೂಲಕ ಮೊದಲ ವಿಕೆಟ್‌ಗೆ ಶಿಖರ್ ಧವನ್ ಜೊತೆಗೆ 142 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಈ ಪ್ರದರ್ಶನದಿಂದಾಗಿ 155 ರನ್‌ಗಳ ಗುರಿಯನ್ನು ಡೆಲ್ಲಿ ಇನ್ನೂ 21 ಎಸೆತಗಳು ಬಾಕಿಯಿರುವಂತೆ ಗೆದ್ದು ಬೀಗಿತ್ತು.

ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್, ಕೋಲ್ಕತ್ತಾ ವಿರುದ್ಧ ಡೆಲ್ಲಿಗೆ ಗೆಲುವುಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್, ಕೋಲ್ಕತ್ತಾ ವಿರುದ್ಧ ಡೆಲ್ಲಿಗೆ ಗೆಲುವು

ಸಹಜ ಆಟವಾಡಲು ಹೇಳಿದ್ದೆ

ಸಹಜ ಆಟವಾಡಲು ಹೇಳಿದ್ದೆ

ಪಂದ್ಯದ ಫಲಿತಾಂಶದ ನಂತರ ನಾಯಕ ರಿಷಭ್ ಪಂತ್ ಪೃಥ್ವಿ ಶಾ ಜೊತೆಗೆ ನಡೆಸಿದ ಸಂಭಾಷಣೆಯ ಬಗ್ಗೆ ಮಾತನಾಡಿದರು. ತಾನು ಪೃಥ್ವಿ ಶಾಗೆ ಆತನ ಸಹಜವಾದ ಆಟವನ್ನು ಆಡಲಷ್ಟೇ ಹೇಳಿದ್ದೆ. ಇಂತಾ ಪಂದ್ಯಗಳಲ್ಲಿ ನಾವು ರನ್‌ರೇಟ್ ಬಗ್ಗೆ ಯೋಚಿಸಲು ಶಕ್ತರಾಗುತ್ತೇವೆ" ಎಂದು ಪಂತ್ ಹೇಳಿದ್ದಾರೆ.

ಪೃಥ್ವಿ ಶಾಗೆ ಆತ್ಮವಿಶ್ವಾಸ ತುಂಬಿದರೆ ಸಾಕು

ಪೃಥ್ವಿ ಶಾಗೆ ಆತ್ಮವಿಶ್ವಾಸ ತುಂಬಿದರೆ ಸಾಕು

"ಯುವ ಆಟಗಾರರಿಗೆ ನಿಮ್ಮ ಆಟವನ್ನು ನೀವು ಆನಂದಿಸುತ್ತಾ ಸಾಗಿ ಎಂದಷ್ಟೇ ಹೇಳಬಹುದು. ಪೃಥ್ವಿ ಶಾಗೆ ಕೇವಲ ಆತ್ಮ ವಿಶ್ವಾಸವನ್ನು ತುಂಬಿದರೆ ಸಾಕು. ಆತ ನಿಜಕ್ಕೂ ಅದ್ಭುತಗಳನ್ನೇ ಸೃಷ್ಟಿಸಬಲ್ಲಂತಾ ಸಾಮರ್ಥ್ಯವನ್ನು ಹೊಂದಿದ್ದಾರೆ. ಅದಕ್ಕೆ ಕೆಕೆಆರ್ ವಿರುದ್ಧ ಶಾ ನೀಡಿದ ಪ್ರದರ್ಶನ ಸಾಕ್ಷಿ" ಎಂದು ರಿಷಭ್ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ.

ಎರಡನೇ ಸ್ಥಾನಕ್ಕೇರಿದ ಡೆಲ್ಲಿ

ಎರಡನೇ ಸ್ಥಾನಕ್ಕೇರಿದ ಡೆಲ್ಲಿ

ಕೆಕೆಆರ್ ವಿರುದ್ಧದ ಈ ಗೆಲುವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲೊ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮೂರನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, April 30, 2021, 8:44 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X