ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ದಿನೇಶ್ ಮೋಂಗಿಯಾ

Dinesh Mongia announces all-format retirement

ನವದೆಹಲಿ, ಸೆಪ್ಟೆಂಬರ್ 18: ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಆಟಗಾರ, 2003ರ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದಿದ್ದ ಭಾರತ ತಂಡದ ಸದಸ್ಯ ದಿನೇಶ್ ಮೋಂಗಿಯಾ, ಬುಧವಾರ (ಸೆಪ್ಟೆಂಬರ್ 18) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

70ರ ಹರೆಯದ ಹಣ್ಣು ಮುದುಕನಿಗೆ ಪಿವಿ ಸಿಂಧು ವರಿಸುವಾಸೆಯಂತೆ!70ರ ಹರೆಯದ ಹಣ್ಣು ಮುದುಕನಿಗೆ ಪಿವಿ ಸಿಂಧು ವರಿಸುವಾಸೆಯಂತೆ!

ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್)ಗೆ ಸೇರಿ ಭಾರತದ ಕ್ರಿಕೆಟ್‌ ಬೋರ್ಡ್‌ನಿಂದ ನಿಷೇಧಕ್ಕೀಡಾಗುವುದಕ್ಕೂ ಮುನ್ನ 2007ರಲ್ಲಿ ಪಂಜಾಬ್‌ ಪರ ದಿನೇಶ್ ಮೋಂಗಿಯಾ ಕಡೇಯಸಾರಿ ಮೈದಾನಕ್ಕಿಳಿದಿದ್ದರು. 2007ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. ಮೋಂಗಿಯಾಗೀಗ 42ರ ಹರೆಯ.

ತನ್ನ 'ಕುಟುಂಬದ ರಹಸ್ಯ ದುರಂತ' ವರದಿಗೆ ಕಿಡಿ ಕಾರಿದ ಬೆನ್ ಸ್ಟೋಕ್ಸ್!ತನ್ನ 'ಕುಟುಂಬದ ರಹಸ್ಯ ದುರಂತ' ವರದಿಗೆ ಕಿಡಿ ಕಾರಿದ ಬೆನ್ ಸ್ಟೋಕ್ಸ್!

ಪಂಜಾಬ್ ತಂಡದ ಮೂಲಕ 1995-96ರಲ್ಲಿ ಪಾದಾರ್ಪಣೆ ಮಾಡಿದ್ದ ಮೋಂಗಿಯಾ 2001ರಲ್ಲಿ ಪುಣೆಯ ನೆಹರೂ ಸ್ಟೇಡಿಯಂನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಏಕದಿನದ ಮೂಲಕ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 51 ಏಕದಿನ ಇನ್ನಿಂಗ್ಸ್‌ಗಳಲ್ಲಿ ಮೋಂಗಿಯಾ 27.95ರ ಸರಾಸರಿಯಂತೆ 1230 ರನ್ ಗಳಿಸಿದ್ದಾರೆ. ಇದರಲ್ಲಿ 159 ಅತ್ಯಧಿಕ ರನ್‌ ಕೂಡ ಸೇರಿದೆ.

ಪಾಕ್ ಕ್ರಿಕೆಟ್‌ ತಂಡ ಬಲಿಷ್ಠಗೊಳಿಸಲು ಮಹತ್ವದ ನಿರ್ಧಾರ ಕೈಗೊಂಡ ಮಿಸ್ಬಾ!ಪಾಕ್ ಕ್ರಿಕೆಟ್‌ ತಂಡ ಬಲಿಷ್ಠಗೊಳಿಸಲು ಮಹತ್ವದ ನಿರ್ಧಾರ ಕೈಗೊಂಡ ಮಿಸ್ಬಾ!

ಏಕದಿನ ಬಿಟ್ಟರೆ ಒಂದು ಟಿ20ಐ ಪಂದ್ಯವನ್ನಾಡಿರುವ ಮೋಂಗಿಯಾ, 38 ರನ್‌ ಗಳಿಸಿದ್ದರು. ದಿನೇಶ್ ಒಂದೂ ಟೆಸ್ಟ್‌ ಪಂದ್ಯವನ್ನಾಡಿಲ್ಲ. ಆದರೆ ಪ್ರಥಮದರ್ಜೆ ಕ್ರಿಕೆಟ್‌ನ 121 ಪಂದ್ಯಗಳಲ್ಲಿ 21 ಶತಕಗಳನ್ನು ಬಾರಿಸಿದ್ದಾರೆ. ಮೋಂಗಿಯಾ ಇಂಗ್ಲಿಷ್ ಕೌಂಟಿ ಕ್ರಿಕೆಟ್‌ ತಂಡಗಳಾದ ಲಂಕಾಷೈರ್ ಮತ್ತು ಲೀಸೆಸ್ಟರ್ಶೈರ್ ಪರವೂ ಆಡಿದ್ದಾರೆ.

Story first published: Wednesday, September 18, 2019, 17:23 [IST]
Other articles published on Sep 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X