ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕ್ರೀಡಾಲೋಕದ ಇತಿಹಾಸದಲ್ಲಿ ದಾಖಲೆ ಬರೆದ ಐಪಿಎಲ್ ಉದ್ಘಾಟನಾ ಪಂದ್ಯ

Dream11 Ipl 2020 Opening Match 20 Crore People Tuned In To Watch The Match; Sets New Record

ಐಪಿಎಲ್ 2020 ಆವೃತ್ತಿಗೆ ಭಾರಿ ಸ್ಪಂದನೆ ದೊರೆಯುತ್ತಿದೆ. ಟೂರ್ನಿಯ ಆರಂಭದಿಂದಲೇ ರೋಚಕ ಹಣಾಹಣಿ ನಡೆಯುತ್ತಿದ್ದು ಪ್ರೇಕ್ಷಕರಿಗೆ ಭರಪೂರ ಮನರಂಜನೆ ದೊರೆಯುತ್ತಿದೆ. ಈ ಮಧ್ಯೆ ಐಪಿಎಲ್ 13ನೇ ಆವೃತ್ತಿಯ ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯ ಕ್ರಿಕೆಟ್ ಮಾತ್ರವಲ್ಲ ಎಲ್ಲಾ ಲೀಗ್‌ ಕ್ರೀಡೆಗಳ ದಾಖಲೆಯನ್ನು ಮುರಿದಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆಗಳೊಂದಿಗೆ ಈ ಬಾರಿಯ ಐಪಿಎಲ್ ನಡೆಯುತ್ತಿದೆ. ಪ್ರಮುಖವಾಗಿ ಈ ಬಾರಿಯ ಐಪಿಎಲ್ ಮೈದಾನದಲ್ಲಿ ಪ್ರೇಕ್ಷಕರೇ ಇಲ್ಲದೆ ಏರ್ಪಡಿಸಲಾಗಿದೆ. ಅಬಿಮಾನಿಗಳು ತಮ್ಮ ತಮ್ಮ ಮನೆಗಳಲ್ಲೇ ಟಿವಿ ಹಾಗೂ ಆನ್‌ಲೈನ್ ಮೂಲಕ ಐಪಿಎಲ್ ವೀಕ್ಷಣೆಯನ್ನು ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ಕ್ರೀಡಾ ಇತಿಹಾಸದಲ್ಲಿ ದಾಖಲೆಯನ್ನು ಬರೆದಿದೆ.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ಉದ್ಘಾಟನಾ ಪಂದ್ಯ ವೀಕ್ಷಿಸಿದ ಸಂಖ್ಯೆ 20 ಕೋಟಿ

ಉದ್ಘಾಟನಾ ಪಂದ್ಯ ವೀಕ್ಷಿಸಿದ ಸಂಖ್ಯೆ 20 ಕೋಟಿ

ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯದ ಬಗೆಗಿನ ಮುಖ್ಯವಾದ ಅಂಕಿಅಂಶಗಳನ್ನು ಮುಂದಿಟ್ಟಿದ್ದಾರೆ. 'ಬ್ರಾಡ್‌ಕಾಸ್ಟ್ ಆಡಿಯೆನ್ಸ್ ರಿಸರ್ಚ್ ಕೌನ್ಸಿಲ್‌'ನ ಸರ್ವೆಯನ್ನು ಉಲ್ಲೇಖಿಸಿರುವ ಜಯ್ ಶಾ ಮೊದಲ ಪಂದ್ಯವನ್ನು 20 ಕೋಟಿ ಜನರು ವೀಕ್ಷಿಸಿದ್ದಾರೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಎಲ್ಲಾ ಕ್ರೀಡೆಗಳ ಲೀಗ್‌ಗಳಲ್ಲೇ ಅಧಿಕ

ಎಲ್ಲಾ ಕ್ರೀಡೆಗಳ ಲೀಗ್‌ಗಳಲ್ಲೇ ಅಧಿಕ

ಜಗತ್ತಿನ ಎಲ್ಲಾ ದೇಶಗಳ ಯಾವುದೇ ಮಾದರಿಯ ಕ್ರೀಡೆಗಳ ಲೀಗ್ ಇತಿಹಾಸದ ಉದ್ಘಾಟನಾ ಪಂದ್ಯಗಳಲ್ಲಿ ಐಪಿಎಲ್ ದಾಖಲೆಯನ್ನು ಬರೆದಿದೆ ಎಂದು ಜಯ್ ಶಾ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯವನ್ನು ಎಲ್ಲಾ ಲೀಗ್‌ ಟೂರ್ನಿಗಳ ಉದ್ಘಾಟನಾ ಪಂದ್ಯಕ್ಕೆ ಹೋಲಿಸಿದರೆ ಅತಿ ಹೆಚ್ಚಿನ ವೀಕ್ಷಣೆಯಾಗಿದೆ ಎಂಬ ಮಾಹಿತಿಯನ್ನು ಜಯ್ ಶಾ ನೀಡಿದ್ದಾರೆ.

ಮೈದಾನಕ್ಕೆ ಪ್ರೇಕ್ಷಕರಿಗೆ ನಿರ್ಬಂಧ

ಮೈದಾನಕ್ಕೆ ಪ್ರೇಕ್ಷಕರಿಗೆ ನಿರ್ಬಂಧ

ಈ ಬಾರಿಯ ಐಪಿಎಲ್ ಹಿಂದಿಗಿಂತ ವಿಭಿನ್ನವಾಗಿ ನಡೆಯುತ್ತಿದೆ. ಕಿಕ್ಕಿರಿದ ಅಭಿಮಾನಿಗಳ ಅಬ್ಬರದ ಮಧ್ಯೆ ಅದ್ಧೂರಿಯಾಗಿ ನಡೆಯುತ್ತಿದ್ದ ಐಪಿಎಲ್ ಈ ಬಾರಿ ಪ್ರೇಕ್ಷಕರು ಇಲ್ಲದೆ ನಡೆಯುತ್ತಿದೆ. ಕೊರೊನಾ ವೈರಸ್ ಕಾರಣದಿಂದಾಗಿ ಈ ಮುನ್ನೆಚ್ಚರಿಕೆಯನ್ನು ವಹಿಸಿಕೊಂಡು ಐಪಿಎಲ್ ಆಯೋಜನೆ ಮಾಡಲಾಗುತ್ತಿದೆ.

ಪ್ರತಿ ಪಂದ್ಯವೂ ರೋಚಕ

ಪ್ರತಿ ಪಂದ್ಯವೂ ರೋಚಕ

ಕೊರೊನಾ ವೈರಸ್‌ನ ಭೀತಿಯಿಂದಾಗಿ ಈ ಬಾರಿಯ ಐಪಿಎಲ್ ಭಾರತದಲ್ಲಿ ನಡೆಯದೆ ಯುಎಇಗೆ ಸ್ಥಳಾಂತರವಾಗಿದೆ. ಆಟಗಾರರು ಬಯೋ ಬಬಲ್‌ನಂತಾ ಹಲವಾರು ನಿರ್ಬಂಧಗಳನ್ನು ಹೊಂದಿದ್ದಾರೆ. ಹಾಗಿದ್ದರೂ ಈ ಬಾರಿಯ ಐಪಿಎಲ್‌ನ ಮನರಂಜನೆಗೇನೂ ಕಡಿಮೆಯಾಗಿಲ್ಲ. ಐಪಿಎಲ್‌ನ ಈವರೆಗಿನ ಎಲ್ಲಾ ಪಂದ್ಯಗಳು ಸಾಕಷ್ಟು ರೋಚಕತೆಯ ಅನುಭವವನ್ನು ವೀಕ್ಷಕರಿಗೆ ನೀಡಿದೆ. ಹೀಗಾಗಿ ಮನೆಯಲ್ಲೇ ಕುಳಿತು ಅಭಿಮಾನಿಗಳು ಐಪಿಎಲ್ ಪಂದ್ಯಗಳನ್ನು ಆಸ್ವಾದಿಸುತ್ತಿದ್ದಾರೆ.

Story first published: Tuesday, October 6, 2020, 15:51 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X