ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿಯೇ ಐಪಿಎಲ್‌ನ ಶ್ರೇಷ್ಠ ನಾಯಕ, ನಾನು ಸಿಎಸ್‌ಕೆ ಪರ ಆಡಬೇಕು ಎಂದ ಆರ್‌ಸಿಬಿಯ ಸ್ಟಾರ್ ಆಟಗಾರ!

Dhoni is the all time best captain and I would like to play for CSK in IPL says Harshal Patel

ಈ ಬಾರಿ ನಡೆಯಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನವೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟೂರ್ನಿಯ ಆರಂಭಕ್ಕೆ ಇನ್ನೂ ಮೂರ್ನಾಲ್ಕು ತಿಂಗಳು ಬಾಕಿ ಇರುವಾಗಲೇ ಟೂರ್ನಿಯ ಕುರಿತಾದ ಚರ್ಚೆಗಳು ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚಾಗುತ್ತಲೇ ಇವೆ.

ಅವರಿಬ್ಬರು ಜಗಳ ಬಿಟ್ಟು ಮಾತನಾಡಿ ಸರಿಪಡಿಸಿಕೊಳ್ಳಬೇಕಿದೆ ಎಂದು ಬುದ್ಧಿ ಹೇಳಿದ ಮಾಜಿ ಕ್ರಿಕೆಟಿಗಅವರಿಬ್ಬರು ಜಗಳ ಬಿಟ್ಟು ಮಾತನಾಡಿ ಸರಿಪಡಿಸಿಕೊಳ್ಳಬೇಕಿದೆ ಎಂದು ಬುದ್ಧಿ ಹೇಳಿದ ಮಾಜಿ ಕ್ರಿಕೆಟಿಗ

ಅದರಲ್ಲಿಯೂ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ನೂತನ ತಂಡಗಳಾದ ಲಕ್ನೋ ಸೂಪರ್ ಜಿಯಂಟ್ಸ್ ಮತ್ತು ಅಹ್ಮದಾಬಾದ್ ಸೇರ್ಪಡೆಯಾಗಿರುವುದು ಟೂರ್ನಿ ಮೇಲೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಾಗುವಂತೆ ಮಾಡಿದೆ. ಹೌದು, ಈ ಎರಡೂ ತಂಡಗಳ ಸೇರ್ಪಡೆಯಾಗಿರುವುದರಿಂದ ಈ ಬಾರಿಯ ಟೂರ್ನಿಯಲ್ಲಿ ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು, ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಫೆಬ್ರವರಿ 12 ಮತ್ತು 13ರಂದು ನಡೆಯಲಿದೆ.

ಯುವರಾಜ್ ಸಿಂಗ್ ದಂಪತಿ ಮುದ್ದು ಮಗುವಿಗೆ ತಂದೆ - ತಾಯಿಯಾದ ಖುಷಿ ಹಂಚಿಕೊಂಡಿದ್ದು ಹೀಗೆಯುವರಾಜ್ ಸಿಂಗ್ ದಂಪತಿ ಮುದ್ದು ಮಗುವಿಗೆ ತಂದೆ - ತಾಯಿಯಾದ ಖುಷಿ ಹಂಚಿಕೊಂಡಿದ್ದು ಹೀಗೆ

ನೂತನ ಫ್ರಾಂಚೈಸಿಗಳ ಸೇರ್ಪಡೆಯಿಂದ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಕಡ್ಡಾಯವಾಗಿ ನಡೆಯಬೇಕಿದ್ದು, ಈ ಸಲುವಾಗಿ ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳಿಗೆ ಬಿಸಿಸಿಐ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶವನ್ನು ನೀಡಿತ್ತು. ಬಿಸಿಸಿಐ ನಿಯಮದಂತೆ ತಮಗೆ ಬೇಕಾದ ಆಟಗಾರರನ್ನು ( ಗರಿಷ್ಠ 4 ) ಅಸ್ತಿತ್ವದಲ್ಲಿರುವ 8 ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡು, ಉಳಿದ ಆಟಗಾರರನ್ನು ತಂಡದಿಂದ ಕೈಬಿಟ್ಟಿವೆ. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ರಿಟೆನ್ಷನ್ ಪ್ರಕ್ರಿಯೆಯಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಈ ಮೂವರೂ ಆಟಗಾರರನ್ನು ರಿಟೈನ್ ಮಾಡಿಕೊಂಡು ಉಳಿದ ಆಟಗಾರರನ್ನು ತಂಡದಿಂದ ಕೈಬಿಟ್ಟಿತು.

ಸರಣಿ ಸೋಲು: ಬಲಿಷ್ಠ ಭಾರತ ದಿಢೀರನೆ ಕಳಪೆಯಾಗಲು ಹೇಗೆ ಸಾಧ್ಯ ಎಂದು ಕುಟುಕಿದ ರವಿಶಾಸ್ತ್ರಿಸರಣಿ ಸೋಲು: ಬಲಿಷ್ಠ ಭಾರತ ದಿಢೀರನೆ ಕಳಪೆಯಾಗಲು ಹೇಗೆ ಸಾಧ್ಯ ಎಂದು ಕುಟುಕಿದ ರವಿಶಾಸ್ತ್ರಿ

ಹೀಗೆ ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಿಟೈನ್ ಆಗದ ಆಟಗಾರರು ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು ಇದಕ್ಕೂ ಮುನ್ನ ತಾವು ಯಾವ ತಂಡದ ಪರ ಕಣಕ್ಕಿಳಿಯಲು ಇಚ್ಛಿಸುತ್ತಿದ್ದೇವೆ ಎಂಬುದನ್ನು ಕೆಲ ಆಟಗಾರರು ಹೇಳಿಕೊಂಡಿದ್ದಾರೆ. ಅದರಂತೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಿಂದ ರಿಟೈನ್ ಆಗದೆ ಹೊರಬಿದ್ದಿರುವ ಕಳೆದ ಬಾರಿಯ ಆವೃತ್ತಿಯ ಪರ್ಪಲ್ ಕ್ಯಾಪ್ ವಿಜೇತ ಹರ್ಷಲ್ ಪಟೇಲ್ ಕೂಡ ಮುಂಬರುವ ಮೆಗಾ ಹರಾಜಿನ ಕುರಿತು ಮಾತನಾಡಿದ್ದು, ತಾನು ಯಾವ ತಂಡದ ಪರ ಭಾಗವಹಿಸಲು ಇಚ್ಛೆ ಪಡುತ್ತೇನೆ ಎಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುವ ಆಸೆಯನ್ನು ವ್ಯಕ್ತಪಡಿಸಿದ ಹರ್ಷಲ್ ಪಟೇಲ್

ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುವ ಆಸೆಯನ್ನು ವ್ಯಕ್ತಪಡಿಸಿದ ಹರ್ಷಲ್ ಪಟೇಲ್

ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದು ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿ ಪರ್ಪಲ್ ಕ್ಯಾಪ್ ವಿಜೇತನಾಗಿ ಹೊರಹೊಮ್ಮಿದ್ದ ಹರ್ಷಲ್ ಪಟೇಲ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಲು ಹರ್ಷಲ್ ಪಟೇಲ್ ಇಚ್ಛಿಸಿದ್ದಾರೆ.

ಎಂಎಸ್ ಧೋನಿ ಸಾರ್ವಕಾಲಿಕ ಅತ್ಯುತ್ತಮ ನಾಯಕ

ಎಂಎಸ್ ಧೋನಿ ಸಾರ್ವಕಾಲಿಕ ಅತ್ಯುತ್ತಮ ನಾಯಕ

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿಯಬೇಕು ಎಂಬ ಆಸೆಯನ್ನು ವ್ಯಕ್ತ ಪಡಿಸಿರುವ ಹರ್ಷಲ್ ಪಟೇಲ್ ಎಂಎಸ್ ಧೋನಿ ಸಾರ್ವಕಾಲಿಕ ಅತ್ಯುತ್ತಮ ನಾಯಕ ಎಂದು ಹೊಗಳಿದ್ದಾರೆ. ಹಾಗೂ ಎಂ ಎಸ್ ಧೋನಿ ಕುರಿತು ತನ್ನ ಅಭಿಮಾನವನ್ನು ವ್ಯಕ್ತಪಡಿಸಿರುವ ಹರ್ಷಲ್ ಪಟೇಲ್ ಧೋನಿ ತನ್ನ ಕ್ರಿಕೆಟ್ ಜೀವನಕ್ಕೆ ಸ್ಫೂರ್ತಿ ಎಂದು ಹೇಳಿಕೆ ನೀಡಿದ್ದಾರೆ.

ಹರ್ಷಲ್ ಪಟೇಲ್ ಐಪಿಎಲ್ ಅಂಕಿ ಅಂಶ

ಹರ್ಷಲ್ ಪಟೇಲ್ ಐಪಿಎಲ್ ಅಂಕಿ ಅಂಶ

2012ರಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುತ್ತಾ ಬಂದಿರುವ ಹರ್ಷಲ್ ಪಟೇಲ್ ಇಲ್ಲಿಯವರೆಗೂ ಒಟ್ಟು 63 ಪಂದ್ಯಗಳಲ್ಲಿ ಕಣಕ್ಕಿಳಿದು 78 ವಿಕೆಟ್ ಪಡೆದಿದ್ದಾರೆ. ಅದರಲ್ಲಿಯೂ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಹರ್ಷಲ್ ಪಟೇಲ್ ವೃತ್ತಿಜೀವನದ ಶ್ರೇಷ್ಠ ಐಪಿಎಲ್ ಆವೃತ್ತಿಯಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆ ಆವೃತ್ತಿಯಲ್ಲಿ 15 ಪಂದ್ಯಗಳನ್ನಾಡಿ ಬರೋಬ್ಬರಿ 32 ವಿಕೆಟ್‍ಗಳನ್ನು ಪಡೆದು ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಡ್ವೇನ್ ಬ್ರಾವೋ ಜೊತೆಗೆ ಹಂಚಿಕೊಂಡಿದ್ದಾರೆ. ಹೀಗೆ ಕಳೆದ ಬಾರಿ ಸ್ಟಾರ್ ಆಟಗಾರನಾಗಿ ಮಿಂಚಿದ ಹರ್ಷಲ್ ಪಟೇಲ್ ತಾವು ಇಚ್ಛಿಸಿದಂತೆ ಈ ಬಾರಿಯ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ತೆಕ್ಕೆಗೆ ಬೀಳುತ್ತಾರಾ ಅಥವಾ ಇತರೆ ತಂಡದ ಪಾಲಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Shikhar Dhawan ಕೆನ್ನೆಗೆ ಹೊಡೆದು ಅವಮಾನ ಮಾಡಿದ್ದು ಯಾರು? | Oneindia Kannada

Story first published: Thursday, January 27, 2022, 13:42 [IST]
Other articles published on Jan 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X